ಬೆಂಗಳೂರು: ‘ಆಜಾದಿ ಕಾ ಅಮೃತ್ ಮಹೋತ್ಸವ’ ಅಂಗವಾಗಿ ಭಾರತೀಯ ವಾಯುಪಡೆಯ ವತಿಯಿಂದ ಆರಮನೆ ಮೈದಾನದಲ್ಲಿಂದು ವಾಯುಪಡೆಯ ಸೈನಿಕರ ವಾದ್ಯ ವೃಂದ ಸಂಗೀತದ ಸುಧೆ ಹರಿಸಿತು.
ಸರ್ಕಾರದ ಸಭೆ-ಸಮಾರಂಭಗಳಲ್ಲಿ ಯಾವುದೇ ರೀತಿಯ ಕಾಣಿಕೆಗಳನ್ನು ನೀಡದಿರುವ ಬಗ್ಗೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿರ್ದೇಶನದಂತೆ ಇನ್ನು ಮುಂದೆ ರಾಜ್ಯ ಸರ್ಕಾರ ಮತ್ತು ಸರ್ಕಾರದ ಸ್ವಾಮ್ಯಕ್ಕೊಳಪಡುವ ಸಂಸ್ಥೆಗಳು ನಡೆಸುವ ಸಭೆ-ಸಮಾರಂಭಗಳಲ್ಲಿ ಹೂಗುಚ್ಛ, ಹಾರ, ತುರಾಯಿ, ಹಣ್ಣಿನ ಬುಟ್ಟಿ, ಶಾಲು,ನೆನಪಿನ ಕಾಣಿಕೆ ಇತ್ಯಾದಿ ಯಾವುದೇ ರೀತಿಯ ಕಾಣಿಕೆ ನೀಡಬಾರದು ಎಂದು ಮುಖ್ಯಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದಾರೆ.ಬದಲಾಗಿ ಕನ್ನಡದ ಪುಸ್ತಕಗಳನ್ನು ನೀಡಬಹುದು.
ಮುಂಬೈ ಷೇರು ಮಾರುಕಟ್ಟೆ: ಆರಂಭಿಕ ವಹಿವಾಟಿನಲ್ಲಿ ಷೇರು ಸಂವೇದಿ ಸೂಚ್ಯಂಕ- ಸೆನ್ಸೆಕ್ಸ್ 147 ಅಂಕಗಳ ಏರಿಕೆಯೊಂದಿಗೆ 54 ಸಾವಿರದ 550ರಲ್ಲಿ ವಹಿವಾಟು ಆರಂಭಿಸಿದೆ. ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ ಸಹ 35 ಅಂಕಗಳ ಏರಿಕೆಯೊಂದಿಗೆ 16 ಸಾವಿರದ 293 ರಲ್ಲಿತ್ತು.
ಭಾರತೀಯ ವಾಯುಪಡೆಯ ನಿವೃತ್ತ ಸಮರ ವೀರರನ್ನು ಸನ್ಮಾನಿಸಲಾಯಿತು: ‘ಆಜಾದಿ ಕಾ ಅಮೃತ್ ಮಹೋತ್ಸವ’ದ ಅಂಗವಾಗಿ ಬೆಂಗಳೂರಿನ ವಾಯುಪಡೆಯ ತಾಂತ್ರಿಕ ಕಾಲೇಜಿನಲ್ಲಿ ನಿನ್ನೆ ಭಾರತೀಯ ವಾಯುಪಡೆಯ ನಿವೃತ್ತ ಸಮರ ವೀರರನ್ನು ಸನ್ಮಾನಿಸಲಾಯಿತು. ಈ ವೇಳೆ ಭಾರತೀಯ ವಾಯುಪಡೆಯಯೋಧರು ಸಮರ ಭೂಮಿಯಲ್ಲಿತಮ್ಮ ಶೌರ್ಯ ಹಾಗೂ ಸಾಹಸವನ್ನು ಹೇಗೆ ಪ್ರದರ್ಶಿದರು ಎಂಬುದರ ಕುರಿತು ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು.
ಭಾರತದಲ್ಲಿನ ವಿದೇಶಿಗರಿಗೆ ಕೋವಿಡ್-19 ಲಸಿಕೆಗೆ ಅವಕಾಶ: ಭಾರತದಲ್ಲಿ ನೆಲೆಸಿರುವ ವಿದೇಶಿ ಪ್ರಜೆಗಳು ಕೋವಿಡ್-19 ಲಸಿಕೆ ಪಡೆಯಲು ಕೋವಿನ್ ಪೋರ್ಟಲ್ ನಲ್ಲಿ ತಮ್ಮ ಹೆಸರು ನೋಂದಣಿ ಮಾಡಿಕೊಳ್ಳಲು ಆರೋಗ್ಯ ಸಚಿವಾಲಯ ಅವಕಾಶ ನೀಡಿದೆ. ಈ ಕುರಿತಂತೆ ಮಹತ್ವದ ನಿರ್ಧಾರ ಕೈಗೊಂಡಿರುವ ಸಚಿವಾಲಯ, ವಿದೇಶಿ ಪ್ರಜೆಗಳು ತಮ್ಮ ಪಾಸ್ ಪೋರ್ಟ್ ದಾಖಲೆಯನ್ನು ನೋಂದಣಿಗೆ ಬಳಸಿ ಕೋವಿನ್ ಪೋರ್ಟಲ್ ನಲ್ಲಿ ನೋಂದಾಯಿಸಿಕೊಂಡು ಲಸಿಕೆಯನ್ನು ಪಡೆಯಬಹುದೆಂದು ತಿಳಿಸಿದೆ.
“ನಿಮ್ಮ ಮಕ್ಕಳನ್ನು ಮನೆಯಲ್ಲಿ ತಬ್ಬಿಕೊಳ್ಳಿ ಮತ್ತು ಅವರನ್ನು ಕಾರಿನಲ್ಲಿ ಸೀಟ್ ಬೆಲ್ಟ್ ಮಾಡಲು ಮರೆಯದಿರಿ. ಜೀವಗಳನ್ನು ಉಳಿಸಿ, ಸಂಚಾರ ನಿಯಮಗಳನ್ನು ಪಾಲಿಸಿ ಮತ್ತು ಸುರಕ್ಷಿತ ಮತ್ತು ಸೌಂಡ್ ಡ್ರೈವ್ ಅನ್ನು ಯಾವಾಗಲೂ ಮತ್ತು ಎಂದೆಂದಿಗೂ ಆನಂದಿಸಿ. ಜವಾಬ್ದಾರಿಯುತವಾಗಿರಿ, ಸುರಕ್ಷಿತವಾಗಿರಿ.”_ KSRSA
ಗುಜರಾತ್: “ಅಂಕಲೇಶ್ವರದಲ್ಲಿ ಭಾರತ್ ಬಯೊಟೆಕ್ ನ ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಇದರಿಂದ ದೇಶದಲ್ಲಿ ಲಸಿಕೆ ಲಭ್ಯತೆ ಹೆಚ್ಚುತ್ತದೆ” _ ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ.
