ಮುಧೋಳ: ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿಗೆ ಇಂದು ಭೇಟಿ ನೀಡಿದ ಮಾನ್ಯ ಗೋವಿಂದ್ ಕಾರಜೋಳ ಅವರು, ಉಕ್ಕಿ ಹರಿಯುತ್ತಿರುವ ಕೃಷ್ಣ ನದಿ, ಪ್ರವಾಹ ಪರಿಸ್ಥಿತಿಯನ್ನು ಪರಿಶೀಲಿಸಿದರು.

ಮುಧೋಳ್ ನಗರದ ಸುತ್ತಟ್ಟಿ ಗಲ್ಲಿ ವಾರ್ಡ್ ನಂ 31ರ ಸರ್ಕಾರಿ ಶಾಲೆಯಲ್ಲಿ ಸ್ಥಾಪಿಸಿರುವ ಕಾಳಜಿ ಕೇಂದ್ರಕ್ಕ ಭೇಟಿ ನೀಡಿದ ಮಾನ್ಯ ಕಾರಜೋಳ ಅವರು, ಅಡುಗೆಕೋಣೆ, ಆಹಾರ ಸಾಮಗ್ರಿ ಇತರ ಸೌಲಭ್ಯವನ್ನು ಪರಿಶೀಲಿಸಿದರು ಹಾಗೂ ಗಂಜಿಕೇಂದ್ರದಲ್ಲಿರುವ 42 ಸಂತ್ರಸ್ತರ ಅಹವಾಲುಗಳನ್ನು ಸ್ವೀಕರಿಸಿದರು.


ಮುಧೋಳ್ ನಗರದ ಹೊರವಲಯದ ಬಳಿಯಲ್ಲಿರುವ ಹಿಂದು ರುದ್ರಭೂಮಿ, ಯಾದವಾಡ ಬ್ರಿಡ್ಜ್ ಬಳಿಗೆ ಭೇಟಿ ನೀಡಿ, ಪ್ರವಾಹ ಪರಿಸ್ಥಿತಿ ಯನ್ನು ಪರಿಶೀಲಿಸಿದರು. ನಂತರ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿ, ಸುರಕ್ಷಿತ ಸ್ಥಳಗಳಲ್ಲಿರುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು.


ಮುಧೋಳ್ ತಾಲೂಕಿನ ಮಿರ್ಜಿ ಗ್ರಾಮಕ್ಕೆ ಭೇಟಿ ನೀಡಿದ ಉಪ ಮುಖ್ಯಮಂತ್ರಿ ಅವರು , ಪ್ರವಾಹದಿಂದ ಹಾನಿಗೊಳಗಾದ ಮನೆ, ಶೆಡ್, ಬೆಳೆ ಹಾನಿಯನ್ನು ಪರಿಶೀಲಿಸಿದೆ. ಸರ್ಕಾರಿ ಶಾಲೆಯಲ್ಲಿ ಸ್ಥಾಪಿಸಿರುವ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ, ಅಡುಗೆಕೋಣೆ, ಆಹಾರ ಸಾಮಗ್ರಿ ಇತರ ಸೌಲಭ್ಯವನ್ನು ಪರಿಶೀಲಿಸಿ, 150 ಸಂತ್ರಸ್ತರ ಅಹವಾಲುಗಳನ್ನು ಸ್ವೀಕರಿಸಿದರು.




ಈ ಸಂದರ್ಭದಲ್ಲಿ ಅನೇಕ ಮುಂಖಂಡರುಗಳು ಸಂಬಂಧಿಸಿದ ಇಲಾಖಾ ಅಧಿಕಾರಿ ವರ್ಗದವರು, ಸಿಬ್ಬಂದಿಯವರು ಹಾಗೂ ಗ್ರಾಮಸ್ಥರು ಹಾಜರಿದ್ದರು.