- ಇಂದಿನ ಕೋವಿಡ್-19 ವಿವರಗಳು:-
ಹೊಸ ಪ್ರಕರಣ : 1606
ಇಂದು ಚೇತರಿಸಿಕೊಂಡವರು: 1937
ಒಟ್ಟು ಸಕ್ರಿಯ ಪ್ರಕರಣ : 23057
ಇಂದಿನ ಸಾವಿನ ಸಂಖ್ಯೆ ಮತ್ತು ಶೇಖಡಾವಾರು ಪ್ರಮಾಣ : 31 (1.93%)
ಒಟ್ಟು ಸಾವು : 36405
ಕೋವಿಡ್ ಪರೀಕ್ಷೆ ಮತ್ತು ಶೇಖಡಾವಾರು ಪ್ರಮಾಣ : 114072 (1.40%)
ಇದುವರೆಗಿನ ಒಟ್ಟು ಲಸಿಕೆ: 29068655
- ಭಾರತಕ್ಕೆ ಹಿಂದಿರುಗಿದ ಒಲಂಪಿಕ್ಸ್ ಪದಕ ವಿಜೇತೆ ಮೀರಾಬಾಯಿ ಚಾನು; ದೆಹಲಿ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ;ಮಹಿಳೆಯರ ವಿಭಾಗದ ಭಾರ ಎತ್ತುವ ಸ್ಪರ್ದೆಯಲ್ಲಿ ಬೆಳ್ಳಿ ಪದಕ.
- ಪುರುಷರ 200 ಮೀ ಬಟರ್‌ಫ್ಲೈ – ಹೀಟ್ 2 ರಲ್ಲಿ 1:57.22 ಸಮಯದೊಂದಿಗೆ ಸಾಜನ್ ಪ್ರಕಾಶ್ 4ನೇ ಸ್ಥಾನ ಪಡೆದರು.
- ತರಬೇತಿಯಲ್ಲಿ ಸಹಾಯ ಮತ್ತು ಬೆಂಬಲ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಮಿರಾಬಾಯಿ ಚಾನು ಧನ್ಯವಾದ ಹೇಳಿದ್ದಾರೆ.
- ರಾಜ್ಯಪಾಲರನ್ನು ಭೇಟಿ ಮಾಡಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ.
- “ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಪಕ್ಷದ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಬದ್ಧ” _ ಬಸವರಾಜ ಬೊಮ್ಮಾಯಿ.
- ಟೋಕಿಯೋ ಒಲಂಪಿಕ್ಸ್ ನ ಭಾರ ಎತ್ತುವ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದು ಭಾರತಕ್ಕೆ ಮರಳಿದ ಮೀರಾಬಾಯಿ ಚಾನು ಅವರಿಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು.
- ಸೆನ್ಸೆಕ್ಸ್ 123 ಅಂಕ ಕುಸಿತ ಕಂಡಿದ್ದು, 52,852ಕ್ಕೆ ಕೊನೆಗೊಂಡಿದೆ; ನಿಫ್ಟಿ 31 ಅಂಕಗಳ ಕುಸಿತ ಕಂಡು 15,824 ಕ್ಕೆ ತಲುಪಿದೆ.
- ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿಂದು ಸಂಜೆ ಭಾರತೀಯ ಮಹಿಳಾ ಹಾಕಿ ತಂಡ ಬಲಿಷ್ಠ ಜರ್ಮನಿ ವಿರುದ್ದ ಸೆಣಸಲಿದೆ. ಈಗಾಗಲೇ ನೆದರ್‌ಲ್ಯಾಂಡ್ಸ್ ವಿರುದ್ಧ 1-5 ಗೋಲುಗಳಿಂದ ಸೋಲು ಅನುಭವಿಸಿರುವ ಭಾರತ ಈ ಪಂದ್ಯ ಗೆದ್ದು ಮತ್ತೆ ಪುಟಿದೇಳುವ ವಿಶ್ವಾಸದಲ್ಲಿದೆ.
- “ವಿಪಕ್ಷಗಳಿಗೆ ಪುನಃ ವಿಶ್ವಾಸವನ್ನು ಕೊಡುತ್ತೇನೆ ಸರ್ಕಾರವು ಪ್ರತಿಯೊಂದು ವಿಷಯದ ಮೇಲೆ ಚರ್ಚಿಸಲು ಸದಾ ಸಿದ್ಧವಾಗಿದೆ ಆದ್ದರಿಂದ ವಿಪಕ್ಷಗಳು ಸದನದ ಕಲಾಪವನ್ನು ಸುಗಮವಾಗಿ ನಡೆಸಲು ಅವಕಾಶ ಕೊಡಬೇಕು”_ ಪ್ರಹ್ಲಾದ್ ಜೋಷಿ,
- ಲೋಕಸಭೆ ಅಪವರ್ತನ ನಿಯಂತ್ರಣ (ತಿದ್ದುಪಡಿ) ಮಸೂದೆ 2021 ಯನ್ನು ಅಂಗೀಕರಿಸಿದೆ.
- ಅಸ್ಸಾಂ : ಮಿಜೋರಾಂ ಗಡಿ ಉದ್ವಿಗ್ನತೆಯಿಂದ ಅಸ್ಸಾಂ ಪೊಲೀಸರ ಆರು ಜವಾನರು ಪ್ರಾಣ ಕಳೆದುಕೊಂಡಿದ್ದಾರೆ: ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ

ಇದನ್ನೂ ಓದಿ: https://bit.ly/2VbdOhB