- ಪ್ರಸಕ್ತ ಸಾಲಿನ ವಿಶ್ವವಿಖ್ಯಾತ ದಸರಾ ಮಹೋತ್ಸವ ಆಚರಣೆ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇಂದು ಪೂರ್ವಭಾವಿ ಸಭೆ ನಡೆಯಲಿದೆ.
- ಲಂಡನ್‌ನ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಕ್ರಿಕೆಟ್ ಪಂದ್ಯದ 2ನೇ ದಿನವಾದ ಇಂದು ಇಂಗ್ಲೆಂಡ್ ತಂಡ ಭಾರತದ ವಿರುದ್ಧ ಮೊದಲ ಇನ್ನಿಂಗ್ಸ್ ಆರಂಭಿಸಲಿದ್ದು, ಭಾರತೀಯ ಕಾಲಮಾನದ ಪ್ರಕಾರ 3 ಗಂಟೆ 30 ನಿಮಿಷಕ್ಕೆ ಪಂದ್ಯ ಆರಂಭವಾಗಲಿದೆ
- ಅಮೇರಿಕದ ವಿದೇಶಾಂಗ ವ್ಯವಹಾರದ ಉಪಕಾರ್ಯದರ್ಶಿ ವೆಂಡಿ ಆರ್.ಶೆರ್ಮನ್ ಅವರು ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷ್ ಶ್ರಿಂಗ್ಲಾ ಅವರನ್ನು ಭೇಟಿಯಾಗಿ ಅಫ್ಘಾನಿಸ್ತಾನದಲ್ಲಿ ಸಮನ್ವಯ, ಇಂಡೋ-ಪೆಸಿಫಿಕ್ ಸಹಕಾರವನ್ನು ಬಲಪಡಿಸುವಿಕೆ ಮತ್ತು ಹವಾಮಾನ ಬಿಕ್ಕಟ್ಟು ಸೇರಿದಂತೆ ಪ್ರಮುಖ ವಿಷಯಗಳನ್ನು ಚರ್ಚಿಸಿದರು.
- “ಟೋಕಿಯೊ ಪ್ಯಾರಾಲಂಪಿಕ್ಸ್ ನಲ್ಲಿ ಭಾರತವು ಪದಕಗಳ ಗೆಲುವಿನಲ್ಲಿ ದಾಖಲೆ ಮಾಡಿದೆ. ಅವನಿ ಲೇಖರಾ ಅದ್ಭುತ ಸಾಧನೆ ಮಾಡಿದ್ದಾರೆ. ದೇಶಕ್ಕೆ ಮತ್ತೊಂದು ಕಂಚಿನ ಪದಕ ತಂದಿರುವುದಕ್ಕೆ ಅಭಿನಂದನೆಗಳು. ಅವರ ಮುಂದಿನ ಎಲ್ಲ ಪ್ರಯತ್ನಗಳಿಗೆ ಶುಭಾಶಯಗಳು ಹಾರೈಸುತ್ತೇನೆ.” – ಪ್ರಧಾನಿ ನರೇಂದ್ರ ಮೋದಿ
- ಪ್ಯಾರಾಲಂಪಿಕ್ ನಲ್ಲಿ ಪದಕ ವಿಜೇತರಾದ ಸುಮಿತ್ ಆಂಟಿಲ್, ದೇವೇಂದ್ರ, ಯೋಗೀಶ್ ಕತುನಿಯಾ ಮತ್ತು ಶರದ್ ಕುಮಾರ್ ಅವರನ್ನು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ನವದೆಹಲಿಯಲ್ಲಿ ಸನ್ಮಾನಿಸಿದರು.
