ರಾಜ್ಯ:
“ಕಳೆದ ಸಾಲಿನಲ್ಲಿ ರಾಜ್ಯದ ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ಕಾರ್ಯ ನಿರ್ವಹಿಸಿದ ಅತಿಥಿ ಉಪನ್ಯಾಸಕರ ಸೇವೆಯನ್ನು 2021-22 ನೇ ಸಾಲಿಗೂ ಮುಂದುವರೆಸಲು ಆದೇಶಿಸಲಾಗಿದೆ” – ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ ನಾರಾಯಣ ಸಿ ಎನ್.
“ದಸರಾ ಬಳಿಕ 1 ರಿಂದ 5 ನೇ ತರಗತಿ ಶಾಲೆ ಹಾಗೂ ಬಿಸಿಯೂಟವನ್ನು ಪುನರಾರಂಭಿಸಲಾಗುವುದು” – ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ ಸಿ ನಾಗೇಶ್.
ಬೆಂಗಳೂರು:ಶಬರಿಮಲೆ ಅಯ್ಯಪ್ಪ ಸೇವಾ ಸಂಘದಿಂದ ರಾಜ್ಯದ ದೇವಸ್ಥಾನಗಳ ಸ್ವಚ್ಛತೆಗೆ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಚಿತ್ರನಟ , ಸಂಘದ ಗೌರವಾಧ್ಯಕ್ಷ ಎಸ್. ಶಿವರಾಮ್ ಹೇಳಿದ್ದಾರೆ. ಸಂಘವು ಪ್ರಾರಂಭವಾದ 12 ವರ್ಷಗಳಿಂದ ಸಮಾಜಮುಖಿ ಕಾರ್ಯಕ್ರಮಗಳು ಹಾಗೂ ಶಬರಿಮಲೆ ಯಾತ್ರಾರ್ಥಿಗಳಿಗೆ ಅಗತ್ಯ ನೆರವು ನೀಡುತ್ತಾ ಬಂದಿದೆ. ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಅಭಿಯಾನದಿಂದ ಉತ್ತೇಜನಗೊಂಡು ರಾಜ್ಯದ ಎಲ್ಲಾ ದೇವಸ್ಥಾನಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ಕೆ ಕೇರಳದ ಸಂಘ- ಸಂಸ್ಥೆಗಳ ಸಹಕಾರವೂ ಇರಲಿದೆ ಎಂದರು.
ರಾಯಚೂರು: ವಿವಿಧ ವಸತಿ ಶಾಲೆಗಳು, ವಿದ್ಯಾರ್ಥಿ ನಿಲಯಗಳು ಹಾಗೂ ವಾಲ್ಮೀಕಿ ಭವನದ ಕಟ್ಟಡಗಳನ್ನು ಸಾರಿಗೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ. ಶ್ರೀರಾಮುಲು ನಿನ್ನೆ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು. ಇದೇ ವೇಳೆ ಮಹಿಳಾ ಸ್ವ ಸಹಾಯ ಸಂಘಗಳಿಗೆ ಚೆಕ್ ವಿತರಣೆ ಮಾಡಿ ಮಾತನಾಡಿದ ಸಚಿವ ಬಿ. ಶ್ರೀರಾಮುಲು, ಪರಿಶಿಷ್ಟ ಪಂಗಡದ ಸರ್ವಾಂಗೀಣ ಅಭಿವೃದ್ಧಿಯ ಕಾಳಜಿಯಿಂದ ಶಿಕ್ಷಣ ಕ್ಷೇತ್ರಕ್ಕೆ ಪ್ರಥಮ ಆದ್ಯತೆ ನೀಡಲಾಗಿದೆ. ಉತ್ತಮ ಆರೋಗ್ಯ, ಗುಣಮಟ್ಟದ ಶಿಕ್ಷಣ ಹಾಗೂ ಉದ್ಯೋಗ ಕಲ್ಪಿಸುವ ಮೂಲಕ ಪರಿಶಿಷ್ಟರು ಅಭಿವೃದ್ಧಿ ಹೊಂದಲು ನೆರವು ನೀಡಲಾಗುವುದು ಎಂದು ತಿಳಿಸಿದರು. ನಂತರ ಸುದ್ದಿಗೋಷ್ಠಿಯಲ್ಲಿ ಅವರು, ಪರಿಶಿಷ್ಟ ಜಾತಿ, ಪಂಗಡಗಳ ಶ್ರೇಯೋಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಈ ಸಮುದಾಯಗಳ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಕಾರ್ಯಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ರಾಜ್ಯ ಮಟ್ಟದ ದತ್ತಿ ನಿಧಿ ಪ್ರಶಸ್ತಿ ಪ್ರಧಾನ ಸಮಾರಂಭ – ಶಿವಮೊಗ್ಗ: ನಿನ್ನೆ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2019ನೇ ಸಾಲಿನ ರಾಜ್ಯಮಟ್ಟದ ವಾರ್ಷಿಕ ದತ್ತಿ ನಿಧಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕರಾದ ರವಿಹೆಗಡೆ ಅವರಿಗೆ ಡಿವಿಜಿ ಪ್ರಶಸ್ತಿ ಸೇರಿ 18 ಪತ್ರಕರ್ತರಿಗೆ ವಿವಿಧ ದತ್ತಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ನಗರದ ಕುವೆಂಪು ರಂಗಮಂದಿರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬಿ ಎಂ ಹನೀಫ್(ಪ್ರಜಾವಾಣಿ) ಗೊಮ್ಮಟ ಮಾಧ್ಯಮ ಪ್ರಶಸ್ತಿ: ಎಸ್ ಎನ್ ಅಶೋಕಕುಮಾರ್, ಸಂಪಾದಕರು(ಗೊಮ್ಮಟವಾಣಿ), ಪಾಟೀಲ್ ಪುಟ್ಟಪ್ಪ ಪ್ರಶಸ್ತಿ:
ಎಸ್ ಕೆ ಶೇಷಚಂದ್ರಿಕ, ಹಿರಿಯ ಪತ್ರಕರ್ತರು,
ಎಸ್ ವಿ ಜಯಶೀಲರಾವ್ ಪ್ರಶಸ್ತಿ: ಅ ಚ ಶಿವಣ್ಣ, ಹಿರಿಯ ಪತ್ರಕರ್ತರು,
ಪಿ ಆರ್ ರಾಮಯ್ಯಪ್ರಶಸ್ತಿ: ಯು ಎಸ್ ಶೆಣೈ, ಸಂಪಾದಕರು(ಕುಂದಪ್ರಭ), ಗರುಡನಗಿರಿ ನಾಗರಾಜ್ ಪ್ರಶಸ್ತಿ: ಕೆ ಆರ್ ಮಂಜುನಾಥ್, ಸಂಪಾದಕರು(ಮಲೆನಾಡ ಮಂದಾರ), ಎಚ್ ಕೆ ವೀರಣ್ಣಗೌಡ ಪ್ರಶಸ್ತಿ :ಕೋಡಿ ಹೊಸಳ್ಳಿ ರಾಮಣ್ಣ,
ಹಿರಿಯ ಪತ್ರಕರ್ತರು,
ಕಿಡಿ ಶೇಷಪ್ಪ ಪ್ರಶಸ್ತಿ: ಕೆ ಎಂ ರೇಖಾ, ಸಂಪಾದಕರು(ಹೊಸಪೇಟೆ ಟೈಮ್ಸ್), ಪಿ.ರಾಮಯ್ಯ ಪ್ರಶಸ್ತಿ: ರೇವಣ್ಣಸಿದ್ದಯ್ಯ ಮಹಾನುಭವಿಮಠ,
ಸಂಪಾದಕರು(ಶಿಡ್ಲು ಪತ್ರಿಕೆ), ಯಶೋಧಮ್ಮ ಜಿ ನಾರಾಯಣ ಪ್ರಶಸ್ತಿ: ರಶ್ಮಿ,
ಬ್ಯೂರೋ ಮುಖ್ಯಸ್ಥೆ(ಪ್ರಜಾವಾಣಿ), ಎಂ.ನಾಗೇಂದ್ರರಾವ್ ಪ್ರಶಸ್ತಿ : ಪಿ ಸುನಿಲ್ ಕುಮಾರ್ ಸಂಪಾದಕರು (ಸಿಟಿ ಹೈಲೈಟ್ಸ್), ಎಂ ನಾಗೇಂದ್ರರಾವ್ ಪ್ರಶಸ್ತಿ : ಎನ್.ಡಿ.ಶಾಂತಕುಮಾರ್, ವಿಜಯವಾಣಿ(ಶಿವಮೊಗ್ಗ), ಮಿಂಚು ಶ್ರೀನಿವಾಸ್ ಪ್ರಶಸ್ತಿ: ರಾಮಸ್ವಾಮಿ ಹುಲಕೋಡು(ವಿಜಯಕರ್ನಾಟಕ), ಎಸ್ ಎಚ್ ರಂಗಸ್ವಾಮಿ ಪ್ರಶಸ್ತಿ: ಪಿ.ಸುನೀಲ್‌ಕುಮಾರ್ ಸಂಪಾದಕರು(ಸಿಟಿ ಹೈಲೈಟ್ಸ್…),
ಸಂಘದ ವಿಶೇಷ ಪ್ರಶಸ್ತಿಗಳು: ಪ್ರಹ್ಲಾದಗುಡಿ,
ವರದಿಗಾರರು(ಕನ್ನಡ ಪ್ರಭ), ಮುನಿವೆಂಕಟೇಗೌಡ,
ಹಿರಿಯ ಪತ್ರಕರ್ತರು ಕೋಲಾರ,
ಪ್ರಕಾಶ್ ರಾಮಜೋಗಿಹಳ್ಳಿ (ವಾರ್ತಾಭಾರತಿ), ಬೆಂಗಳೂರು,
ಎಂ ಕೆ ರಾಘವೇಂದ್ರ ಮೇಗರವಳ್ಳಿ (ವಿಜಯ ಕರ್ನಾಟಕ) ತೀರ್ಥಹಳ್ಳಿ.
