ಸಧ್ಯದ ಸಂಕ್ಷಿಪ್ತ ಸುದ್ದಿ – ಸಾರಿಗೆ :
*ದೆಹಲಿಯಲ್ಲಿ ಕೇಂದ್ರ ಸಾರಿಗೆ ಸಚಿವರಿಂದ ಪುಸ್ತಕ ಬಿಡುಗಡೆ.
*ವರ್ಚ್ಯವಲ್ ಮೀಟೀಂಗ್ ನಲ್ಲಿ ಲಕ್ಷ್ಮಣ ಸವದಿ ಭಾಗಿ.
ಬೆಂಗಳೂರು: ಸಾರಿಗೆ ವ್ಯವಸ್ಥೆಯಲ್ಲಿ ತಂತ್ರಜ್ಞಾನ ಅಳವಡಿಕೆ ಕುರಿತು ʻ ಇಂಟೆಲ್ ʼ ಸಂಸ್ಥೆಯವರು ಸಂಶೋಧಿಸಿ ಪ್ರಕಟಿಸಿದ ಪುಸ್ತಕವನ್ನು ನವದೆಹಲಿಯಲ್ಲಿ ಮಾನ್ಯ ಕೇಂದ್ರ ಸಾರಿಗೆ ಸಚಿವರಾದ ನಿತೀನ್ ಗಡ್ಕರಿ ಅವರು ಬಿಡುಗಡೆ ಮಾಡಿದರು.


ಇದೇ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಇಂದು ಸಂಜೆ 6:30ಕ್ಕೆ ನಡೆದ ವರ್ಚುವಲ್ ಮೀಟಿಂಗನಲ್ಲಿ ಭಾಗವಹಿಸಿದ ಮಾನ್ಯ ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಎಸ್. ಸವದಿ ಅವರು ಮಾನ್ಯ ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ಅವರೊಂದಿಗೆ ಆ ಕೃತಿಯನ್ನು ಬಿಡುಗಡೆಗೊಳಿಸಿದರು.
