ಉಡುಪಿ:ಜಿಲ್ಲಾ ಪ್ರವಾಸದ ಅಂಗವಾಗಿ ಕಡಲ ಕೊರತದಿಂದ ಹಾನಿಗೊಳಹಾದ ಪಡುಬಿದ್ರಿ ಕಡಲ ತೀರಕ್ಕೆ ಭೇಟಿ ನೀಡಿದ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ಸ್ಥಳವನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಕಡಲ್ಕೊರೆತ ತಡೆಗೆ ಶಾಶ್ವತ ಪರಿಹಾರ ಕಾರ್ಯಕ್ರಮಗಳನ್ನುರೂಪಿಸಲು ಹೆಚ್ಚಿನ ಅನುದಾನ ಕೋರಿ ಮಾನ್ಯ ಪ್ರಧಾನಿಯವರಿಗೆ ಮನವಿ ಮಾಡಲಾಗಿದೆ, ಪಶ್ಚಿಮಘಟ್ಟಗಳಲ್ಲಿ ಭೂಕುಸಿತ ಸಂಬಂಧಿಸುವ ಸೂಕ್ಷ್ಮ ಪ್ರದೇಶಗಳಲ್ಲಿ ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ ಮೂಲಕ ಜಿಯೊ ಮ್ಯಾಪಿಂಗ್ ಮಾಡಿಸಿ, ಶಾಶ್ವತವಾಗಿ ಭೂಕುಸಿತ ತಡೆಯುವ ಬಗ್ಗೆ ಚರ್ಚಿಸಲಾಗಿದೆ, ಶೀಘ್ರವೆ ಭೂಕುಸಿತ ಸ್ಥಳಗಳಲ್ಲಿ ವಾಸವಾಗಿರುವವರನ್ನುಸ್ಥಳಾಂತರ ಮಾಡಲಾಗುವುದೆಂದು ಮಾನ್ಯ ಸಚಿವರು ತಿಳಿಸಿದರು . ಕಡಲಸವೆತ ಪ್ರದೇಶಗಳಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ವಿಶೇಷವಾಗಿ ಮೀನುಗಾರರಿಗೆ ಸೂಕ್ತ ಸುರಕ್ಷತಾ ಕ್ರಮಗಳನ್ನು ವಹಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದರು.

ಹಾಗೂ ಜಿಲ್ಲೆಯ ನೂತನ ಹೆಬ್ರಿ ತಾಲೂಕಿನಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ ಹಾಗೂ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾನ್ಯ ಸಚಿವರು ಭಾಗವಹಿಸಿ, ಹೆಬ್ರಿ ಹೊಸ ತಾಲ್ಲುಕಾಗಿದ್ದು ಅದಕ್ಕೆ ಅಗತ್ಯ ಇರುವ ಆಡಳಿತ ಕಚೇರಿಗಳ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಚಿಸಿದರು.
