ಬಾಹ್ಯಾಕಾಶದ ಕ್ಷೇತ್ರದಲ್ಲಿ ಭಾರತ ಮಹತ್ವದ ಮೈಲುಗಲ್ಲು ಸಾಧಿಸಿದೆ. ಚಂದ್ರನ ಮೇಲ್ಮೈನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಇಳಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.
ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದ ಸಮೀಪವಿರುವ ಸ್ಥಳದಲ್ಲಿ ದೋಷರಹಿತ ಸ್ಪರ್ಶವನ್ನು ಹೊಂದಿತ್ತು. ಈ ಮಹತ್ವದ ಪ್ರಗತಿಯು ಭಾರತದ ಬಾಹ್ಯಾಕಾಶ ಪರಿಶೋಧನೆಯಲ್ಲಿ ಇತಿಹಾಸ ನಿರ್ಮಿಸಿದಂತಾಗಿದೆ. ಚಂದ್ರನ ಅಂಗಳಕ್ಕೆ ಇಳಿಯುವಲ್ಲಿ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿದ್ದು, ವಿಕ್ರಮ್ ಲ್ಯಾಂಡರ್ನ ಮೊದಲ ಚಿತ್ರ ಬಿಡುಗಡೆ ಮಾಡಿದೆ.

ವಿಕ್ರಮ್ ಲ್ಯಾಂಡರ್‌ನಿಂದ ಪ್ರಜ್ಞಾನ್ ರೋವರ್ ಹೊರಬಂದಿದೆ. ಪ್ರಜ್ಞಾನ್ ಹೊರಬಂದ ಚಿತ್ರವನ್ನು ಇಸ್ರೋ ಬಿಡುಗಡೆ ಮಾಡಿದೆ. 14 ದಿನ ಚಂದ್ರನ ಮೇಲ್ಮೈ ಅನ್ನು ಪ್ರಜ್ಞಾನ್ ಅಧ್ಯಯನ ಮಾಡಲಿದೆ. ಇನ್ನು, ಚಂದ್ರನ ಮೇಲೆ ಇಳಿಯುವ ಮೊದಲು 20 ನಿಮಿಷಗಳ ಕಾಲ ಕಮಾಂಡ್ ಸೆಂಟರ್‌ನಲ್ಲಿ ಆತಂಕವು ಸ್ಪಷ್ಟವಾಗಿತ್ತು, ಇಸ್ರೋ ಸ್ವಯಂಚಾಲಿತ ಲ್ಯಾಂಡಿಂಗ್ ಸೀಕ್ವೆನ್ಸ್ ಅನ್ನು ಪ್ರಾರಂಭಿಸಿತು. ಇದು ವಿಕ್ರಮ್ ಲ್ಯಾಂಡಿಂಗ್ ಮಾಡ್ಯೂಲ್ ಅನ್ನು ಚಾರ್ಜ್ ಮಾಡಲು ಮತ್ತು ಅನುಕೂಲಕರ ಸ್ಥಳವನ್ನು ಗುರುತಿಸಲು ಹಾಗು ಚಂದ್ರನ ಮೇಲ್ಮೈಯಲ್ಲಿ ಮೃದುವಾದ ಲ್ಯಾಂಡಿಂಗ್ ಮಾಡಲು ಅದರ ಆನ್‌ಬೋರ್ಡ್ ಕಂಪ್ಯೂಟರ್‌ಗಳನ್ನು ಬಳಸಲು ಸಕ್ರಿಯಗೊಳಿಸಿತು. ಯಶಸ್ವಿ ಸ್ಪರ್ಶದ ನಂತರ ಎಲ್ಲೆಡೆ ಹರ್ಷೋದ್ಗಾರ ಮೊಳಗಿತು. ಇಸ್ರೋ ತಂಡವು ಕೈಕುಲುಕುವ ಮೂಲಕ ಮೂಲಕ ಸಂಭ್ರಮಿಸಿತು.
_with inputs of ISRO


 
                                    