2022-23ನೇ ಸಾಲಿನ ಕೇಂದ್ರ ಮುಂಗಡ ಪತ್ರವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ ನಲ್ಲಿಂದು ಮಂಡಿಸಿದರು. 2 ನೇ ಬಾರಿಗೆ ಕಾಗದ ರಹಿತ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್, ಡಿಜಿಟಲ್ ಆರ್ಥಿಕತೆ,ತಂತ್ರಜ್ಞಾನ ಆಧಾರಿತ ಕೃಷಿ, ಸಹಜ ಕೃಷಿ, ಸಿರಿಧಾನ್ಯ ಬಳಕೆ, ಆನ್ ಲೈನ್ ಶಿಕ್ಷಣ, ಮೂಲಸೌಕರ್ಯ ನಿರ್ಮಾಣ ಸೇರಿದಂತೆ ಹಲವು ವಲಯಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಕೇಂದ್ರ ಮುಂಗಡ ಪತ್ರದ ಪ್ರಮುಖಾಂಶಗಳು ಇಂತಿವೆ…
* ಪ್ರಸಕ್ತ ಸಾಲಿನಲ್ಲಿ ಶೇಕಡ 9.2ರಷ್ಟು ಅಭಿವೃದ್ಧಿ ದರ ಅಂದಾಜು
* ಮುಂದಿನ 5 ವರ್ಷಗಳಲ್ಲಿ ಮೇಕ್ ಇನ್ ಇಂಡಿಯಾ ಅಡಿ 60 ಲಕ್ಷ ಉದ್ಯೋಗಾವಕಾಶ ಸೃಷ್ಟಿ
* 5 ವರ್ಷದಲ್ಲಿ 30 ಲಕ್ಷ ಕೋಟಿ ರೂಪಾಯಿ ಮೌಲ್ಯದ ಹೆಚ್ಚುವರಿ ಉತ್ಪಾದನೆ
* ಎಲ್ಲ ವರ್ಗಗಳ ಶ್ರೇಯೋಭಿವೃದ್ಧಿಗಾಗಿ 4 ಅಂಶಗಳ ಕಾರ್ಯಕ್ರಮ
* ಪಿಎಂ ಗತಿಶಕ್ತಿ, ಎಲ್ಲರನ್ನುಒಳಗೊಂಡ ಅಭಿವೃದ್ಧಿ , ಉತ್ಪಾದನೆ ಹೆಚ್ಚಳ, ಪರ್ಯಾಯ ಇಂಧನ ಬಳಕೆಗೆ ಆದ್ಯತೆ, ಬಂಡವಾಳ ಹೂಡಿಕೆ ಉತ್ತೇಜನಕ್ಕೆ ಆದ್ಯತೆ
* ಖಾಸಗಿ ಹೂಡಿಕೆ ಸಂಗ್ರಹಕ್ಕೆ ಉತ್ತೇಜನ
* ಆರ್ಥಿಕ ಒಳಗೊಳ್ಳುವಿಕೆ ಮತ್ತು ನೇರ ಹಣ ವರ್ಗಾವಣೆ ಕ್ರಮದಿಂದ ಫಲಾನುಭವಿಗಳಿಗೆ ಸಹಕಾರಿ
* ಆರೋಗ್ಯ ಮೂಲಸೌಕರ್ಯಕ್ಕೆ ಆದ್ಯತೆ
* ಕೋವಿಡ್ ಸಂಕಷ್ಟ ಸಮಯದಲ್ಲಿ ಲಸಿಕಾಕರಣಕ್ಕೆ ಒತ್ತು
* ಆತ್ಮನಿರ್ಭರ ಭಾರತ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ
* ಆರ್ಥಿಕ ಪುನಶ್ಚೇತನಕ್ಕೆ ಸರ್ಕಾರದಿಂದ ಹಲವು ಕ್ರಮ
* 2047ರ ವೇಳೆಗೆ ಸ್ವಾತಂತ್ರ್ಯೋತ್ಸವ ಶತಮಾನೋತ್ಸವ ಸಂದರ್ಭದಲ್ಲಿ ದೇಶದ ಸಮಗ್ರ ಅಭಿವೃದ್ಧಿಗಾಗಿ ರೂಪುರೇಷೆ ತಯಾರಿ : ಇದಕ್ಕಾಗಿ ಮುಂದಿನ 25 ವರ್ಷ ‘ಅಮೃತ ಕಾಲ’ ಹೆಸರಿನಲ್ಲಿ ಸಕಲ ಸಿದ್ಧತೆ

* 130 ಎಂಎಸ್ ಎಂಇಗಳ ಅಭಿವೃದ್ಧಿಗೆ ಕ್ರಮ * ಎಂಎಸ್ ಇಗಳಿಗೆ ಸಾಲ ಯೋಜನೆ ಒದಗಿಸಲು ಹೆಚ್ಚುವರಿ ಅನುದಾನ
