ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ -U I D A I ನಲ್ಲಿ ಜನರು ತಮ್ಮ ಆಧಾರ್ ಗುರುತಿನ ಚೀಟಿಯಲ್ಲಿ ಆನ್‌ಲೈನ್ ಮೂಲಕ ವಿಳಾಸವನ್ನು ಅಪ್‌ಡೇಟ್ ಮಾಡಲು ನಿವಾಸಿ-ಸ್ನೇಹಿ ಸೌಲಭ್ಯವನ್ನು ಜಾರಿಗೆ ತಂದಿದೆ. ಬೇರೆ ದಾಖಲೆಗಳನ್ನು ಒದಗಿಸದೆ ಕುಟುಂಬದ ಮುಖ್ಯಸ್ಥರ ಸಮ್ಮತಿ ಮೇರೆಗೆ ಕುಟುಂಬ ಸದಸ್ಯರು ವಿಳಾಸ ಬದಲಿಸಬಹುದಾಗಿದ್ದು, ಇದರಿಂದ ನಿವಾಸದ ಸಂಬಂಧಿಕರಿಗೆ ಹೊಸ ವಿಳಾಸ ಅಪ್ ಡೇಟ್ ಮಾಡಲು ಅನುಕೂಲವಾಗಲಿದೆ.

ಕುಟುಂಬ ಮುಖ್ಯಸ್ಥರೊಂದಿಗಿನ ಸಂಬಂಧ ತಿಳಿಸುವ ಪೂರಕ ದಾಖಲೆಗಳನ್ನು ಸಲ್ಲಿಸುವ ಮೂಲಕ ವಿಳಾಸ ಅಪ್‌ಡೇಟ್ ಮಾಡಬಹುದಾಗಿದೆ. ಅಂಕಪಟ್ಟಿ, ವಿವಾಹ ನೋಂದಣಿ ಪತ್ರ ಅಥವಾ ಪಾಸ್‌ಪೋರ್ಟ್ ನಲ್ಲಿರುವ ಹೆಸರು ಮತ್ತು ಕುಟುಂಬ ಮುಖ್ಯಸ್ಥರ ಜತೆಗಿನ ಸಂಬಂಧ ಈ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.
_CLICK to Follow-Support us on Googlenews