ಸಂಪುಟ:
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ(ಐಸಿಎಐ) ಹಾಗೂ ಇಂಗ್ಲೆಂಡ್ ಮತ್ತು ವೇಲ್ಸ್‌ನ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ (ಐಸಿಎಇಡಬ್ಲ್ಯು) ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲು ಅನುಮೋದನೆ ನೀಡಿದೆ.
ಈ ಉನ್ನತ ಸಂಸ್ಥೆಗಳಲ್ಲಿ ಕಲಿಯಲು ಬಯಸುವ ಉಭಯ ರಾಷ್ಟ್ರಗಳ ವಿದ್ಯಾರ್ಥಿಗಳ(ವೃತ್ತಿಪರರು) ಅರ್ಹತೆ ಗುರುತಿಸುವುದು, ಪರಸ್ಪರ ಸದಸ್ಯರಿಗೆ ತರಬೇತಿ ಮತ್ತು ಚಾಲ್ತಿಯಲ್ಲಿರುವ ನಿಯಮಗಳು ಮತ್ತು ಷರತ್ತುಗಳ ಆಧಾರದಲ್ಲಿ ಸೂಕ್ತ ಕಾರ್ಯವಿಧಾನವನ್ನು ಸೂಚಿಸುವ ಮೂಲಕ ಸದಸ್ಯರಿಗೆ ಉತ್ತಮ ಸ್ಥಿತಿಯ ಪ್ರವೇಶ ಕಲ್ಪಿಸಲು ತಿಳಿವಳಿಕೆ ಒಪ್ಪಂದವು ಅನುವು ಮಾಡಿಕೊಡಲಿದೆ. ಈ ತಿಳುವಳಿಕಾ ಒಪ್ಪಂದವು ಉಭಯ ರಾಷ್ಟ್ರಗಳ ಅಭ್ಯರ್ಥಿಗಳು ಅಥವಾ ವಿದ್ಯಾರ್ಥಿಗಳ ಅರ್ಹತೆ, ಪ್ರವೇಶ ಅಗತ್ಯತೆಗಳು, ಸಿಪಿಡಿ ನೀತಿ, ವಿನಾಯಿತಿಗಳು ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದ ವಸ್ತು(ವಿಷಯ) ಬದಲಾವಣೆಗಳ ಮಾಹಿತಿಯನ್ನು ಪರಸ್ಪರ ಒದಗಿಸುತ್ತದೆ.

ಐಸಿಎಇಡಬ್ಲ್ಯು ಜತೆಗಿನ ಐಸಿಎಐ ಸಹಯೋಗವು ಯುನೈಟೆಡ್ ಕಿಂಗ್ ಡಂನಲ್ಲಿರುವ ಭಾರತೀಯ ಚಾರ್ಟರ್ಡ್ ಅಕೌಂಟೆಟ್ ಗಳಿಗೆ ಮತ್ತು ಯುಕೆಯಲ್ಲಿ ಜಾಗತಿಕ ವೃತ್ತಿಪರ ಅವಕಾಶಗಳನ್ನು ಹುಡುಕುತ್ತಿರುವ ಭಾರತೀಯ ಚಾರ್ಟರ್ಡ್ ಅಕೌಂಟೆಟ್ ಗಳಿಗೆ ಸಾಕಷ್ಟು ವೃತ್ತಿಪರ ಅವಕಾಶಗಳನ್ನು ತರುತ್ತದೆ.
_source PIB