ನ್ಯೂಸ್ ಲೈನ್ !
ಬಳ್ಳಾರಿ: ಉಕ್ರೇನ್ ನಿಂದ ಸುರಕ್ಷಿತವಾಗಿ ಆಗಮಿಸಿದ ವಿದ್ಯಾರ್ಥಿಗಳಾದ ತಯ್ಯಬ್ ಕೌಸರ್, ಸಭಾ ಕೌಸರ್, ಮುಲ್ಲಾ ಮಹಮ್ಮದ್ ಶಕೀಬುದ್ದಿನ್, ಬೆಳ್ಳಾರಿ ಸೊಲೊಮನ್ ಹೃಷಿಕೇಶ್ ಅವರನ್ನು ಕೌಲ್ ಬಜಾರ್ ನ ಬೆಳಗಲ್ ಕ್ರಾಸ್ ಹತ್ತಿದ ನಿವಾಸದಲ್ಲಿ ಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ ಶ್ರೀರಾಮುಲು ಅವರು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು. ” ಮಿಷನ್ ಗಂಗಾ” ಕಾರ್ಯಾಚರಣೆ ಮೂಲಕ ಉಕ್ರೇನ್ ನಿಂದ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.
