ರಾಷ್ಟ್ರೀಯ – ಇತ್ತೀಚಿನ – ಕ್ರೀಡೆ – ರಾಜಕೀಯ

  • ಪಶ್ಚಿಮ ಬಂಗಾಳ:  ಹೌರಾದ ಉಲುಬೇರಿಯಾ-ಉಪ ವಿಭಾಗದ ವ್ಯಾಪ್ತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳು ಮತ್ತು ರೈಲ್ವೆ ನಿಲ್ದಾಣಗಳ ವ್ಯಾಪ್ತಿಯಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ವಿಧಿಸಲಾದ ಸೆಕ್ಷನ್ 144 CrPC ಅನ್ನು ಜೂನ್ 15 ರವರೆಗೆ ವಿಸ್ತರಿಸಲಾಗಿದೆ. ಅಮಾನತುಗೊಂಡ ಬಿಜೆಪಿ ಸ್ಪೋಕ್ ನೂಪುರ್ ಶರ್ಮಾ ಅವರ ವಿವಾದಾತ್ಮಕ ಹೇಳಿಕೆಗೆ ನಿನ್ನೆ ಇಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದವು.
  • ಜಾರ್ಖಂಡ್ | ನಿನ್ನೆಯ ಪ್ರತಿಭಟನೆ ಮತ್ತು ಹಿಂಸಾಚಾರದ ಮುನ್ನಚ್ಚೆರಿಕೆ ಕ್ರಮವಾಗಿ ರಾಂಚಿಯ 12 ಪಿಎಸ್ ಪ್ರದೇಶಗಳಲ್ಲಿ ಸೆಕ್ಷನ್ 144 ವಿಧಿಸುವುದರ ಜೊತೆಗೆ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಹಾಗೂ ಜಿಲ್ಲಾಡಳಿತ ನಾಳೆ ಬೆಳಗಿನ ಜಾವದವರೆಗೆ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಿದೆ.
  • ಜಮ್ಮ ಮತ್ತು ಕಾಶ್ಮೀರ:  ಶ್ರೀನಗರ-ಬಾರಾಮುಲ್ಲಾ ಹೆದ್ದಾರಿಯಲ್ಲಿ ಅನುಮಾನಾಸ್ಪದ ವಸ್ತು ಪತ್ತೆ, ಸಂಚಾರ ಸ್ಥಗಿತ. ಹೆಚ್ಚಿನ  ವಿವರಗಳನ್ನು ನಿರೀಕ್ಷಿಸಲಾಗಿದೆ. Source:ANI
  • ಹಿಮಾಚಲ ಪ್ರದೇಶ ಪ್ರವಾಸದಲ್ಲಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಇಂದು ಕುಲ್ಲುದಲ್ಲಿ ರೋಹಟಾಂಗ್ ಬಳಿ ನಿರ್ಮಿಸಿರುವ ಅಟಲ್ ಸುರಂಗಕ್ಕೆ ಭೇಟಿ ನೀಡಲಿದ್ದಾರೆ.
  • ಪಂಚಕುಲಾದಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಯೂತ್ ಗೇಮ್ಸ್‌ನಲ್ಲಿ ಆತಿಥೇಯ ಹರಿಯಾಣದ ಕ್ರೀಡಾಪಟುಗಳು ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುನ್ನಡೆದಿದ್ದಾರೆ. ಇದುವರೆಗೆ ಹರಿಯಾಣ ಅಥ್ಲೀಟ್‌ಗಳು 36 ಚಿನ್ನ, 29 ಬೆಳ್ಳಿ ಮತ್ತು 36 ಕಂಚಿನ ಪದಕಗಳನ್ನು ಪಡೆಯುವುದರೊಂದಿಗೆ ಒಟ್ಟು 101 ಪದಕಗಳನ್ನು ಪಡೆದುಕೊಳ್ಳುವುದರೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.
  • ಉತ್ಪನ್ನಗಳು ಹಾಗೂ ಸೇವೆಯ ಬಗ್ಗೆ ದಾರಿ ತಪ್ಪಿಸುವ ಜಾಹಿರಾತುಗಳಿಂದ ಗ್ರಾಹಕರ ಹಿತಾಸಕ್ತಿ ರಕ್ಷಿಸಲು ನ್ಯಾಯಯುತ ಜಾಹಿರಾತಿಗಾಗಿ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.
  • ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಇಂದಿನಿಂದ 3 ದಿನ ಉತ್ತರ ಪ್ರದೇಶ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ಅವರು ಲಖನೌ ಮತ್ತು ವಾರಣಾಸಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
  • ಮಹಾರಾಷ್ಟ್ರ | ಮುಂದಿನ 3-4 ಗಂಟೆಗಳಲ್ಲಿ ಥಾಣೆ, ರಾಯಗಢ, ಪಾಲ್ಘರ್, ರತ್ನಗಿರಿ, ಸಿಂಧುದುರ್ಗ, ಮುಂಬೈ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಸಹಿತ ಮಿಂಚು ಮತ್ತು 30-40 ಕಿಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ: IMD ಮುಂಬೈ
  • ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ಇಡಿ ಸಮನ್ಸ್ ನೀಡಿರುವ ವಿಚಾರವಾಗಿ ನಾಳೆ ಜೂನ್ 12 ರಂದು ದೇಶಾದ್ಯಂತ ಕಾಂಗ್ರೆಸ್ ಸುದ್ದಿಗೋಷ್ಠಿ ನಡೆಸಲಿದೆ.
  • ಕೇರಳ ಸರ್ಕಾರವು ವನ್ಯಜೀವಿ ಅಭಯಾರಣ್ಯಗಳು, ರಾಷ್ಟ್ರೀಯ ಉದ್ಯಾನವನಗಳು ಮತ್ತು ಹುಲಿ ಸಂರಕ್ಷಿತ ಪ್ರದೇಶಗಳಿಗೆ ಪರಿಸರ ಸೂಕ್ಷ್ಮ ವಲಯಗಳೆಂದು ಘೋಷಿಸುವ ಮೂಲಕ ಒಂದು ಕಿಲೋಮೀಟರ್ ಬಫರ್ ವಲಯವನ್ನು ಸಡಿಲಿಸುವಂತೆ ಕೇಂದ್ರವನ್ನು ಒತ್ತಾಯಿಸಿತು. ಈ ವರ್ಗಗಳಲ್ಲಿ ರಾಜ್ಯದ 24 ಪ್ರದೇಶಗಳಿವೆ.

Click to Follow on

LEAVE A REPLY

Please enter your comment!
Please enter your name here