ಸಂಕ್ಷಿಪ್ತ ಸುದ್ದಿ:
ಬೆಂಗಳೂರು: ಕಾಡುಗೊಂಡನಹಳ್ಳಿಯ ಡಾ.ಬಿ.ಆರ್.ಅಂಬೇಡ್ಕರ್ ವೈದ್ಯಕೀಯ ಕಾಲೇಜಿನಲ್ಲಿ ನಿರ್ಮಿಸಲಾಗಿರುವ ʻ ಮಾಲಿಕ್ಯೂಲಾರ್ ಲ್ಯಾಬ್ ಮತ್ತು ಸ್ಕಿಲ್ ಲ್ಯಾಬ್ ʼಅನ್ನು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಕೆ. ಸುಧಾಕರ್ ಅವರು ಉದ್ಘಾಟಿಸಿದರು.

ನಂತರ ಲ್ಯಾಬ್ ನ ಪರಿಕರಗಳ ಉಪಯೋಗ ಹಾಗೂ ಇನ್ನಿತರ ಮಾಹಿತಿಗಳನ್ನು ತಂತ್ರಜ್ಞರಿಂದ, ಕಾಲೇಜಿನ ಸಿಬ್ಬಂದಿಯವರಿಂದ ಮಾಹಿತಿಯನ್ನು ಪಡೆದರು.
ಅಲ್ಲದೇ “ಇಲ್ಲಿನ ಕೋವಿಡ್ ಲ್ಯಾಬ್ ನಿಂದ ಬೆಂಗಳೂರಿನ ಉತ್ತರ ಭಾಗದ ಜನರಿಗೆ ಅನುಕೂಲವಾಗಲಿದೆ” ಎಂಬ ಅಭಿಪ್ರಾಯವನ್ನು ವ್ಯಕ್ತಡಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥರು, ಟ್ರಸ್ಟೀಗಳು, ಪ್ರಾಂಶುಪಾಲರು ಉಪಸ್ಥಿತರಿದ್ದರು.