ದಾವಣಗೆರೆ: ಜಿಲ್ಲೆಯಲ್ಲಿ ಭಾರಿ ಮಳೆಗೆ ಗ್ರಾಮಗಳ ಸಂಪರ್ಕವೇ ಕಡಿತ – ಮುಳುಗಿದ ಸೇತುವೆಗಳು.. ತುಂಬಿ ಹರಿಯುತ್ತಿರೋ ಹಳ್ಳ – ಸೇತುವೆ, ರಸ್ತೆಯಲ್ಲಿ ನೀರು ಹರಿಯುತ್ತಿರೋದ್ರಿಂದ ಸಂಪರ್ಕ ಕಡಿತ – ತಮ್ಮ ಗ್ರಾಮಗಳಿಗೆ ಹೋಗಲು ಪರದಾಡುತ್ತಿರುವ ಜನರು – ಕಾಟೀಹಳ್ಳಿ ತಾಂಡಾ ಸೇರಿದಂತೆ ಮೂರು ಗ್ರಾಮಗಳ ಸಂಪರ್ಕ ಕಡಿತ – ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಗ್ರಾಮಸ್ಥರ ಹಿಡಿಶಾಪ.
ಹವಾಮಾನ: ರಾಜ್ಯದ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಬಳ್ಳಾರಿ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆಯಾಗಿ ಯಲ್ಲೋ ಅಲರ್ಟ್ ಘೋಷಿಸಿದೆ.
ಸ್ಯಾಂಡಲ್ ವುಡ್: ಸಲಗ ಚಿತ್ರದ ಸೆನ್ಸಾರ್ ಸರ್ಟಿಫಿಕೇಟ್ ಇಟ್ಟು ಬೆಂಗಳೂರಿನ ಅಣ್ಣಮ್ಮ ದೇವಿಗೆ ಪೂಜೆ ಸಲ್ಲಿಸಿದ ಸಲಗ ಚಿತ್ರತಂಡ. ನಿರ್ದೇಶಕ ನಟ ವಿಜಯ್, ಪತ್ನಿ ಕೀರ್ತಿ, ಪುತ್ರ ಸಾಮ್ರಾಟ್ ಹಾಗೂ ಚಿತ್ರದ ನಿರ್ಮಾಪಕರಾದ ಕೆ.ಪಿ ಶ್ರೀಕಾಂತ್ ಪೂಜೆಯಲ್ಲಿ ಭಾಗಿಯಾಗಿದ್ರು. ಇದೇ ಅಕ್ಟೋಬರ್ 14ಕ್ಕೆ ಸಲಗ ಮೂವಿ ರಿಲೀಸ್ ಆಗಲಿದೆ.
ಅಂತರಾಜ್ಯ- ದೆಹಲಿ: ಕರಾವಳಿ ಭದ್ರತಾ ವಲಯದಲ್ಲಿ ಭಾರತ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ದೆಹಲಿಯಲ್ಲಿಂದು ಭಾರತೀಯ ಕರಾವಳಿ ರಕ್ಷಣಾ ಸಂಸ್ಥೆಯ ಸಮಾರಂಭದಲ್ಲಿ ಅವರು, ಕರಾವಳಿ ಭದ್ರತೆಗೆ ಸರ್ಕಾರ ಆದ್ಯತೆ ನೀಡಿದ್ದು, ಇದರಿಂದ ಪ್ರಾದೇಶಿಕ ಸಹಕಾರ ವ್ಯಾಪ್ತಿ ವಿಸ್ತರಣೆಯಾಗುತ್ತಿದೆ. ಪ್ರಾದೇಶಿಕ ಭದ್ರತೆಗೂ ಸಹಕಾರಿಯಾಗಿದೆ ಎಂದು ಹೇಳಿದರು. ಕರಾವಳಿ ರಕ್ಷಣಾ ಸಂಸ್ಥೆ ಕಾರ್ಯನಿರ್ವಹಣೆಯಿಂದ ಸಾಕಷ್ಟು ಅನುಕೂಲಗಳಾಗಿದ್ದು, ಹಲವಾರು ಜೀವರಕ್ಷಿಸಲು ಸಾಧ್ಯವಾಗಿದೆ. ಸಾಗರ ವಲಯದ ಸಹಕಾರಕ್ಕೆ ಕೇಂದ್ರ ಸರ್ಕಾರ ವಿಶೇಷ ಆದ್ಯತೆ ನೀಡಿದೆ ಎಂದು ಅವರು ಹೇಳಿದ್ದಾರೆ.
