Monday, February 24, 2025
Homeಸಂಕ್ಷಿಪ್ತ ಸುದ್ದಿಗಳುಇತ್ತೀಚಿನ ಸುದ್ದಿರಾಜ್ಯಸಭೆಗೆ ನಾಮನಿರ್ದೇಶನ : ಹಾಗೂ ಇನ್ನೂ ಪ್ರಮುಖ ಸುದ್ದಿಗಳು !

ರಾಜ್ಯಸಭೆಗೆ ನಾಮನಿರ್ದೇಶನ : ಹಾಗೂ ಇನ್ನೂ ಪ್ರಮುಖ ಸುದ್ದಿಗಳು !

  • ಮೃತ ಉದಯಪುರ ಟೈಲರ್ ಕನ್ಹಯ್ಯಾ ಲಾಲ್ ಅವರ ಮಕ್ಕಳಾದ ಯಶ್ ತೇಲಿ ಮತ್ತು ತರುಣ್ ತೇಲಿ ಅವರನ್ನು ರಾಜ್ಯ ಸೇವೆಗೆ ನೇಮಿಸಲು ರಾಜಸ್ಥಾನ ಕ್ಯಾಬಿನೆಟ್ ನಿರ್ಧರಿಸಿದೆ.
  • ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ ಧರ್ಮಸ್ಥಳದ ಧರ್ಮಾಧಿಕಾರಿ  ಡಾ. ವೀರೇಂದ್ರ ಹೆಗ್ಗಡೆ, ವಿ.ವಿಜಯೇಂದ್ರ ಪ್ರಸಾದ್, ಸಂಗೀತ ಸಂಯೋಜಕ ಮತ್ತು ಗಾಯಕ ಇಳಯರಾಜ, ಮಾಜಿ ಒಲಿಂಪಿಕ್ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಪಿಟಿ ಉಷಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
  • ರಾಜ್ಯದಲ್ಲಿ ಮುಂದಿನ ೨೪ ಗಂಟೆಯಲ್ಲಿ ಅಧಿಕ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆಯಿದ್ದು, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ರೆಡ್ ಅಲರ್ಟ್ ಎಚ್ಚರಿಕೆ ನೀಡಲಾಗಿದೆ. ಈ ಮೂರು ಜಿಲ್ಲೆಯಲ್ಲಿ ೨೦೪ ಮಿಲಿ ಮೀಟರ್ ಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
  • ಕೇರಳ ಸಚಿವ ಸಾಜಿ ಚೆರಿಯನ್ ರಾಜ್ಯ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ. ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಇಂದು ಮುಂಜಾನೆ ರಾಜ್ಯ ಸಂಪುಟಕ್ಕೆ ರಾಜೀನಾಮೆ ನೀಡಿದ ಕೇರಳ ಸಚಿವ ಸಾಜಿ ಚೆರಿಯನ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.
  • ಜಾರ್ಖಂಡ್‌ನ ರಾಜ್ಯಸಭಾ ಸಂಸದ ಮತ್ತು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಕೇಂದ್ರ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜ್ಯಸಭಾ ಸಂಸದರಾಗಿ ನಖ್ವಿಮುಖ್ತಾರ್ ಅವರ ಅವಧಿ ಗುರುವಾರ, ಜುಲೈ 7 ರಂದು ಕೊನೆಗೊಳ್ಳಲಿದೆ. ಅವರು 2016 ರಲ್ಲಿ ಜಾರ್ಖಂಡ್‌ನಿಂದ ಆಯ್ಕೆಯಾಗಿದ್ದರು.
  • ನೇಪಾಳದ ಹಣಕಾಸು ಸಚಿವ ಜನಾರ್ದನ್ ಶರ್ಮಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇಂದು ನಡೆದ ಜನಪ್ರತಿನಿಧಿಗಳ ಸಭೆಯನ್ನುದ್ದೇಶಿಸಿ ಅವರು ಈ ವಿಷಯ ಪ್ರಕಟಿಸಿದರು.
  • ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಮಳೆ ಸಂಬಂಧಿತ ಘಟನೆಗಳಿಂದ ಯಾವುದೇ ಪ್ರಾಣಹಾನಿಯಾಗದಂತೆ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
  • ಆರೋಗ್ಯ ಸಚಿವಾಲಯವು  ಕೋವಿಡ್ ದ್ವಿತೀಯ ಲಸಿಕೆ ಮತ್ತು ಮುನ್ನೆಚ್ಚರಿಕೆ ಡೋಸ್ ನಡುವಿನ ಅವಧಿಯನ್ನು 9 ತಿಂಗಳಿನಿಂದ 6 ತಿಂಗಳಿಗೆ ಇಳಿಕೆ ಮಾಡಿ ಕೇಂದ್ರ ಸರ್ಕಾರ ನೂತನ ಮಾರ್ಗಸೂಚಿ ಹೊರಡಿಸಿದೆ.

ನಮ್ಮನ್ನೂ ʼಗೂಗಲ್‌ ನ್ಯೂಸ್‌ʼ ನಲ್ಲಿಯೂ ಫಾಲೋಮಾಡಬಹುದು, ಕ್ಲಿಕ್ಕಿಸಿ

Proprietor
Proprietorhttps://skynews-lgs.com/
Proprietor / Editor In Chief - Sky News-Read The World Today. URN-KR230001579 AIMASS ID No-571 KARNATAKA
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news