ಬೆಂಗಳೂರು: ಡಾ. ಬಿ.ಆರ್ ಅಂಬೇಡ್ಕರ್ ಅವರ 130 ನೇ ಜಯಂತಿಯ ಅಂಗವಾಗಿ ಕೆ ಪಿ ಸಿ ಸಿ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಕಾಂಗ್ರೆಸ್ಸಿನ ಪ್ರಮುಖರು ಪುಷ್ಪ ನಮನದೊಂದಿಗೆ ಗೌರವವನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ಡಾ। ಎಲ್ ಹನುಮಂತಯ್ಯ, ಮಾಜಿ ಸಚಿವರಾದ ಎಚ್ ಆಂಜನೇಯ, ಮೋಟಮ್ಮ, ನರೇಂದ್ರಸ್ವಾಮಿ, ಕೆಪಿಸಿಸಿ ಮಾಧ್ಯಮ ವಿಭಾಗದ ಉಪ ಮುಖ್ಯಸ್ಥ ವಿ.ಆರ್ ಸುದರ್ಶನ್ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.
“ಅಸ್ಪೃಶ್ಯತೆಯ ನಿವಾರಣೆಗಾಗಿ, ಸಮ ಸಮಾಜ ನಿರ್ಮಾಣಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ, ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವಾದ ಭಾರತದ ಘನ ಸಂವಿಧಾನವನ್ನು ರಚಿಸಿದ, ಸಂವಿಧಾನ ಶಿಲ್ಪಿ, ಶೋಷಿತರ ಶಾಶ್ವತ ಧ್ವನಿ ಮಹಾನ್ ಮಾನವತಾವಾದಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಜಯಂತಿಯಂದು ಅವರನ್ನು ಗೌರವ, ಕೃತಜ್ಞತಾ ಪೂರ್ವಕವಾಗಿ ನೆನೆಯುತ್ತೇವೆ.”_ ಶ್ರೀ ಡಿ ಕೆ ಶಿವಕುಮಾರ, ಕೆ ಪಿ ಸಿ ಸಿ ಅಧ್ಯಕ್ಷರು.