ರಾಯಚೂರು: ರಾಜ್ಯದಲ್ಲಿ ಏಮ್ಸ್ ಸ್ಥಾಪನೆ ಕುರಿತು ಕೇಂದ್ರ ಸರ್ಕಾರ ಸಮೀಕ್ಷೆ ನಡೆಸಿದ ಬಳಿಕ ಸೂಕ್ತ ಸ್ಥಳ ನಿರ್ಧಾರ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿತಿಳಿಸಿದ್ದಾರೆ.
ಸಿರಿಧಾನ್ಯ ಅಭಿಯಾನ ಉದ್ಘಾಟನೆಗೂ ಮುನ್ನ ಅವರು, ರಾಜ್ಯದ ಹಿಂದುಳಿದ ಜಿಲ್ಲೆಗಳಲ್ಲಿ ವೈದ್ಯಕೀಯ ವಿಜ್ಞಾನಗಳ ಮಹಾ ವಿದ್ಯಾಲಯ ಸ್ಥಾಪಿಸುವಂತೆ ಪ್ರಬಲ ಒತ್ತಾಯವಿದೆ. ರಾಯಚೂರು 371 ಜೆ ವ್ಯಾಪ್ತಿಯ ಜಿಲ್ಲೆಯಾಗಿದ್ದು, ಮಹತ್ವಾಕಾಂಕ್ಷಿ ಯೋಜನೆಗಳಲ್ಲೂ ಸ್ಥಾನ ಪಡೆದಿದೆ. ಹೀಗಾಗಿ ಏಮ್ಸ್ ಸ್ಥಾಪನೆಗೆ ಸೂಕ್ತವೆಂಬ ವಾದವಿದ್ದು, ಈ ಕುರಿತು ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕೃಷ್ಣಾ ಜಲಾನಯನ ಪ್ರದೇಶ ಯೋಜನೆ ಕುರಿತು ಈಗಾಗಲೇ ಒಂಬತ್ತು ಯೋಜನೆಗಳಗೆ ಚಾಲನೆ ಕೊಡಲಾಗಿದೆ, ಅದರ ಜೊತೆಗೆ ಆಲಮಟ್ಟಿ ಜಲಾಶಯದ 524 ಅಡಿ ಎತ್ತರವನ್ನು ಹೆಚ್ಚು ಮಾಡಲು ಅಧಿಸೂಚನೆ ಬಾಕಿಯಿದೆ ಎಂದರು.
ಜಿಲ್ಲೆಯ ನೀರಾವರಿ ಯೋಜನೆಗಳ ಸಮರ್ಪಕ ಜಾರಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಉದ್ಯೋಗಾವಕಾಶ ಸೃಷ್ಟಿಗೆ ಆದ್ಯತೆ ನೀಡಿ, ಗಾರ್ಮೆಂಟ್ ವಲಯ ಸೇರಿದಂತೆ ವಿವಿಧ ಆದ್ಯತಾ ವಲಯಗಳಲ್ಲಿ ಹೆಚ್ಚಿನ ಅಭಿವೃದ್ಧಿ ನಿರೀಕ್ಷಿಸಲಾಗಿದೆ. ರಾಯಚೂರು, ಬಳ್ಳಾರಿ, ಕಲಬುರಗಿ ಜಿಲ್ಲೆಗಳನ್ನು ಒಳಗೊಂಡಂತೆ ಸುಸಜ್ಜಿತ ಜವಳಿ ಪಾರ್ಕ್ ಅನ್ನು ಕಲಬುರಗಿಯಲ್ಲಿ ಸ್ಥಾಪಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿದೆ. ಜನರು ಜಿಲ್ಲೆಯಿಂದ ಗುಳೇ ಹೋಗುವುದನ್ನು ತಪ್ಪಿಸಲು ಉದ್ಯೋಗ ಸೃಷ್ಟಿ, ನೀರಾವರಿ ಯೋಜನೆಗಳ ಜಾರಿಗೆ ಒತ್ತು ನೀಡಲಾಗಿದೆ ಎಂದರು.
_Follow & Support us on DailyHunt