ಸುದ್ದಿ ಸಂಗ್ರಹ: ಸುರೇಶ ಹಿರೇಮಠ, ಲಿಂಗಸಗೂರು ವರದಿಗಾರರು.
ಕೊಪ್ಪಳ: ಜಿಲ್ಲೆಯ ಚಳಗೇರಾ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಕನಕೊಪ್ಪ ಗ್ರಾಮದಲ್ಲಿ ಇಂದು ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಆಡಳಿತ ವೈದ್ಯಾಧಿಕಾರಿಗಳಾದ ಡಾ. ಶರಣಪ್ಪ ಮೂಲಿಮನಿ ಉದ್ಘಾಟಿಸಿದರು. ನಂತರ ಮಾತನಾಡಿದ ಡಾ.ಶರಣಪ್ಪ, ಮಲೇರಿಯಾ ನಿಯಂತ್ರಣದ ಕುರಿತು ಕೈಗೊಳ್ಳಬೇಕಾದ ಮುಂಜಾಗೃತ ಕ್ರಮಗಳು ಹಾಗೂ ಮಲೇರಿಯಾ ಕಾಯಿಲೆಯ ಲಕ್ಷಣಗಳು, ಚಿಕಿತ್ಸೆಯ ಕುರಿತು ಹಾಗೂ ನೀರು ಸಂಗ್ರಹಣಾ ತೊಟ್ಟಿಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು ಹಾಗೂ ಮನೆಯ ಮುಂದೆ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು.

ಶರಣಪ್ಪ ರಾಜೂರು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ “ಮಲೇರಿಯಾ ಒಂದು ಸಾಂಕ್ರಾಮಿಕ ಕಾಯಿಲೆಯಾಗಿದ್ದು ಇದು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ, ಪ್ರತಿವರ್ಷ ಜೂನ್ ತಿಂಗಳನ್ನು ಮಲೇರಿಯಾ ವಿರೋಧಿ ತಿಂಗಳಾಗಿ ಆಚರಿಸುತ್ತೇವೆ -ಶೂನ್ಯ ಮಲೇರಿಯಾ ನನ್ನಿಂದಲೇ ಪ್ರಾರಂಭ” ಎಂಬ ಘೋಷ ವಾಕ್ಯದೊಂದಿಗೆ ಈ ವರ್ಷ ಯಾವುದೇ ಮಲೇರಿಯಾ ಪ್ರಕರಣಗಳು ಬಾರದಂತೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸೋಣ, ಯಾವುದೇ ಜ್ವರ ವಿರಲಿ ರಕ್ತಪರೀಕ್ಷೆ ಮಾಡಿಸಿ ಹಾಗೂ ಸೊಳ್ಳೆಗಳಿಂದ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು” ಎಂದು ತಿಳಿಸಿದರು.

ಶರಣಪ್ಪ ರಾಜೂರು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು, ಮಲ್ಲಪ್ಪ ಗುಡಿಹೊಲ ಗ್ರಾಮ್ ಪಂಚಾಯತ್ ಉಪಾಧ್ಯಕ್ಷರು ಹಾಗೂ ಸದಸ್ಯರು, ಶಾಲಾ ಮುಖ್ಯೋಪಾಧ್ಯಾಯರು , ಮಾಬೂಬಿ ಅತ್ತಾರ ಕಿರಿಯ ಆರೋಗ್ಯ ಸಹಾಯಕಿ , ಸಮ್ಮತಿ ಮುತ್ತಿನ ಎಂ ಎಲ್ ಎಚ್ ಪಿ ಹಾಗೂ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಗ್ರಾಮದ ಮುಖಂಡರು ತಾಯಂದಿರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಸಮ್ಮತಿ ಮುತ್ತಿನ ನಿರೂಪಿಸಿದರು, ಮಾಬುಬಿ ಅತ್ತಾರ ವಂದಿಸಿದರು.