- ಅಮೆರಿಕದ ಕಾರ್ಯದರ್ಶಿ ಆ್ಯಂಟೊನಿ ಜೆ. ಬ್ಲಿಂಕೆನ್, ಇದೇ 27 ಮತ್ತು 28 ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ.
- ದೇಶದಲ್ಲಿ ಲಸಿಕೆ ಅಭಿಯಾನ ವಿಶೇಷವಾಗಿ ಮುಂದುವರೆದಿದೆ. ಇದರ ಪರಿಣಾಮ, ವಿಶ್ವದಲ್ಲೇ ಅತಿ ಹೆಚ್ಚು ಲಸಿಕೆ ನೀಡಿರುವ ದೇಶಗಳ ಪೈಕಿ ಭಾರತ ಮುಂಚೂಣಿಯಲ್ಲಿದೆ. ಇದುವರೆಗೆ ದೇಶಾದ್ಯಂತ ಒಟ್ಟು 42 ಕೋಟಿ 78 ಲಕ್ಷ 82 ಸಾವಿರದ 261 ಡೋಸ್ ಲಸಿಕೆ ನೀಡಲಾಗಿದೆ _ ಕೇಂದ್ರ ಆರೋಗ್ಯ ಸಚಿವಾಲಯ
- ಆಷಾಢ ಶುದ್ಧ ಪೌರ್ಣಮಿಗೆ ರಾಷ್ಟ್ರಪತಿ, ಪ್ರಧಾನಿಯವರಿಂದ ಶುಭ ಹಾರೈಕೆ.
- ಕಳೆದ 24 ಗಂಟೆಯಲ್ಲಿ 42,67,799 ಕೊರೋನ ಲಸಿಕಾಕರಣ !
- ಮಹಾರಾಷ್ಟ್ರದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಅತ್ಯಧಿಕ ವರ್ಷಧಾರೆ.
- ಹೇಮಾವತಿ ಜಲಾಶಯ ತುಂಬಲು10 ಟಿಎಂಸಿ ಬಾಕಿ.
- ರಾಮನಗರದಲ್ಲಿ 12 ವರ್ಷದ ಬಾಲಕಿ ಹಳ್ಳದಲ್ಲಿ ಕೊಚ್ಚಿ ಹೊಗಿರುವ ಘಟನೆ !
- ಬೆಳಗಾವಿ ಜಿಲ್ಲೆಯಾದ್ಯಂತ ಭಾರಿ ಮಳೆ; ಅಪಾರ ಹಾನಿ.
- ಮುಖ್ಯಮಂತ್ರಿ ಬಿಎಸ್ ವೈ ನಾಳೆ ಬೆಳಗಾವಿ ಜಿಲ್ಲೆಯ ಪ್ರವಾಹ ಪರಿಸ್ಥಿತಿಗಳನ್ನು ಅವಲೋಕಿಸಲಿದ್ದಾರೆ.
- “ಅತಿವೃಷ್ಟಿ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗು ಜಿಲ್ಲಾ ಉಸ್ತುವಾರಿಗಳಿಂದ ಮಳೆ ಹಾನಿ ಪರಿಸ್ಥಿತಿಗಳ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ಸಚಿವರುಗಳಿಗೆ ತಮ್ಮ ಉಸ್ತುವಾರಿ ಜಿಲ್ಲೆಯಲ್ಲಿಯೇ ಇರುವಂತೆ ಸೂಚಿಸಿದ್ದೇನೆ.” – ಸಿ ಎಂ
- “ಆಚಾರ್ಯ ದೇವೋ ಭವ, ಗುರುವೇ ನಿನ್ನ ದೇವರು ಎಂದು ಸಾರುವ ಭಾರತೀಯ ಸಂಸ್ಕೃತಿಯಲ್ಲಿ, ತಿಳುವಳಿಕೆ ನೀಡುವ ಜೊತೆಗೆ ಸಾರ್ಥಕ ಬದುಕಿಗೆ ದಾರಿ ತೋರುವ ಎಲ್ಲರನ್ನೂ ಗುರುವೆಂದು ಗೌರವಿಸಲಾಗುತ್ತದೆ. ಈ ಗುರು ಪೂರ್ಣಿಮೆಯ ಪವಿತ್ರ ಸಂದರ್ಭದಲ್ಲಿ ಅಂತಹ ಎಲ್ಲ ಗುರುಗಳಿಗೂ ಅನಂತ ಪ್ರಣಾಮಗಳು” – ಬಿ ಎಸ್ ಯಡಿಯೂರಪ್ಪ, ಮಾನ್ಯ ಮುಖ್ಯಮಂತ್ರಿಗಳು.
- ಒಲಂಪಿಕ್ಸ್: ಮೊದಲ ಹಾಕಿ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಅನ್ನು 3-2 ಅಂತರದಿಂದ ಮಣಿಸಿದ ಭಾರತ.
