Wednesday, February 19, 2025
Homeಅಂತರಾಷ್ಟ್ರೀಯರಾಷ್ಟ್ರೀಯ ಸುದ್ದಿಪ್ರಮುಖ ರಾಷ್ಟ್ರೀಯ ಸುದ್ದಿಗಳು

ಪ್ರಮುಖ ರಾಷ್ಟ್ರೀಯ ಸುದ್ದಿಗಳು

  • ಮುಂಬೈ | ಇಂದು ಮಧ್ಯಾಹ್ನ 1 ಗಂಟೆಗೆ ಮಹಾರಾಷ್ಟ್ರ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಮತ್ತು ಡಿಜಿಪಿ ರಜನೀಶ್ ಸೇಠ್ ನಡುವೆ ಸಭೆ ನಡೆಯಲಿದ್ದು, ಸಂಜೆ 4 ಗಂಟೆಗೆ ಸಂಪುಟ ಸಭೆ ನಡೆಯಲಿದೆ. ಅವರು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯ ಸಮಸ್ಯೆಯನ್ನು ಚರ್ಚಿಸುವ ನಿರೀಕ್ಷೆಯಿದೆ.source:ANI
  • ಶೀಘ್ರದಲ್ಲೇ, ಆಯುಷ್ ಚಿಕಿತ್ಸೆಯ ಲಾಭ ಪಡೆಯಲು ಭಾರತಕ್ಕೆ ಬರಲು ಬಯಸುವ ವಿದೇಶಿ ಪ್ರಜೆಗಳಿಗಾಗಿ ಭಾರತವು ವಿಶೇಷ ಆಯುಷ್ ವೀಸಾ ವರ್ಗವನ್ನು ಪರಿಚಯಿಸಲಿದೆ: ಪ್ರಧಾನಿ ಮೋದಿ, ಗುಜರಾತ್‌ನ ಗಾಂಧಿನಗರದಲ್ಲಿ
  • ಇನ್ನು ಮುಂದೆ ಗ್ರಾಮಸ್ಥರು ತಮ್ಮ ಗ್ರಾಮ ಪಂಚಾತಿಗಳಲ್ಲೇ ವಿವಾಹ ನೋಂದಣಿ ಮಾಡಿಕೊಳ್ಳಬಹುದು. ಈ ಕುರಿತು ಕರ್ನಾಟಕ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ವಿವಾಹ ನೋಂದಣಿ ಸೇವೆ ಲಭ್ಯವಿದ್ದು, ಪಿ.ಡಿ.ಒ.ಗಳಿಗೆ ವಿವಾಹ ನೋಂದಣಿ ಪ್ರಮಾಣ ಪತ್ರ ನೀಡುವ ಅಧಿಕಾರ ನೀಡಲಾಗಿದೆ
  • ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 324.07 ಪಾಯಿಂಟ್‌ಗಳಿಂದ 56,787.22 ಪಾಯಿಂಟ್‌ಗಳಿಗೆ ಜಿಗಿದಿದೆ; ನಿಫ್ಟಿ 94.9 ಅಂಕಗಳ ಏರಿಕೆಯೊಂದಿಗೆ 17,053.55 ಅಂಕಗಳಿಗೆ ತಲುಪಿದೆ.
  • ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 19 ಪೈಸೆ ಏರಿಕೆಯಾಗಿ 76.31ಕ್ಕೆ ತಲುಪಿದೆ
  • ಆರ್ ಸಿಬಿಯ ಗೆಲುವಿನ ನಾಗಲೋಟ ಸತತ ಗೆಲುವಿನಿಂದ ಪಾಯಿಂಟ್ಸ್ ಪಟ್ಟಿಯಲ್ಲಿ 2 ನೇ ಸ್ಥಾನಕ್ಕೇರಿದ RCB ತಂಡ.
ಜಾಹೀರಾತು
  • ನಾಗರಿಕ ಸೇವಾ ದಿನದ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2022ರ ಏಪ್ರಿಲ್ 21 ರಂದು ಬೆಳಗ್ಗೆ 11 ಗಂಟೆಗೆ ನವದೆಹಲಿಯ ವಿಜ್ಞಾನ ಭವನದಲ್ಲಿ ಸಾರ್ವಜನಿಕ ಆಡಳಿತದಲ್ಲಿ ಶ್ರೇಷ್ಠ ಸಾಧನೆಗಾಗಿ ಪ್ರಧಾನಮಂತ್ರಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಅವರು ನಾಗರಿಕ ಸೇವಾ ಅಧಿಕಾರಿಗಳನ್ನು ಉದ್ದೇಶಿಸಿ ಭಾಷಣ ಮಾಡುವರು. ಸಾಮಾನ್ಯ ಪ್ರಜೆಗಳ ಕಲ್ಯಾಣಕ್ಕಾಗಿ ಜಿಲ್ಲೆಗಳು/ಅನುಷ್ಠಾನ ಘಟಕಗಳು ಮತ್ತು ಕೇಂದ್ರ/ರಾಜ್ಯ ಸರ್ಕಾರಿ ಸಂಸ್ಥೆಗಳು ಮಾಡಿದ ಅಸಾಧಾರಣ ಮತ್ತು ನವೀನ ಕಾರ್ಯಗಳನ್ನು ಗುರುತಿಸುವ ದೃಷ್ಟಿಯಿಂದ ಸಾರ್ವಜನಿಕ ಆಡಳಿತದಲ್ಲಿ ಶ್ರೇಷ್ಠತೆ ಕುರಿತ ಪ್ರಧಾನಮಂತ್ರಿ ಪ್ರಶಸ್ತಿಗಳನ್ನು ಸ್ಥಾಪಿಸಲಾಗಿದೆ. ಗುರುತಿಸಲಾದ ಆದ್ಯತೆಯ ಕಾರ್ಯಕ್ರಮಗಳು ಮತ್ತು ನವೀನ ವಿಧಾನಗಳ ಮೂಲಕ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಕೆಲಸ ಮಾಡಿದವರಿಗೆ ಪ್ರಶಸ್ತಿ ನೀಡಲಾಗುವುದು._ಪ್ರಧಾನಮಂತ್ರಿಯವರ ಕಛೇರಿ
  • “ಆಯವ್ಯಯ – 2022-23 ರಲ್ಲಿ ಘೋಷಿಸಿದಂತೆ ರಾಜ್ಯದಿಂದ ಕಾಶಿ ಯಾತ್ರೆ ಕೈಗೊಳ್ಳುವ 3000 ಯಾತ್ರಿಗಳಿಗೆ ತಲಾ 5000 ರೂ. ಸಹಾಯ ಧನ ನೀಡಲು ತಾತ್ವಿಕ ಅನುಮೋದನೆ ನೀಡಿ ರಾಜ್ಯ ಸರ್ಕಾರ ಆದೇಶಿಸಿದೆ” :ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.
  • ಬಿಜ್‌  ವಿಶ್ಲೇಷಕರ ಪ್ರಕಾರ ಭಾರತದಲ್ಲಿ ಹಿಂದಿ ಆವೃತ್ತಿಯ KGF2, ಬಿಡುಗಡೆಯ ಏಳನೇ ದಿನವಾದ ಬುಧವಾರದಂದು ಒಟ್ಟು 250 ಕೋಟಿ ರೂ. ದಾಟಲಿದೆ ಎಂದು ಅಂದಾಜಿಸಿದ್ದಾರೆ.
Banner

Proprietor
Proprietorhttps://skynews-lgs.com/
Proprietor / Editor In Chief - Sky News-Read The World Today. URN-KR230001579 AIMASS ID No-571 KARNATAKA
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news