ಹೊಸತು – ರಾಜಕೀಯ – ಕ್ರೀಡೆ
- ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ಪ್ರಯುಕ್ತ ರಾಜ್ಯಾದ್ಯಂತ ನಾಳೆ ಮಾಂಸ ಹಾಗೂ ಮಧ್ಯ ಮಾರಾಟ ನಿಷೇಧಿಸಿ, ಅಹಿಂಸಾ ತತ್ವ ಪಾಲಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ.
- ಕರ್ನಾಟಕದ ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಅವರಿಗೆ ಇಂದು ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ರಾಜ್ಯಪಾಲರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದು ರಾಜ್ಯಪಾಲರ ಕಚೇರಿಯ ಟ್ವೀಟ್ ತಿಳಿಸಿದೆ.
- ವಿಶ್ವ ಹಿರಿಯರ ದಿನದ ಅಂಗವಾಗಿ ಬೆಂಗಳೂರಿನಲ್ಲಿಂದು ಪ್ರೋಸ್ಟೊಡಾಂಟಿಸ್ ಸೊಸೈಟಿ ವತಿಯಿಂದ ವಾಕಾಥಾನ್ ಆಯೋಜಿಸಲಾಗಿತ್ತು. ಕಬ್ಬನ್ ಪಾರ್ಕ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಡಿಗೆಯ ಜ್ಯೋತಿ ಹಸ್ತಾಂತರಿಸಲಾಯಿತು.
- ಇಂದು ರಕ್ಷಣಾ ಲೆಕ್ಕಪತ್ರ ಇಲಾಖೆಯ ಸಂಸ್ಥಾಪನಾ ದಿನವಾಗಿದ್ದು, ಈ ಸಂದರ್ಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇನೆಗೆ ಸಂಬಂಧಿಸಿದ ಹಲವು ಮಹತ್ವಪೂರ್ಣ ಆಪ್ ಗಳಿಗೆ ಚಾಲನೆ ನೀಡಿದರು.
- ಸತತ 6ನೇ ಬಾರಿಗೆ, ಸ್ವಚ್ಛ ಸರ್ವೇಕ್ಷಣ್ 2022 ಪ್ರಶಸ್ತಿಗಳಲ್ಲಿ ಮಧ್ಯಪ್ರದೇಶದ ಇಂದೋರ್, ಭಾರತದ ಅತ್ಯಂತ ಸ್ವಚ್ಛ ನಗರವೆಂದು ಸ್ಥಾನ ಪಡೆದಿದೆ. ಸೂರತ್, ನವಿ ಮುಂಬೈ ಕ್ರಮವಾಗಿ 2 ಮತ್ತು 3ನೇ ಸ್ಥಾನ ಪಡೆದುಕೊಂಡಿವೆ.
- ಆಂಧ್ರಪ್ರದೇಶದ ತಿರುಪತಿಯು ‘ಸಫಾಯಿ ಮಿತ್ರ ಸುರಕ್ಷಾ 2022’ ರಲ್ಲಿ ಅತ್ಯುತ್ತಮ ನಗರ ಪ್ರಶಸ್ತಿ, ಒಂದು ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಹರಿದ್ವಾರಕ್ಕೆ ‘ಅತ್ಯುತ್ತಮ ಗಂಗಾ ನಗರ 2022’ ಪ್ರಶಸ್ತಿ,
- ಸೆಪ್ಟೆಂಬರ್‌ನಲ್ಲಿ ಜಿಎಸ್‌ಟಿ ಸಂಗ್ರಹಣೆಗಳು ಶೇಕಡಾ 26 ರಷ್ಟು ಏರಿಕೆಯಾಗಿ 1.47 ಲಕ್ಷ ಕೋಟಿ ರೂ. ಆಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
- ಪ್ರಧಾನಿ ಮೋದಿಯವರು ಭಾರತದಲ್ಲಿ 5G ಸೇವೆಗಳನ್ನು ಪ್ರಾರಂಭಿಸಿದರು. “ವಿಶ್ವದ ತಾಂತ್ರಿಕ ಕ್ರಾಂತಿಯಲ್ಲಿ ಭಾರತ ಪ್ರಮುಖ ಪಾತ್ರ ವಹಿಸಲಿದೆ. 5G ಯೊಂದಿಗೆ, ಭಾರತವು ಟೆಲಿಕಾಂ ತಂತ್ರಜ್ಞಾನದಲ್ಲಿ ಜಾಗತಿಕ ಮಾನದಂಡಗಳನ್ನು ಹೊಂದಿಸುತ್ತಿದೆ ಮತ್ತು ಮುನ್ನಡೆಸುತ್ತಿದೆ”:_ ಪ್ರಧಾನಿ ನರೇಂದ್ರ ಮೋದಿ
- ಭಾರ್ತಿ ಏರ್‌ಟೆಲ್ ಇಂದು 8 ನಗರಗಳಲ್ಲಿ 5G ಸೇವೆಗಳನ್ನು ಪ್ರಾರಂಭಿಸುತ್ತಿದೆ, 2024 ರ ವೇಳೆಗೆ ಇಡೀ ದೇಶವನ್ನು ಆವರಿಸುತ್ತದೆ ಎಂದು ಅಧ್ಯಕ್ಷ ಸುನಿಲ್ ಭಾರ್ತಿ ಮಿತ್ತಲ್ ಹೇಳಿದ್ದಾರೆ.
