ವರದಿಗಾರರು: ಸುರೇಶ ಹಿರೇಮಠ, ಲಿಂಗಸಗೂರು.
ಲಿಂಗಸಗೂರು: ತಾಲೂಕಿನ ಈಚನಾಳ ಗ್ರಾಮದಲ್ಲಿ ಡೆಂಗ್ಯೂ-ಮಲೇರಿಯಾ ತಡೆಗಟ್ಟುವ ಮುನ್ನಚ್ಚರಿಕೆಯ ಕ್ರಮವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಗ್ರಾಮಸ್ಥರಿಗೆ ಆಶಾ ಕಾರ್ಯಕರ್ತೆಯರ ಮೂಲಕ ಸುಮಾರು 650 ಸೊಳ್ಳೆ ಪರದೆಗಳನ್ನು ಇತ್ತೀಚಿಗೆ ವಿತರಿಸಲಾಯಿತೆಂದು ವರದಿಯಾಗಿದೆ.

ಗ್ರಾಮಸ್ಥರ ಸಾಮಾನ್ಯ ಆರೋಗ್ಯ ವಿಚಾರಿಸಿ, ಮನೆಯ ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳಬೇಕು, ಕುಡಿಯುವ ಮತ್ತು ಬಳಸುವ ನೀರಿನ ಬಗ್ಗೆ ಜಾಗೃತಿಯಿರಲಿ ಎಂದು ಸೂಚಿಸಿ, ಸೊಳ್ಳೆ ಪರದೆ ಹಂಚಿಕೆ ಕುರಿತು ಪಟ್ಟಿ ಮಾಡಿಲಾಯಿತು.

ಬಸವರಾಜ ಹಿರಿಯ ವೈದ್ಯಕೀಯ ಸಿಬ್ಬಂದಿ, ಶ್ರೀಮತಿ ಶೋಭಾ ಮೇಟಿ ಆಶಾ ಸ್ಪೇಷಲ್ ಟ್ರೀಟರ್, ಅಂಗನವಾಡಿ ಶಿಕ್ಷಕಿ ಸರಸ್ವತಿ ಮತ್ತು ಆಶಾ ಕಾರ್ಯಕರ್ತೆಯರು ಹಾಜರಿದ್ದರು.