- ಒಡಿಶಾದ ಭುವನೇಶ್ವರದಲ್ಲಿ ಇಂದಿನಿಂದ 12ನೇ ಆವೃತ್ತಿಯ ವಿಶ್ವಕಪ್ ಜೂನಿಯರ್ ಹಾಕಿ ಚಾಂಪಿಯನ್ ಶಿಪ್ ನಡೆಯಲಿದೆ.
- ಡಿಸೆಂಬರ್ 9-10 ರಂದು 2 ದಿನ ನಡೆಯಲಿರುವ ಶೃಂಗಸಭೆಗೆ ಅಮೆರಿಕ 110 ಕ್ಕೂ ಹೆಚ್ಚು ದೇಶಗಳನ್ನು ಆಹ್ವಾನಿಸಿದೆ. ಮಂಗಳವಾರ ವಿದೇಶಾಂಗ ಇಲಾಖೆ ಬಿಡುಗಡೆ ಮಾಡಿದ ಪಟ್ಟಿಯ ಪ್ರಕಾರ ಚೀನಾವನ್ನು ಆಹ್ವಾನಿಸಿಲ್ಲ. NATO ಸದಸ್ಯರಾಗಿರುವ ಟರ್ಕಿ ಕೂಡ ಪಟ್ಟಿಯಿಂದ ಕಾಣೆಯಾಗಿದೆ.
- ಜಮ್ಮುವಿನಲ್ಲಿಂದು 257 ಕಿಲೋ ಮೀಟರ್ ಉದ್ದದ 25 ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.
- ಭಾರತಕ್ಕೆ 2 ದಿನಗಳ ಭೇಟಿ ನೀಡಿರುವ ಅಮೆರಿಕದ ವ್ಯಾಪಾರ ಪ್ರತಿನಿಧಿ ಕ್ಯಾಥರಿನ್ TAI ಅವರು ನಿನ್ನೆ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
- ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿಂದು ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿದೆ.
- ’ಮನೆ ಬಾಗಿಲಿಗೆ ಲಸಿಕೆ’ ಅಭಿಯಾನದ ಅಡಿಯಲ್ಲಿ ಕೋವಿಡ್ ಲಸಿಕೀಕರಣ ತೀವ್ರಗೊಳಿಸುವಂತೆ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ.