- ಟೋಕಿಯೊ ಪ್ಯಾರಾಲಂಪಿಕ್ಸ್: ಭಾರತಕ್ಕೆ ಮತ್ತೊಂದು ಪದಕ. ಮಹಿಳೆಯರ ಆರ್ 8, 50 ಮೀಟರ್ ರೈಫಲ್ 3 ಪಿ ಎಸ್‌ಎಚ್ 1 ಸ್ಪರ್ಧೆಯಲ್ಲಿ ಶೂಟರ್ ಅವನಿ ಲೇಖಾರಾ ಕಂಚಿನ ಪದಕ ಜಯಸಿದ್ದಾರೆ. ಪ್ರಸ್ತುತ ಪ್ಯಾರಾಲಿಂಪಿಕ್ ನಲ್ಲಿ ಇದು ಅವರ ಎರಡನೇ ಪದಕವಾಗಿದ್ದು, ಈ ಮೊಲಕ ದಾಖಲೆ ಸೃಷ್ಟಿಸಿದ್ದಾರೆ. ಭಾರತದ ಪ್ರವೀಣ್ ಕುಮಾರ್ ಎತ್ತರ ಜಿಗಿತದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.
- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ 60 ವಸಂತಗಳ ಸಂಭ್ರಮ’ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಬೆಂಗಳೂರಿನಲ್ಲಿ ಚಾಲನೆ ನೀಡಿದರು ಹಾಗೂ ನಾಲ್ಕು ಸಾರಿಗೆ ನಿಗಮಗಳಲ್ಲಿನ ಅಪಘಾತ ರಹಿತ ಚಾಲಕರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಪ್ರದಾನ ಮಾಡಿದರು.
- ಬೆಂಗಳೂರು: ಮಲ್ಲೇಶ್ವರದಲ್ಲಿ ಇಂದು ಬೆಳಗ್ಗೆ ಬೃಹತ್ ಉದ್ಯೋಗ ಮೇಳಕ್ಕೆ ಉನ್ನತ ಶಿಕ್ಷಣ ಹಾಗೂ ಐಟಿಬಿಟಿ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ ಚಾಲನೆ ನೀಡಿದರು.
- ದೇಶದಲ್ಲಿ ಇಲ್ಲಿಯವರೆಗೆ (03-09-2021, ಬೆಳಿಗ್ಗೆ 08.00) ಕೊರೋನ ಲಸಿಕೆ ಪಡೆದವರು – 67,09,59,968 ಜನ ಕಳೆದ 24 ಗಂಟೆಯಲ್ಲಿ ಲಸಿಕೆ ಪಡೆದವರು – 74,84,333 ಜನ. ದೇಶದಲ್ಲಿ ಕಳೆದ 24 ಗಂಟೆಯಲ್ಲಿ 34,791 ಜನ ಕೊರೋನದಿಂದ ಗುಣಮುಖರಾಗಿದ್ದಾರೆ.
- ವಾಹನ ಸವಾರರ ಮಾರ್ಗದರ್ಶಿ: ಹೊರಡುವ ಮುನ್ನ ನಿಮ್ಮ ವಾಹನವನ್ನು ಪರೀಕ್ಷಿಸಿಕೊಳ್ಳಿ, ನಿಮ್ಮನ್ನು ಮತ್ತು ನಿಮ್ಮ ಜೊತೆಗಿರುವವರನ್ನು ರಕ್ಷಿಸಿ, ಸೀಟ್ ಬೆಲ್ಟ್ ಹಾಗೂ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿ. _KSRSA
- ಇಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ಹಣಕಾಸು ಸ್ಥಿರತೆ ಮತ್ತು ಅಭಿವೃದ್ಧಿ ಮಂಡಳಿಯ (FSDC) 24 ನೇ ಸಭೆ ನಡೆಯಿತು.
- ಆಫ್ಘಾನಿಸ್ತಾನದಲ್ಲಿ ನೂತನ ಸರ್ಕಾರ ರಚನೆ ಕುರಿತು ತಾಲಿಬಾನ್ ಇಂದು ಘೋಷಣೆ ಮಾಡುವ ಸಾಧ್ಯತೆ ಇದೆ.
