ಆರೋಗ್ಯ:
* 100 ಸಮುದಾಯ ಆರೋಗ್ಯ ಕೇಂದ್ರಗಳ ಅಭಿವೃದ್ಧಿ ; ರಾಜ್ಯದ 45 ತಾಲೂಕು ಆಸ್ಪತ್ರೆಗಳಲ್ಲಿ ಜಯದೇವ ಹೃದ್ರೋಗ ಸಂಸ್ಥೆ ಸಹಯೋಗದಲ್ಲಿ ಹೃದ್ರೋಗ ಸಮಸ್ಯೆ ಚಿಕಿತ್ಸೆ.
* ನಗರ ಪ್ರದೇಶಗಳಲ್ಲಿ 438 ‘ನಮ್ಮ ಕ್ಲಿನಿಕ್ ‘ಗಳ ಸ್ಥಾಪನೆ.
* ತಾಲೂಕು ಆಸ್ಪತ್ರೆಗಳಿಲ್ಲದ ತಾಲೂಕುಗಳ ಸಮುದಾಯ ಆರೋಗ್ಯ ಕೇಂದ್ರಗಳ ಹಾಸಿಗೆ ಸಾಮರ್ಥ್ಯ ಏರಿಕೆ .
* ಹಾವೇರಿ ಜಿಲ್ಲೆ ಸವಣೂರಿನಲ್ಲಿ ಹೊಸದಾಗಿ ತಾಯಿ-ಮಕ್ಕಳ ಆಸ್ಪತ್ರೆ ಸ್ಥಾಪನೆ.
* ಹೊಸದಾಗಿ 165 ಕೋಟಿ ರೂ. ವೆಚ್ಚದಲ್ಲಿ 10 ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆರಂಭಿಸಿಲು ಕ್ರಮ .
* ‘ಆಯುಷ್ಮಾನ್ ಭಾರತ್ ‘ ಆರೋಗ್ಯ ಕರ್ನಾಟಕ ಯೋಜನೆಗೆ ಹೆಚ್ಚಿನ ಖಾಸಗಿ ಆಸ್ಪತ್ರಗೆಳ ಸೇರ್ಪಡೆಗೆ ಕ್ರಮ .
* ‘ಮನೆ- ಮನೆಗೆ ಆರೋಗ್ಯ’ ಕಾರ್ಯಕ್ರಮದಡಿ 2023-24ನೇ ಸಾಲಿನಲ್ಲಿ ಹಳ್ಳಿಗಳಲ್ಲಿ 2 ಬಾರಿ ಆರೋಗ್ಯ ಶಿಬಿರಗಳ ಆಯೋಜನೆ. * ರಾಜ್ಯಾದ್ಯಂತ ಜನೌಷಧಿ ಕೇಂದ್ರಗಳ ಹೆಚ್ಚಳಕ್ಕೆ ಕ್ರಮ .
* ಮೆದುಳು ಆರೋಗ್ಯ ಯೋಜನೆ ಇಡೀ ರಾಜ್ಯಕ್ಕೆ ವಿಸ್ತರಣೆ.
* ಕ್ಯಾನ್ಸರ್ ಪತ್ತೆಗೆ ಹೊಸ ‘ಜೀವಸುಧೆ’ ಶಿಬಿರ ಆಯೋಜನೆ; ಸಾಧನಗಳ ಖರೀದಿಗೆ 12 ಕೋಟಿ ರೂ. ಅನುದಾನ.
* ಉಚಿತ ಡಯಾಲಿಸಸ್ ಸೇವೆ ಪ್ರಸಕ್ತ ಸಾಲಿನಲ್ಲಿ 1 ಲಕ್ಷ ಡಯಾಲಿಸಸ್ ಸೈಕಲ್ ಗಳಿಗೆ ಏರಿಕೆ.
* ಗ್ರಾಮೀಣ ಭಾಗದಲ್ಲಿ ವರ್ಷಕ್ಕೆರಡು ಬಾರಿ ನವಜಾತ ಶಿಶು ಮತ್ತು 6 ವರ್ಷದೊಳಗಿನ ಮಕ್ಕಳ ಆರೋಗ್ಯ ತಪಾಸಣೆಗೆ ವಾತ್ಸಲ್ಯ ಯೋಜನೆ.
* ತಾಲೂಕು ಆಸ್ಪತ್ರೆಗಳಲ್ಲಿ ಹೆರಿಗೆ ಆದ ತಾಯಂದಿರು, ನವಜಾತ ಶಿಶುಗಳನ್ನು ಮನೆಗೆ ತಲುಪಿಸಲು ‘ನಗು -ಮಗು’ ವಾಹನಗಳ ಆರಂಭ .

* ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾ ಪ್ರಯೋಗಾಲಯ, 129 ತಾಲೂಕು ಗಳಲ್ಲಿ ಪ್ರಯೋಗಾಲಯ ಹಾಗೂ ಬೆಂಗಳೂರಿನಲ್ಲಿ ರಾಜ್ಯ ರೆಫೆರಲ್ ಪ್ರಯೋಗಾಲಯ ಸ್ಥಾಪನೆ.
* ಆರೋಗ್ಯ ಇಲಾಖೆಯ ಸೇವೆಗಳ ಎಲ್ಲಾ ಯೋಜನೆಗಳ ಡಿಜಿಟಲೀಕರಣ.
* ಅಭಿವೃದ್ಧಿ ಆಕಾಂಕ್ಷಿ ತಾಲೂಕುಗಳಲ್ಲಿ 720 ಕೋಟಿ ರೂ. ವಚ್ಚದಲ್ಲಿ ವಿವಿಧ ಕ್ರಮ.
* ಚಿತ್ರದುರ್ಗದಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಕ್ರಮ.
* ಮೈಸೂರು , ಶಿವಮೊಗ್ಗ , ಕಲಬುರಗಿ ಗಳಲ್ಲಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಸ್ಥಾಪನೆ.
* ರಾಯಚೂರಿನಲ್ಲಿ ಏಮ್ಸ್ ಮಾದರಿಯ ಆಸ್ಪತ್ರೆ, ಕುಮುಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ.
* ಬೆಂಗಳೂರು, ಹುಬ್ಬಳ್ಳಿ, ಮೈಸೂರು ಮತ್ತು ಕಲಬುರಗಿಯ 4 ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಐ ವಿ ಎಫ್. ಕ್ಲಿನಿಕ್ ಗಳ ಸ್ಥಾಪನೆ.
* ನಿಮ್ಹಾನ್ಸ್ ನಲ್ಲಿ ಅಂಗಾಂಗ ಜೋಡಣೆಗೆ ಮೀಸಲಾದ ದೇಶದ ಪ್ರಥಮ ಸಾರ್ವಜನಿಕ ಆಸ್ಪತ್ರೆಗೆ ಕ್ರಮ .
ಗ್ರಾಮೀಣಾಭಿವೃದ್ಧಿ :
* ಜಲಜೀವನ್ ಮಿಷನ್ ಪ್ರಸಕ್ತ ವರ್ಷ 6, 234 ಕೋಟಿ ರೂ. ಅನುದಾನ.
* ಮನ್ರೇಗಾ ಯೋಜನೆಯಡಿ 2023-24ನೇ ಸಾಲಿನಲ್ಲಿ 1,800 ಕೋಟಿ ರೂ. ವೆಚ್ಚದಲ್ಲಿ 88 ಲಕ್ಷ ಜನರಿಗೆ ಉದ್ಯೋಗ.
* 2023-24ನೇ ಸಾಲಿನಲ್ಲಿ ಪ್ರತಿ ಗ್ರಾಮಪಂಚಾಯಿತಿಗೆ ನೀಡಲಾಗುವ ಅನುದಾನ 60 ಲಕ್ಷ ರೂ.ಗೆ ಏರಿಕೆ.
* ಗ್ರಾಮೀಣ ಬಾಗದ 5 ಕಿಲೋಮೀಟರ್ ರಸ್ತೆ ಅಭಿವೃದ್ಧಿಗೆ 300 ಕೋಟಿ ರೂ. ವೆಚ್ಚ
* ಗ್ರಾಮೀಣ ಪ್ರದೇಶದಲ್ಲಿ ಚರಂಡಿ ವ್ಯವಸ್ಥೆ ಸುಧಾರಿಸಲು 4,190 ಕೋಟಿ. ರೂ. ವೆಚ್ಚ
* ಪ್ರತಿ ವರ್ಷ 200 ಕೋಟಿ ರೂ. ವೆಚ್ಚದಲ್ಲಿ 2000 ಕೆರೆಗಳ ಅಭಿವೃದ್ಧಿ.
* ವರ್ಷಾಂತ್ಯಕ್ಕೆ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆ
* ಪ್ರಸಕ್ತ ವರ್ಷ 330 ಗ್ರಾಮ ಪಂಚಾಯಿತಿಗಳಲ್ಲಿ ಗ್ರಂಥಾಲಯ ಸ್ಥಾಪನೆ
* ಗ್ರಾಮ ಪಂಚಾಯಿತಿಗಳಲ್ಲಿ ಆಡಳಿತ ವ್ಯವಸ್ಥೆ ಸುಧಾರಣೆಗೆ ಪಂಚತಂತ್ರ-2.0 ತಂತ್ರಾಂಶ ಬಳಕೆ