- ಇಂದು ರಾಷ್ಟ್ರೀಯ ಮತದಾರರ ದಿನ. ಪ್ರತಿ ವರ್ಷ ಜನವರಿ 25 ಅನ್ನು ರಾಷ್ಟ್ರೀಯ ಮತದಾರರ ದಿನವೆಂದು ಆಚರಿಸಲಾಗುತ್ತದೆ. 1950 ಜನವರಿ 25ರಂದು ಚುನಾವಣಾ ಆಯೋಗವನ್ನು ರಚಿಸಲಾಯಿತು. ಇದರ ನೆನಪಿನಲ್ಲಿ 2011ರಿಂದ ಇದನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಮತದಾದ ಬಗ್ಗೆ ಜಾಗೃತಿ ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
- “ದೆಹಲಿ ಸರ್ಕಾರದ ಪ್ರತಿಯೊಂದು ಕಚೇರಿಯಲ್ಲಿ ಬಿಆರ್ ಅಂಬೇಡ್ಕರ್ ಮತ್ತು ಭಗತ್ ಸಿಂಗ್ ಅವರ ಫೋಟೋಗಳು ಇರುತ್ತವೆ ಎಂದು ಇಂದು ನಾನು ಘೋಷಿಸುತ್ತೇನೆ. ಈಗ ನಾವು ಯಾವುದೇ ಮುಖ್ಯಮಂತ್ರಿ ಅಥವಾ ರಾಜಕಾರಣಿಗಳ ಫೋಟೋಗಳನ್ನು ಹಾಕುವುದಿಲ್ಲ”: ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕಾರ್ಯಕ್ರಮವೊಂದರಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್
- ಇಂದು ರಾಷ್ಟ್ರೀಯ ಪ್ರವಾಸೋದ್ಯಮ ದಿನ. ದೇಶದ ಆರ್ಥಿಕತೆಗೆ ಪ್ರವಾಸೋದ್ಯಮದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಭಾರತ ಸರ್ಕಾರವು ಜನವರಿ 25ರಂದು ರಾಷ್ಟ್ರೀಯ ಪ್ರವಾಸೋದ್ಯಮ ದಿನವನ್ನಾಗಿ ಆಚರಿಸುತ್ತದೆ.
- ಬೆಂಗಳೂರು: ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ವಿಶೇಷ ಕಾರ್ಯಕ್ರಮ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
- ಮಹಾರಾಷ್ಟ್ರ: ಸೋಮವಾರ (ಜನವರಿ 24) ರಾತ್ರಿ 11.30 ರ ಸುಮಾರಿಗೆ ಸೆಲ್ಸುರಾ ಬಳಿ ಸೇತುವೆಯಿಂದ ಕಾರು ಬಿದ್ದು ತಿರೋರಾ ಕ್ಷೇತ್ರದ ಬಿಜೆಪಿ ಶಾಸಕ ವಿಜಯ್ ರಹಂಗ್‌ಡೇಲ್ ಅವರ ಪುತ್ರ ಆವಿಷ್ಕರ್ ರಹಂಗ್‌ಡೇಲ್ ಸೇರಿದಂತೆ 7 ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.
- ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಮನಸುಖ್ ಮಾಂಡವಿಯಾ ಅವರು ಇಂದು 9 ರಾಜ್ಯಗಳು, “ಯುಟಿ” ಗಳ ಆರೋಗ್ಯ ಮಂತ್ರಿಗಳೊಂದಿಗೆ ಕೋವಿಡ್ ಪರಿಸ್ಥಿತಿ ಕುರಿತು ಸಭೆ ನಡೆಸಲಿದ್ದಾರೆ
ಮ್ಹಾರ್ನೀಂಗ್ ಬ್ರೀಫ್ !
RELATED ARTICLES