- QRMP ಯೋಜನೆಯಡಿಯಲ್ಲಿರುವ GST ತೆರಿಗೆದಾರರ ಗಮನಕ್ಕೆ! ಫೆಬ್ರವರಿ, 2022 ಕ್ಕೆ B2B ಇನ್‌ವಾಯ್ಸ್‌ಗಳನ್ನು ಅಪ್‌ಲೋಡ್ ಮಾಡುವ ಮೂಲಕ ಸ್ವೀಕರಿಸುವವರಿಗೆ ITC ಯ ಹರಿವನ್ನು ಸಕ್ರಿಯಗೊಳಿಸಲು ಇನ್‌ವಾಯ್ಸ್ ಫರ್ನಿಶಿಂಗ್ ಫೆಸಿಲಿಟಿ (IFF) ನ ಅನುಕೂಲತೆಯನ್ನು ಆನಂದಿಸಿ, ಇಂದು ಕೊನೆಯ ದಿನ. _CBIC
- ಇಂದು ದೆಹಲಿಯಲ್ಲಿ ಬಿಜೆಪಿ ನಾಯಕತ್ವದೊಂದಿಗೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ರಚನೆ ಕುರಿತು ಚರ್ಚಿಸಲಿದ್ದಾರೆ.
- ಪಂಜಾಬ್ ಸಿಎಂ ನಿಯೋಜಿತ ಭಗವಂತ್ ಮಾನ್ ಮತ್ತು ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅಮೃತಸರದ ಗೋಲ್ಡನ್ ಟೆಂಪಲ್ ಭೇಟಿ.
ಜಾಹೀರಾತು: ಲಿಂಗಸಗೂರು ಪಟ್ಟಣದಲ್ಲಿ ಹೊಸದಾಗಿ ಪ್ರಾರಂಭವಾಗಿರುವ “ಸಮೃದ್ಧಿ ಹಾರ್ಡವೇರ್ & ಪೇಂಟ್ಸ್ ! ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಹಾರ್ಡವೇರ್ ಸಾಮಗ್ರಿಗಳು ಮತ್ತು ಪೇಂಟ್ಸ್ !.

- ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ಜಗ್ಗಯ್ಯಪೇಟೆಯಲ್ಲಿ ಕಾರು ಮೋರಿಗೆ ಡಿಕ್ಕಿ ಹೊಡೆದ ಪರಿಣಾಮ 6 ತಿಂಗಳ ಹೆಣ್ಣು ಮಗು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. ಇವರಲ್ಲಿ 4 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, 1 ವ್ಯಕ್ತಿ ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದ್ದಾರೆ. ಇನ್ನೋರ್ವ ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ.
- ಉಕ್ರೇನ್‌ನಲ್ಲಿ ನಡೆಯುತ್ತಿರುವ ಸಂಘರ್ಷದ ಸಂದರ್ಭದಲ್ಲಿ ಭಾರತದ ಭದ್ರತಾ ಸನ್ನದ್ಧತೆ ಮತ್ತು ಚಾಲ್ತಿಯಲ್ಲಿರುವ ಜಾಗತಿಕ ಸನ್ನಿವೇಶವನ್ನು ಪರಿಶೀಲಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಉನ್ನತ ಮಟ್ಟದ ಸಭೆಯನ್ನು ನಡೆಸಿದರು.
- ಭಾರತೀಯ ರೈಲ್ವೆಯು ಉತ್ತಮ ಸುರಕ್ಷತೆ ಮತ್ತು ಭದ್ರತೆಗಾಗಿ ಫೆಬ್ರವರಿ 28,2022ರ ವೇಳೆಗೆ ಒಟ್ಟು 850 ರೈಲ್ವೆ ನಿಲ್ದಾಣಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಆಳವಡಿಸಿದೆ.
- ಜರ್ಮನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ನಲ್ಲಿ ಭಾರತದ ಲಕ್ಷ್ಯ ಸೇನ್ ಫೈನಲ್ ತಲುಪಿದ್ದಾರೆ.
- ನಿರ್ಮಾಪಕ ಅಭಿಷೇಕ್ ಅಗರ್ವಾಲ್, ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಮತ್ತು ನಟಿ ಪಲ್ಲವಿ ಜೋಶಿ ಸೇರಿದಂತೆ ‘ದಿ ಕಾಶ್ಮೀರ್ ಫೈಲ್ಸ್’ ತಂಡ ಶನಿವಾರ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ತಮ್ಮ ಚಿತ್ರದ ಬಗ್ಗೆ ಮೆಚ್ಚುಗೆಯನ್ನು ಸ್ವೀಕರಿಸಿದೆ ಎಂದು ಹೇಳಿದರು.