Sunday, April 20, 2025
Homeಸುದ್ದಿಸಂಕ್ಷಿಪ್ತ ಸುದ್ದಿಗಳುಈ ಹೊತ್ತಿನ ಸಂಕ್ಷಿಪ್ತ ಸುದ್ದಿಗಳು !

ಈ ಹೊತ್ತಿನ ಸಂಕ್ಷಿಪ್ತ ಸುದ್ದಿಗಳು !

ರಾಜ ಭವನ: ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ  ರಿತು ರಾಜ್ ಅವಸ್ಥಿ ಪ್ರಮಾಣ ವಚನ – ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರತಿಜ್ಞಾ ವಿಧಿ ಬೊಧಿಸಿದರು.

ರಾಜಭವನ: ಟೋಕಿಯೋ ಒಲಂಪಿಕ್ಸ್‌ ಮತ್ತು ಪ್ಯಾರಾಲಂಪಿಕ್ಸ್‌  ನಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ ಹಾಗೂ ತರಬೇತುದಾರರಿಗೆ ರಾಜ್ಯಪಾಲರಾದ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಪ್ರತ್ಸಾಹಧನ ವಿತರಿಸಿ ಸನ್ಮಾನಿಸಿದರು. ಈ ವೇಳೆ ಸಿ ಎಂ ಬಸವರಾಜ ಬೊಮಾಯಿ, ಸಚಿವರಾದ  ಕೆ ಸಿ ನಾರಾಯಣಗೌಡ ಉಪಸ್ಥಿತರಿದ್ದರು.

ಶಿಕ್ಷಣ ಇಲಾಖೆಯ ಸಮಸ್ಯೆಗಳ ಬಗ್ಗೆ ಚರ್ಚಿಸಲು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಧ್ಯಕ್ಷತೆಯಲ್ಲಿಂದು ಶಿಕ್ಷಣ ಕ್ಷೇತ್ರದ ಪ್ರಮುಖರ ಸಭೆ ನಡೆಯಿತು.

ಬೆಂಗಳೂರು: ಸಿಮ್ಯಾಕ್‌ ಸಂಸ್ಥೆಯ ಉತ್ತಮ ಪದ್ಧತಿಗಳ ದಾಖಲೀಕರಣ ಬಿಡುಗಡೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ 2018-19 ಮತ್ತು 2019-20 ಕ್ಕೆ” ಫ್ಲೈಬಸ್‌ ಸೇವೆ” ಮತ್ತು “ಸ್ವಚ್ಛತೆಯೇ  ಸೇವೆ” ಅಬಿಯಾನ ಉಪಕ್ರಮಗಳಿಗೆ ಪ್ರಶಸ್ತಿಗಳು ಲಭಿಸಿವೆ.

ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ, ವರ್ಚುವಲ್ ಮೂಲಕ ಆಫ್ಘಾನಿಸ್ತಾನ ಪರಿಸ್ಥಿತಿ ಕುರಿತ ಜಿ-20 ರಾಷ್ಟ್ರಗಳ ಶೃಂಗಸಭೆಯಲ್ಲಿ ಭಾಗಿ_ ವಿದೇಶಾಂಗ ವ್ಯವಹಾರಗಳ ಸಚಿವಾಲಯ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 7 ದಿನಗಳ ಅಧಿಕೃತ ಪ್ರವಾಸಕ್ಕಾಗಿ ಅಮೆರಿಕಕ್ಕೆ ತೆರಳಿದ್ದಾರೆ. ವಿಶ್ವಬ್ಯಾಂಕ್‌ , ಐಎಂಎಫ್ ವಾರ್ಷೀಕ ಸಭೆಯಲ್ಲಿ ಭಾಗಿ.

Proprietor
Proprietorhttps://skynews-lgs.com/
Proprietor / Editor In Chief - Sky News-Read The World Today. URN-KR230001579 AIMASS ID No-571 KARNATAKA
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news