ಸಂಕ್ಷಿಪ್ತ ಸುದ್ದಿ:
ಬೆಂಗಳೂರು: ಯಲಚೇನಹಳ್ಳಿಯಿಂದ ರೇಷ್ಮೆ ಸಂಸ್ಥೆಯವರೆಗಿನ 6 ಕಿ.ಮೀ. ಹಸಿರು ಮಾರ್ಗದ “ನಮ್ಮ ಮೆಟ್ರೋ” ರೈಲು ಸಂಚಾರಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಭಾರತದ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವರಾದ ಹರ್ದೀಪ್ ಸಿಂಗ್ ಪುರಿ ಅವರು ಕೂಡಾ ವರ್ಚುವಲ್ ವೇದಿಕೆ ಮುಖಾಂತರ ಮಾರ್ಗಕ್ಕೆ ಹಸಿರು ನಿಶಾನೆ ತೋರಿದರು.


ಈ ಸಂದರ್ಭದಲ್ಲಿ ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವರಾದ ಡಿ ವಿ ಸದಾನಂದಗೌಡ, ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಸಚಿವರುಗಳಾದ ಆರ್ ಅಶೋಕ್, ಎಸ್ ಸುರೇಶ್ ಕುಮಾರ್, ಬಿ ಬಸವರಾಜ್

ಬಿಡಿಎ ಅಧ್ಯಕ್ಷರಾದ ಹಾಗೂ ಯಲಹಂಕ ಶಾಸಕರಾದ ಎಸ್ ಆರ್ ವಿಶ್ವನಾಥ, ಸಂಸದರಾದ ಪಿ ಸಿ ಮೋಹನ್ ಹಾಗೂ ಇನ್ನೀತರ ಗಣ್ಯಮಾನ್ಯರು ಇಲಾಖಾ ಸಂಬಂಧಿತ ಅಧಿಕಾರಿಗಳು ಉಪಸ್ಥಿತರಿದ್ದರು.