- “ಮಲ್ಲಿಕಾರ್ಜುನ ಖರ್ಗೆ ಅವರ ಆತ್ಮವಿಶ್ವಾಸ ಚೆನ್ನಾಗಿದೆ. ನನ್ನ ಮಾತನ್ನೂ ಕೇಳುವವರೂ ಇದ್ದಾರೆ ಎಂಬ ವಿಶ್ವಾಸ ನನಗಿದೆ. ದೊಡ್ಡ ನಾಯಕರು ಸ್ವಾಭಾವಿಕವಾಗಿ ಪಕ್ಷದಲ್ಲಿ ಇತರ ದೊಡ್ಡ ನಾಯಕರೊಂದಿಗೆ ನಿಲ್ಲಬಹುದು, ಆದರೆ ನನ್ನೊಂದಿಗೆ ವಿವಿಧ ರಾಜ್ಯಗಳ ಪಕ್ಷದ ಕಾರ್ಯಕರ್ತರಿದ್ದಾರೆ”:_ ನಾಗ್ಪುರದಲ್ಲಿ ಕಾಂಗ್ರೆಸ್ ಸಂಸದ ಶಶಿ ತರೂರ್

- ಉತ್ತರ ಪ್ರದೇಶದ ಪಕ್ಷದ ಘಟಕದ ಅಧ್ಯಕ್ಷರಾಗಿ ಬ್ರಿಜ್‌ಲಾಲ್ ಖಬ್ರಿ ಅವರನ್ನು ಕಾಂಗ್ರೆಸ್ ನೇಮಕ ಮಾಡಿದೆ.
- ಅಂಚೆ ಇಲಾಖೆ ಆಯೋಜಿಸಿದ್ದ 35ನೇ ಅಖಿಲ ಭಾರತ ಅಂಚೆ ವಾಲಿಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕ ಅಂಚೆ ಇಲಾಖೆ ತಂಡ ಟ್ರೋಫಿ ಗಳಿಸಿದೆ.
- ಮಹಿಳೆಯರ ಏಷ್ಯಾಕಪ್‌ನ ಆರಂಭಿಕ ಪಂದ್ಯದಲ್ಲಿ ಭಾರತ ಶ್ರೀಲಂಕಾವನ್ನು 41 ರನ್‌ಗಳಿಂದ ಸೋಲಿಸಿದೆ.
- ಗೃಹ ಸಚಿವ ಅಮಿತ್ ಶಾ ಅವರು ಅಕ್ಟೋಬರ್ 4 ರಿಂದ 2 ದಿನಗಳ ಕಾಲ ಜಮ್ಮು & ಕಾಶ್ಮೀರ ಭೇಟಿ ನೀಡಲಿದ್ದಾರೆ.
- ನವದೆಹಲಿ: ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ (DDWS) ಅಕ್ಟೋಬರ್ 2 ರಂದು ವಿಜ್ಞಾನ ಭವನದಲ್ಲಿ ಸ್ವಚ್ಛ ಭಾರತ್ ದಿವಸ್-2022 ಅನ್ನು ಆಯೋಜಿಸುತ್ತಿದೆ.
_CLICK to Follow us on Googlenews