ಲೇಹ್: ಖಾದಿಯಿಂದ ತಯಾರಿಸಲ್ಪಟ್ಟ ವಿಶ್ವದ ಅತಿದೊಡ್ಡ ಭಾರತದ ರಾಷ್ಟ್ರೀಯ ಧ್ವಜವನ್ನು ಅನಾವರಣಗೊಳಿಸಲಾಗಿದೆ. ಈ ಧ್ವಜವು 225 ಅಡಿ ಉದ್ದ ಮತ್ತು 150 ಅಡಿ ಅಗಲವಿದ್ದು 1000 ಕೆಜಿ ತೂಕವಿದೆ.
“ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರಿಗೆ ಶ್ರದ್ಧಾಪೂರ್ವಕ ನಮನಗಳು. ಪೂಜ್ಯ ಬಾಪು ಅವರ ಆದರ್ಶ ಮತ್ತು ಜೀವನ ದೇಶದ ಪ್ರತಿಯೊಂದು ಪೀಳಿಗೆಗೂ ಕರ್ತವ್ಯದ ಹಾದಿಯಲ್ಲಿ ನಡೆಯಲು ಪ್ರೇರಣೆಯಾಗಲಿದೆ” _ ನರೇಂದ್ರ ಮೋದಿ, ಮಾನ್ಯ ಪ್ರಧಾನ ಮಂತ್ರಿಗಳು.
“ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯಂದು ಅವರಿಗೆ ನಮನಗಳು. ಮೌಲ್ಯಗಳು ಮತ್ತು ತತ್ವಗಳನ್ನು ಆಧರಿಸಿದ ಅವರ ಜೀವನವು ಯಾವಾಗಲೂ ದೇಶವಾಸಿಗಳಿಗೆ ಸ್ಫೂರ್ತಿಯ ಮೂಲವಾಗಿ ಉಳಿಯುತ್ತದೆ.”_ ನರೇಂದ್ರ ಮೋದಿ, ಮಾನ್ಯ ಪ್ರಧಾನ ಮಂತ್ರಿಗಳು.
“ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಜಯಂತಿಯಂದು ಅವರಿಗೆ ಶ್ರದ್ಧಾಪೂರ್ವಕ ಪ್ರಣಾಮಗಳು. ತಮ್ಮ ಜೀವನವೇ ತಮ್ಮ ಸಂದೇಶ ಎಂದು ಸಾರಿದ ಗಾಂಧೀಜಿಯವರ ನಡೆ, ನುಡಿ ಮತ್ತು ಉದಾತ್ತ ಚಿಂತನೆಗಳು, ಸಮೃದ್ಧ, ಸಶಕ್ತ, ಸದೃಢ ರಾಷ್ಟ್ರನಿರ್ಮಾಣದ ಪ್ರೇರಕ ಶಕ್ತಿಯಾಗಿದೆ” _ ಬಸವರಾಜ ಬೊಮ್ಮಾಯಿ, ಮಾನ್ಯ ಮುಖ್ಯಮಂತ್ರಿಗಳು.
“ಮಾಜಿ ಪ್ರಧಾನಮಂತ್ರಿ, ಭಾರತರತ್ನ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿಯಂದು ಅವರಿಗೆ ಆದರಪೂರ್ವಕ ಪ್ರಣಾಮಗಳು. ಅವರ ಪ್ರಾಮಾಣಿಕತೆ, ಪರಿಶ್ರಮ, ಸ್ವಾತಂತ್ರ್ಯ ಹೋರಾಟ, ದೇಶಸೇವೆ, ಪ್ರಧಾನಮಂತ್ರಿಗಳಾಗಿ ಅವರ ಆಡಳಿತ, ದಿಟ್ಟ ನಿರ್ಣಯಗಳು, ಅವರ ಸಾಧನೆಗಳು ಎಂದೆಂದಿಗೂ ಅಮರ” _ ಬಸವರಾಜ ಬೊಮ್ಮಾಯಿ, ಮಾನ್ಯ ಮುಖ್ಯಮಂತ್ರಿಗಳು.
“ಸರ್ವಾಧಿಕಾರ, ಜಾತಿ-ಧರ್ಮ-ಲಿಂಗ ಆಧಾರಿತ ಅಸಮಾನತೆ, ಹಿಂಸೆ, ಸುಳ್ಳುಗಳ ವಿರುದ್ಧದ ಎರಡನೇ ಸ್ವಾತಂತ್ರ್ಯ ಹೋರಾಟಕ್ಕೆ, ಸತ್ಯ, ಅಹಿಂಸೆ, ಸಮಾನತೆ, ಕೋಮು ಸೌಹಾರ್ದತೆ, ಗ್ರಾಮ ಸ್ವರಾಜ್ಯಗಳ ಗಾಂಧಿ ತತ್ವಗಳೇ ನಮ್ಮ ಶಸ್ತ್ರಾಸ್ತ್ರಗಳಾಗಲಿ. ನನ್ನ ಪ್ರೀತಿಯ ನಾಡ ಬಂಧುಗಳಿಗೆ ಗಾಂಧಿ ಜಯಂತಿಯ ಶುಭಾಶಯಗಳು”_ ಸಿದ್ಧರಾಮಯ್ಯ , ಮಾಜಿ ಮುಖ್ಯಮಂತ್ರಿಗಳು ಹಾಗೂ ವಿಪಕ್ಷ ನಾಯಕರು.
“ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರ ಇಂದು ಅಧಿಕೃತವಾಗಿ ಉದ್ಘಾಟನೆ ಆಗುತ್ತಿದೆ. ಹೊಸ ಜಿಲ್ಲೆಯ ಆಶೋತ್ತರಗಳೆಲ್ಲ ಈಡೇರಿ ವಿಜಯನಗರ ಸಾಮ್ರಾಜ್ಯದ ವೈಭವ ಮರುಕಳಿಸಲಿ. ರಾಜ್ಯ ಸರಕಾರವು ಎಲ್ಲ ಸೌಕರ್ಯಗಳನ್ನು ತಡ ಮಾಡದೇ ಹೊಸ ಜಿಲ್ಲೆಗೆ ನೀಡಿ ಸಮಗ್ರವಾಗಿ ಅಭಿವೃದ್ಧಿ ಮಾಡಲಿ. ಈ ಶುಭ ಸಂದರ್ಭದಲ್ಲಿ ನೂತನ ಜಿಲ್ಲೆಯ ಜನರಿಗೆ ನನ್ನ ಶುಭಾಶಯಗಳು.”_ ಹೆಚ್ ಡಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿಗಳು.
ಇಂಗ್ಲೆಂಡ್ ದೇಶದ ನಾಗರಿಕರ ಮೇಲೆ ಪರಸ್ಪರ ಸಂಬಂಧವನ್ನು ಬೆಳಸಲು ಭಾರತ ನಿರ್ಧರಿಸಿದ್ದು, ಈ ಹಿನ್ನಲೆಯಲ್ಲಿ ಇಂಗ್ಲೆಂಡ್ ದೇಶದಿಂದ ಭಾರತಕ್ಕೆ ಬರುವ ಇಂಗ್ಲೆಂಡ್ ಪ್ರಜೆಗಳು ಕಡ್ಡಾಯವಾಗಿ 10 ದಿನ ಕ್ವಾರಂಟೈನ್‌ಗೆ ಒಳಗಾಗುವಂತೆ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿಯವರು ಇಂದು ಬೆಳಗ್ಗೆ 11 ಗಂಟೆಗೆ ಜಲ ಜೀವನ್ ಮಿಷನ್ ಬಗ್ಗೆ ಗ್ರಾಮ ಪಂಚಾಯತ್ ಮತ್ತು ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ.
ಬೆಂಗಳೂರು: ಕರ್ನಾಟಕ ಅರಣ್ಯ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ 67ನೇ ವನ್ಯಜೀವಿ ಸಪ್ತಾಹ-2021ದ “ವನ್ಯಜೀವಿಗಳ ಸಂರಕ್ಷಣೆಗಾಗಿ ನಡಿಗೆ” ಜಾಥಾ ಕಾರ್ಯಕ್ರಮಕ್ಕೆ ಥಾವರ್ ಚಂದ್ ಗೆಹ್ಲೋಟ್ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅರಣ್ಯ ಹಾಗೂ ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವರಾದ ಉಮೇಶ್ ವಿಶ್ವನಾಥ ಕತ್ತಿ, ವಿಧಾನಸಭಾ ಸದಸ್ಯರಾದ ರಿಜ್ವಾನ್ ಆರ್ಷದ್, ಸಂಸದರಾದ ಪಿ.ಸಿ ಮೋಹನ್ , ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆ ಹಾಗೂ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಜಾವೇದ್ ಅಖ್ತರ್, ಅರಣ್ಯ ಪಡೆ ಮುಖ್ಯಸ್ಥರಾದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ದುಬೈನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಎಕ್ಸ್ಪೊ -2020 ಹೂಡಿಕೆದಾರರ ಸಮಾವೇಶದಲ್ಲಿ ಭಾರತದ ಪೆವಿಲಿಯನ್ ಗೆ ವಿಶ್ವದ ಎಲ್ಲ ಉದ್ಯಮಿಗಳು ಮತ್ತು ಹೂಡಿಕೆದಾರರನ್ನು ಪ್ರಧಾನಿ ನರೇಂದ್ರ ಮೋದಿ ವಿಡಿಯೊ ಸಂದೇಶದ ಮೂಲಕ ಆಹ್ವಾನಿಸಿದ್ದಾರೆ.
