ಸಂಕ್ಷಿಪ್ತ ಸುದ್ದಿ:
ಬೆಂಗಳೂರು: ವಿಕಾಸಸೌಧದ ಕಚೇರಿಯಲ್ಲಿ ಕೋವಿಡ್ 19 ಸಂದರ್ಭದಲ್ಲಿ ಕಾರ್ಮಿಕ ಜೀವನವನ್ನು ಸುಗಮಗೊಳಿಸುವುದಕ್ಕೆ ಕಾರ್ಮಿಕ ಇಲಾಖೆ ವತಿಯಿಂದ ಕೈಗೊಂಡ ಕಾರ್ಯಕ್ರಮ ಮಾಹಿತಿಯುಳ್ಳ ಕಿರು ಹೊತ್ತಿಗೆಯನ್ನು ಮಾನ್ಯ ಕಾರ್ಮಿಕ ಸಚಿವರಾದ ಶಿವರಾಮ್ ಹೆಬ್ಬಾರ್ ಅವರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಇಲಾಖಾ ಸಂಬಂಧಿತ ಹಿರಿಯ ಅಧಿಕಾರಿ ವೃಂದವು ಉಪಸ್ಥಿತವಿತ್ತು.
“ ನಮಿಸುವ ಕೈಗಳಿಗಿಂತ ದುಡಿಯುವ ಕೈಗಳು ಶ್ರೇಷ್ಠ, ರಾಜ್ಯದ ಕಾರ್ಮಿಕ ಶ್ರೇಯೋಭಿವೃದ್ದಿಗೆ ಕೈಗೊಂಡ ಕಾರ್ಯಕ್ರಮಗಳ ಸಮಗ್ರ ಮಾಹಿತಿ ಈ ಕಿರು ಹೊತ್ತಿಗೆ ಹೊಂದಿರಲಿದೆ. ಕಾರ್ಮಿಕರ ಕಲ್ಯಾಣವೇ ನಮ್ಮ ಗುರಿ !”_ ಶ್ರೀ ಶಿವರಾಮ್ ಹೆಬ್ಬಾರ್, ಮಾನ್ಯ ಕಾರ್ಮಿಕ ಸಚಿವರು.