* ರಾಷ್ಟ್ರೀಯ ಕೌಶಾಲ್ಯಾಭಿವೃದ್ಧಿಗೆ ಒತ್ತು
* ಸ್ಟಾರ್ಟ್ ಅಪ್ ಯೋಜನೆಯಡಿ ಡ್ರೋಣ್ ಶಕ್ತಿ ಯೋಜನೆ
* ಕೋವಿಡ್ ಹಿನ್ನೆಲೆಯಲ್ಲಿ 2 ವರ್ಷದ ಶೈಕ್ಷಣಿಕ ವರ್ಷಕ್ಕೆ ಅಡಚಣೆಯಾಗಿದ್ದು, ಇ-ಶಿಕ್ಷಣಕ್ಕೆ ಉತ್ತೇಜನ * ಶಿಕ್ಷಣ ಕಾರ್ಯಕ್ರಮದ ಟಿವಿ ವಾಹಿನಿಗಳು 12 ರಿಂದ 200ಕ್ಕೆ ಏರಿಕೆ
* ವೃತ್ತಿಪರ ತರಬೇತಿಗೆ ವಿಜ್ಞಾನ ಮತ್ತು ಗಣಿತಶಾಸ್ತ್ರದ 750 ವರ್ಚುವಲ್ ಪ್ರಯೋಗಾಲಯ ಸ್ಥಾಪನೆ
* ಬೆಂಗಳೂರಿನ ನಿಮ್ಹಾನ್ಸ್ ನೇತೃತ್ವದಲ್ಲಿ ದೇಶಾದ್ಯಂತ 23 ಟೆಲಿ ಮಾನಸಿಕ ಆರೋಗ್ಯ ಕೇಂದ್ರ ಜಾಲ ನಿರ್ಮಾಣ ; ಇದಕ್ಕೆ ಬೆಂಗಳೂರಿನ ಐಐಐಟಿ ಸಂಸ್ಥೆಯ ತಂತ್ರಜ್ಞಾನ ಬಳಕೆ
* ಶಾಲಾ ಪೂರ್ವ ಶಿಕ್ಷಣಕ್ಕಾಗಿ ಸಕ್ಷಮ ಅಂಗನವಾಡಿ ಕೇಂದ್ರಗಳ ಸ್ಥಾಪನೆ
* ಈ ಯೋಜನೆಯಡಿ 2 ಲಕ್ಷ ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಲಾಗುವುದು.
* ಕಳೆದ 2 ವರ್ಷಗಳಲ್ಲಿ 5.5 ಕೋಟಿ ಮನೆಗಳಿಗೆ ಕೊಳವೆ ಮಾರ್ಗದ ಮೂಲಕ ನೀರು ಪೂರೈಕೆ
* 2023ರ ವೇಳೆಗೆ 3.8 ಕೋಟಿ ಮನೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲು 48 ಸಾವಿರ ಕೋಟಿ ರೂಪಾಯಿ ನಿಗದಿ * ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಒತ್ತು
* ಮಹಿಳೆಯರು ಮತ್ತು ಯುವಸಮೂಹದ ಶ್ರೇಯೋಭಿವೃದ್ಧಿಗೆ ವಿಶೇಷ ಯೋಜನೆ
* ಒಂದೂವರೆ ಲಕ್ಷ ಅಂಚೆಕಚೇರಿಗಳನ್ನು ಕೋರ್ ಬ್ಯಾಂಕಿಂಗ್ ವ್ಯವಸ್ಥೆಗೆ ಅಳವಡಿಸಲು ಕ್ರಮ
* ಇದರಡಿ ಆರೋಗ್ಯ ಸೌಲಭ್ಯಗಳು ಮತ್ತು ಆಸ್ಪತ್ರೆಗಳ ಡಿಜಿಟಲ್ ನೋಂದಣಿ
* ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ ನೀತಿಗೆ ಆದ್ಯತೆ
* 2 ಮತ್ತು 3ನೇ ಹಂತದ ನಗರಗಳಿಗೆ ಹೆಚ್ಚಿನ ಆದ್ಯತೆ
* ನಗರ ವಲಯ ನೀತಿ ರಚನೆಗಾಗಿ ಉನ್ನತಮಟ್ಟದ ಸಮಿತಿ
* ನಾಗರಿಕರಿಗೆ ತ್ವರಿತವಾಗಿ ಮತ್ತು ಸುಲಭವಾಗಿ ಭವಿಷ್ಯದ ತಂತ್ರಜ್ಞಾನ ಬಳಕೆ ಮೂಲಕ ಇ- ಪಾಸ್ ಪೋರ್ಟ್ ನೀಡಲು ಕ್ರಮ
