ಮೋಟಾರು ವಾಹನಗಳ ಕಾಯ್ದೆ 1988 ಮತ್ತು ಕೇಂದ್ರ ಮೋಟಾರು ವಾಹನಗಳ ನಿಯಮಗಳು 1989 ರ ಅಡಿಯಲ್ಲಿ ವಿತರಿಸಿರುವ ಎಲ್ಲಾ ತರಹದ ದಾಖಲಾತಿಗಳ ಪೈಕಿ ಫೆಬ್ರುವರಿ 01, 2020 ರಿಂದ ಸಿಂಧುತ್ವ ಮುಕ್ತಾಯಗೊಂಡಿರುವಂತಹ ದಾಖಲಾತಿಗಳಿಗೆ ಸೀಮಿತ ಗೊಳಿಸಿ ಸಿಂಧುತ್ವ ಅವಧಿಯನ್ನು ಡಿಸೆಂಬರ್ 31, 2020 ವರೆಗೆ ವಿಸ್ತರಿಸಿ, ಕರ್ನಾಟಕ ರಾಜ್ಯಪಾಲರ ಆದೇಶಾನುಸಾರವಾಗಿ ಸರ್ಕಾರದ ಅಧೀನ ಕಾರ್ಯದರ್ಶಿ ಸಾರಿಗೆ ಇಲಾಖೆಯು ಆದೇಶವನ್ನು ಹೊರಡಿಸಿದೆ.

“ವಾಹನ ತೆರಿಗೆ ಪಾವತಿಗೆ ಅವಧಿ ವಿಸ್ತರಣೆ ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆ 1957 ರ ಕಲಂ 4(1) ರ ನಿಯಮಗಳನ್ನು ಸಡಿಲಗೊಳಿಸಿ, ಕರ್ನಾಟಕ ರಾಜ್ಯದ ಎಲ್ಲ ನೊಂದಾಯಿತ ವಾಹನಗಳಿಗೆ (ಹೊಸ ವಾಹನಗಳ ನೊಂದಣಿಯನ್ನು ಹೊರತುಪಡಿಸಿ) ಅನ್ವಯಿಸುವಂತೆ ದಿನಾಂಕ 15.8.2020 ಮತ್ತು15.9.2020 ರ ಒಳಗಾಗಿ ಪಾವತಿಸಬೇಕಾಗಿದ್ದ ಮೋಟಾರು ವಾಹನ ತೆರಿಗೆಯನ್ನು ದಂಡ ರಹಿತವಾಗಿ ಪಾವತಿಸಲು 30.9.2020 ರವರೆಗೆ ವಿಸ್ತರಿಸಿ ಆದೇಶಿಸಿದೆ. ಸಿಂಧುತ್ವ ಅವಧಿ ವಿಸ್ತರಣೆ ಮೋಟಾರು ವಾಹನಗಳ ಕಾಯ್ದೆ 1988 ಮತ್ತು ಕೇಂದ್ರ ಮೋಟಾರು ವಾಹನಗಳ ನಿಯಮಗಳು 1989 ರಡಿಯಲ್ಲಿ ವಿತರಿಸಿರುವ ಎಲ್ಲಾ ತರಹದ ದಾಖಲಾತಿಗಳ ಪೈಕಿ ದಿನಾಂಕ 01-02-2020 ರಿಂದ ಸಿಂಧುತ್ವ ಮುಕ್ತಾಯಗೊಂಡಿರುವಂತಹ ದಾಖಲಾತಿಗಳಿಗೆ ಸೀಮಿತಗೊಳಿಸಿ ಸಿಂಧುತ್ವ ಅವಧಿಯನ್ನು ದಿನಾಂಕ 31-12-2020 ರವರೆಗೆ ವಿಸ್ತರಿಸಿ ಆದೇಶಿಸಿದೆ” . ಶ್ರೀ ಲಕ್ಷ್ಮಣ ಎಸ್. ಸವದಿ, ಮಾನ್ಯ ಸಾರಿಗೆ ಸಚಿವರು. (ಅಧಿಸೂಚನೆಗೆ ಟ್ವೀಟ್ ಮೂಲಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ)