ಬೆಂಗಳೂರು: 2020-21 ನೇ ಸಾಲಿನ SSLC ವಿಧ್ಯಾರ್ಥಿಗಳು ವಾಸಸ್ಥಳದಿಂದ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ಪತ್ರದ ಆಧಾರದ ಮೇಲೆ ಪ್ರಯಾಣಿಸಲು ಅನುಮತಿಸಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಿಧ್ಯಾರ್ಥಿಗಳಿಗೆ ರಿಯಾಯಿತಿ ಪಾಸಗಳನ್ನು ಅವರ ವಾಸಸ್ಥಳದಿಂದ ಶಾಲಾ / ಕಾಲೇಜಿಗೆ ಪ್ರಯಾಣಿಸಲು ಅವಕಾಶ ಕಲ್ಪಿಸಿ ವಿತರಣೆ ಮಾಡುತ್ತಿದೆ ಎಂದು ತಿಳಿಸುತ್ತಾ, SSLC ವಿಧ್ಯಾರ್ಥಿಗಳ ಪರೀಕ್ಷೆಯು ಬೇರೆ ಶಾಲೆಗಳಲ್ಲಿ ಇರುವುದರಿಂದ, ಸಂಸ್ಥೆಯು ವಿಧ್ಯಾರ್ಥಿಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ಪರೀಕ್ಷಾ ದಿನಾಂಕಗಳಂದು, ಅಂದರೆ ದಿನಾಂಕ 19-07-2021 ಮತ್ತು 22-07-2021 ರಂದು ಎಲ್ಲಾ SSLC ವಿಧ್ಯಾರ್ಥಿಗಳು ತಮ್ಮ ವಾಸಸ್ಥಳದಿಂದ ಪರೀಕ್ಷಾ ಕೇಂದ್ರದವರೆಗೆ SSLC ಪರೀಕ್ಷಾ ಪ್ರವೇಶ ಪತ್ರವನ್ನು (ಅಡ್ಮೀಷನ್ ಟಿಕೇಟ್) ತೋರಿಸಿ ಬೇಂ.ಮ.ಸಾ.ಸಂಸ್ಥೆಯ ಸಾಮಾನ್ಯ ಸೇವೆಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ ಎಂದು BMTC ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ಮಾಸ್ಕ್ ಧರಿಸಿ–ದೈಹಿಕ ಅಂತರ ಕಾಪಾಡಿ–ಕೈಗಳ ಸ್ವಚ್ಛತೆ ಕಾಪಾಡಿಕೊಳ್ಳಿ”
ಇದನ್ನೂ ಓದಿhttps://bit.ly/3yOm4lU