ಕೊರೋನೋತ್ತರ ಆರ್ಥಿಕ ಬೆಳವಣಿಗೆಗಳನ್ನು ಗಮನದಲ್ಲಿ ಇರಿಸಿಕೊಂಡು ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದಿರಲು ಭಾರತೀಯ ರಿಸರ್ವ್ ಬ್ಯಾಂಕ್ – ಆರ್ ಬಿಐ ತೀರ್ಮಾನಿಸಿದೆ. ರಿಸರ್ವ್ ಬ್ಯಾಂಕ್ ನ ದ್ವೈಮಾಸಿಕ ನೀತಿಯನ್ನು ಪ್ರಕಟಿಸಿದ ಬ್ಯಾಂಕ್ ನ ಗವರ್ನರ್ ಶಕ್ತಿಕಾಂತ್ ದಾಸ್, ರಿಸರ್ವ್ ಬ್ಯಾಂಕ್ ತಮ್ಮ ಬ್ಯಾಂಕ್ ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿದರ, ರೆಪೋ ದರದಲ್ಲಿ ಶೇಕಡ 4 ಮತ್ತು ಬ್ಯಾಂಕ್ ಗಳು ರಿಸರ್ವ್ ಬ್ಯಾಂಕ್ ನಲ್ಲಿರಿಸುವ ಮೊತ್ತದ ಮೇಲಿನ ಬಡ್ಡಿದರ, ರಿವರ್ಸ್ ರೆಪೋ ದರದಲ್ಲಿ ಶೇಕಡ 3.35ನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಲು ನಿರ್ಧರಿಸಲಾಗಿದೆ. ಬ್ಯಾಂಕ್ ದರವನ್ನು ಈಗಿರುವಂತೆಯೇ ಶೇಕಡ 4.25ರಲ್ಲಿಯೇ ಮುಂದುವರೆಸಲಾಗುವುದು ಎಂದು ತಿಳಿಸಿದರು. ಕೋವಿಡ್ ನಂತರದಲ್ಲಿ ಆರ್ಥಿಕ ಬೆಳವಣಿಗೆಗಳಲ್ಲಿ ಸುಧಾರಣೆಯಾಗಿದ್ದು, ಬಂಡವಾಳ ಹೂಡಿಕೆ ಹೆಚ್ಚಾಗಿದೆ. ಕೃಷಿ ಸೇರಿದಂತೆ ಸಂಬಂಧಿತ ಇತರೆ ಚಟುವಟಿಕೆಗಳಲ್ಲಿ ಪ್ರಗತಿ ಕಂಡು ಬಂದಿದೆ. ಇದನ್ನೆಲ್ಲಾ ಪರಿಗಣಿಸಿ 2021-22ನೇ ಆರ್ಥಿಕ ವರ್ಷದ ಅಂತ್ಯಕ್ಕೆ ಜಿಡಿಪಿ ದರ 9.5ರ ಬೆಳವಣಿಗೆ ನಿರೀಕ್ಷಿಸಲಾಗಿದೆ . ಇದೇ ಸಾಲಿನಲ್ಲಿ ಗ್ರಾಹಕ ಬೆಲೆ ಸೂಚ್ಯಂಕ ಆಧರಿತ ಹಣದುಬ್ಬರ ಶೇಕಡ 5.3ರಷ್ಟು ಅಂದಾಜಿಸಲಾಗಿದೆ ಎಂದು ತಿಳಿಸಿದರು.
“ಕೋವಿಡ್-19 ಸೋಂಕು ನಿಯಂತ್ರಣ ಕ್ರಮಗಳನ್ನು ಪಾಲಿಸಿ, ಇದು ಸ್ಕೈ ನ್ಯೂಸ್ RTWT ಕಳಕಳಿ “