ಸದ್ಯದ ಸಂಕ್ಷಿಪ್ತ ಸುದ್ದಿ.
ರಾಯಚೂರು: ವಿಧಾನ ಪರಿಷತ್ ಚುನಾವಣೆಯ ರಾಯಚೂರು, ಕೊಪ್ಪಳ ಮತಕ್ಷೇತ್ರದ ಚುನಾವಣಾ ವೀಕ್ಷಕರಾದ ಎನ್.ಜಯರಾಮ ಅವರು ಶನಿವಾರ ದಂದು ನಗರದ ಪಂಡಿತ ಜಂಬಲದಿನ್ನಿ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ವಿಧಾನ ಪರಿಷತ್ ಚುನಾವಣೆಯ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಚುನಾವಣಾ ಪ್ರಕ್ರಿಯೆಗಳ ಕುರಿತು ತರಬೇತಿ ಹಾಗೂ ಸಲಹೆ ನೀಡಿದರು.