* ನಗರ ಸಾಮರ್ಥ್ಯ ನಿರ್ಮಾಣಕ್ಕಾಗಿ ರಾಜ್ಯಗಳಿಗೆ ಕೇಂದ್ರದಿಂದ ನೆರವು
* ಕೋವಿಡ್ ಸಂಕಷ್ಟ ಹಿನ್ನೆಲೆಯಲ್ಲಿ ಉಂಟಾಗುತ್ತಿರುವ ಮಾನಸಿಕ ಸಮಸ್ಯೆಗಳ ನಿವಾರಣೆಗೆ ರಾಷ್ಟ್ರೀಯ ಟೆಲಿಮಾನಸಿಕ ಆರೋಗ್ಯ ಕಾರ್ಯಕ್ರಮ
* ತುರ್ತು ಸಾಲ ಖಾತರಿ ಯೋಜನೆ – ಇಸಿಎಲ್ ಜಿಎಸ್ 2023ರ ಮಾರ್ಚ್ ವರೆಗೆ ವಿಸ್ತರಣೆ; ಈ ಯೋಜನೆಯಡಿ ಒಟ್ಟು ಸಾಲ ಖಾತರಿ ಮೊತ್ತ 50 ಸಾವಿರ ಕೋಟಿ ರೂಪಾಯಿಯಿಂದ 5 ಲಕ್ಷ ಕೋಟಿ ರೂಪಾಯಿಗೆ ಏರಿಕೆ
* ನಗರ ಪ್ರದೇಶಗಳಲ್ಲಿನ ಸಾರ್ವಜನಿಕ ಸಾರಿಗೆಯಲ್ಲಿ ಸಾಂಪ್ರದಾಯಿಕ ಇಂಧನ ಬಳಕೆ ಬದಲಿಗೆ ಸಂಪೂರ್ಣವಾಗಿ ಪರ್ಯಾಯ ಇಂಧನ ಬಳಕೆಗೆ ಉತ್ತೇಜನ
* ಆತ್ಮನಿರ್ಭರ ಭಾರತ ಅಭಿಯಾನದಡಿ ದೇಶೀಯವಾಗಿ ರಕ್ಷಣಾ ಉಪಕರಣಗಳ ಅಭಿವೃದ್ಧಿಗೆ ಕ್ರಮ
* ರಕ್ಷಣಾ ಉಪಕರಣಗಳ ಆಮದು ಪ್ರಮಾಣ ಇಳಿಕೆಗೆ ಆದ್ಯತೆ
* ಉದ್ಯೋಗ, ಕೈಗಾರಿಕಾ ವಲಯಗಳ ಅಭಿವೃದ್ಧಿಗಾಗಿ ವಿಶೇಷ ಆರ್ಥಿಕ ವಲಯ-(ಎಸ್ ಇಝೆಡ್) ಬದಲಿಗೆ ನೂತನ ಕಾಯ್ದೆ ರಚನೆ
* ಜಿಡಿಪಿಯಲ್ಲಿ ಬಂಡವಾಳ ವೆಚ್ಚ ಶೇಕಡ 2.9ರಷ್ಟು ಹೆಚ್ಚಳ
* 2022-23ರ ಸಾಲಿಗೆ 10.68 ಲಕ್ಷ ಕೋಟಿ ರೂಪಾಯಿ ಪರಿಣಾಮಕಾರಿ ಬಂಡವಾಳ ವೆಚ್ಚ ಅಂದಾಜು
* ಮೇಕ್ ಇನ್ ಇಂಡಿಯಾ ಅಡಿ ರಕ್ಷಣಾ ವಲಯದ ಬಜೆಟ್ ನಲ್ಲಿ ಶೇಕಡ 68ರಷ್ಟು ಹಣ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ನಿಗದಿ
* ಗ್ರಾಮೀಣ ಪ್ರದೇಶದಲ್ಲಿ ಅತಿವೇಗದ ಅಂತರ್ಜಾಲ ಸೇವೆ ಒದಗಿಸಲು ಅಪ್ಟಿಕಲ್ ಫೈಬರ್ ಅಳವಡಿಕೆ ಯೋಜನೆ 2025ರ ವೇಳೆಗೆ ಪೂರ್ಣ
* ಸ್ಟಾರ್ಟ್ ಅಪ್ ಗಳ ತೆರಿಗೆ ವಿನಾಯಿತಿ ಹೆಚ್ಚುವರಿಯಾಗಿ 1 ವರ್ಷ ವಿಸ್ತರಣೆ
* ಪ್ರಧಾನಮಂತ್ರಿ ಅವಾಸ್ ಯೋಜನೆಯಡಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ 80 ಲಕ್ಷ ಮನೆಗಳ ನಿರ್ಮಾಣ
* ಇದಕ್ಕಾಗಿ 48 ಸಾವಿರ ಕೋಟಿ ರೂಪಾಯಿ ನಿಗದಿ
* 2022-23ನೇ ಸಾಲಿನ ಪರಿಷ್ಕೃತ ಹಣಕಾಸು ಕೊರತೆ ಪ್ರಮಾಣ ಜಿಡಿಪಿಯ ಶೇಕಡ 6.9ರಷ್ಟು ಅಂದಾಜು