ಸುದ್ದಿ ಸಂಗ್ರಹ: ಸುರೇಶ ಹಿರೇಮಠ, ಲಿಂಗಸಗೂರು ವರದಿಗಾರರು.
ಕುಷ್ಟಗಿ: ತಾಲೂಕಿನ ಚಳಗೇರಾ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ರಾಷ್ಟ್ರೀಯ ಡೆಂಗ್ಯೂ ದಿನವಾದ ಇಂದು ಡೆಂಗ್ಯೂ ಕುರಿತು ಗ್ರಾಮಸ್ಥರಲ್ಲಿ ತಿಳುವಳಿಕೆ ಮಾತುಗಳನ್ನೇಳಿ ಜಾಗೃತಿ ಮೂಡಿಸಲಾಯಿತು.

“ಸೊಳ್ಳೆಗಳಿಂದ ಡೆಂಗ್ಯೂ ಖಾಯಿಲೆ ಹರಡುತ್ತದೆ, ಸೊಳ್ಳೆಗಳು ಹುಟ್ಟಿಕೊಳ್ಳುವುದು ಕಲುಷಿತ ವಾತಾವರಣ ಹಾಗೂ ನೀರಿನ ಸಂಗ್ರಹಣೆಯಿಂದ, ಹಾಗಾಗಿ ಮನೆಯ ಮೇಲೆ ಹಾಗೂ ಸುತ್ತಮುತ್ತ ಚರಂಡಿ ನೀರು-ಮಳೆಯ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಿ, ನೀರಿನ ಬ್ಯಾರಲ್-ತೊಟ್ಟಿ-ಟ್ಯಾಂಕ್ ಗಳನ್ನು ಭದ್ರವಾಗಿ ಮುಚ್ಚಿ,ಬಳಕೆಗೆ ಸಂಗ್ರಹಿಸಲ್ಪುಡುವ ನೀರನ್ನು ವಾರಕ್ಕೆ ಒಮ್ಮೇಯಾದರೂ ಬದಲಿಸಿ, ವಿಶ್ರಾಂತಿ-ಮಲಗುವಾಗ ಸೊಳ್ಳೆ ಪರದೆಗಳನ್ನು ಬಳಸಿ, ನಿಮ್ಮನ್ನು ನಿಮ್ಮ ಕುಟುಂಬವನ್ನು ಡೆಂಗ್ಯೂ ಖಾಯಿಲೆಯಿಂದ ರಕ್ಷಿಸಿಕೊಳ್ಳಿ, ಜೊತೆಗೆ ಗ್ರಾಮದ ವಾತಾವರಣವದಲ್ಲಿ ಡೆಂಗ್ಯೂ ಹುಟ್ಟಿಕೊಳ್ಳದಂತೆ ನಮ್ಮ ನಿಮ್ಮೇಲ್ಲರ ಮುನ್ನಚ್ಚರಿಕೆಗೆ ಸಹಕಾರ ಅಗತ್ಯ. ಮೂರು ದಿನಗಳಿಗಿಂತ ಹೆಚ್ಚು ಜ್ವರ, ಮೈ-ಕೈ ನೋವು ಕಾಣಿಸಿಕೊಂಡರೆ, ಆರೋಗ್ಯ ಕೇಂದ್ರಕ್ಕೆ ಬಂದು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ, ಡೆಂಗ್ಯೂ ಬಗ್ಗೆ ಅನಗತ್ಯವಾಗಿ ಗ್ರಾಮಸ್ಥರು ಗಾಬರಿ ಆಗುವುದು ಬೇಡ, ಮುನ್ನಚ್ಚ್ರಿಕೆ ಇರಲಿ ” ಎಂದು ವೈದ್ಯಾಧಿಕಾರಿ ಶ್ರೀ ಡಾ.ಶರಣಪ್ಪ ನೆರದಿದ್ದ ಗ್ರಾಮಸ್ಥರಿಗೆ ತಿಳಿಸಿದರು.

ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಶರಣಪ್ಪ ವೈದ್ಯಾಧಿಕಾರಿಗಳು, ಆಯುಷ ವಿಭಾಗದ ಶ್ರೀಮತಿ ಡಾ. ನೀಲಮ್ಮ ಪಾಟೀಲ್, ಶರಣಪ್ಪ ರಾಜೂರು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು ಮತ್ತು ಆರೋಗ್ಯ ಕೇಂದ್ರದ ಇತರೆ ಸಿಬ್ಬಂದಿ ಹಾಗೂ ಗ್ರಾಮಸ್ಥರು ಹಾಜರಿದ್ದರು.
