Monday, February 24, 2025
Homeಸುದ್ದಿಅಂತರಾಷ್ಟ್ರೀಯ6000 ರೈಲ್ವೆ ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯ ಕಲ್ಪಿಸಿದ ಭಾರತೀಯ ರೈಲ್ವೆ !

6000 ರೈಲ್ವೆ ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯ ಕಲ್ಪಿಸಿದ ಭಾರತೀಯ ರೈಲ್ವೆ !

ರೈಲ್ವೇ ಸಚಿವಾಲಯ:                                                                            (ಕೃಪೆ: ಪಿ ಐ ಬಿ)

* 1 ನೇ ನಿಲ್ದಾಣದಿಂದ 6000 ನಿಲ್ದಾಣದವರೆಗಿನ ಅವಧಿ 5 ವರ್ಷಗಳು: ಪ್ರಯಾಣಿಕರ ಅನುಕೂಲ ಹೆಚ್ಚಿಸುವಲ್ಲಿ ಅಸಾಧಾರಣ ವೇಗ ತೋರಿದ ಭಾರತೀಯ ರೈಲ್ವೆ

*ಡಿಜಿಟಲ್ ಇಂಡಿಯಾ ಉಪ ಕ್ರಮಗಳನ್ನು ನಿರಂತರವಾಗಿ ಮುಂದುವರಿಸುತ್ತಿರುವ ಭಾರತೀಯ ರೈಲ್ವೆ ಮತ್ತು ಉನ್ನತ ವೇಗದ ವೈ-ಫೈ ಸೌಲಭ್ಯದಿಂದ ಭಾರತದ ವಿವಿಧ ಭಾಗಗಳಿಗೆ ಸಂಪರ್ಕ

*15-05-2021 ರಂದು ಹಝಾರಿಭಾಗ್ ರೈಲ್ವೆ ನಿಲ್ದಾಣದಲ್ಲಿ ವೈ-ಫೈ ಸೌಲಭ್ಯ ಕಲ್ಪಿಸುವುದರೊಂದಿಗೆ 6000 ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯ ಒದಗಿಸಿದ ಭಾರತೀಯ ರೈಲ್ವೆ

*ಇದೇ ದಿನದಂದು ಒಡಿಶಾದ ಅಂಗುಲ್ ನಿಲ್ಲೆಯ ಜಾರಪದ ರೈಲ್ವೆ ನಿಲ್ದಾಣದಲ್ಲಿ ವೈ-ಫೈ ಸೌಲಭ್ಯ ಅನುಷ್ಠಾನ

6,000 ನೇ ರೈಲ್ವೆ ನಿಲ್ದಾಣದಲ್ಲಿ ಭಾರತೀಯ ರೈಲ್ವೆ ವೈ-ಫೈ ಸೌಲಭ್ಯ ಕಲ್ಪಿಸಿದೆ. ಭಾರತೀಯ ರೈಲ್ವೆಯ ಪ್ರಯಾಣಿಕರು ಮತ್ತು ಸಾರ್ವಜನಿಕರನ್ನು ಸಂಪರ್ಕಿಸಲು ದೂರದ ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯವನ್ನು ವಿಸ್ತರಿಸುತ್ತಿದೆ. 15-05-2021 ರಂದು ಜಾರ್ಖಂಡ್ ನ ಹಝಾರಿಬಾದ್ ನ  ಪೂರ್ವ ಕೇಂದ್ರೀಯ ರೈಲ್ವೆಯ ಧನ್ ಬಾದ್ ವಿಭಾಗದ ಹಝಾರಿಬಾದ್ ಪಟ್ಟಣದಲ್ಲಿ ವೈ-ಫೈ ಸೌಲಭ್ಯ ಕಲ್ಪಿಸುವುದರೊಂದಿಗೆ ಭಾರತೀಯ ರೈಲ್ವೆ 6000  ರೈಲು ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯವನ್ನು ಅನುಷ್ಠಾನಗೊಳಿಸಿದೆ.

2016 ರ ಜನವರಿಯಲ್ಲಿ ಮುಂಬೈ ರೈಲ್ವೆ ನಿಲ್ದಾಣದಲ್ಲಿ ಮೊದಲನೇ ವೈ-ಫೈ ಸೌಲಭ್ಯ ಕಲ್ಪಿಸುವುದರೊಂದಿಗೆ ಭಾರತೀಯ ರೈಲ್ವೆ ತನ್ನ ಯಾನ ಆರಂಭಿಸಿತ್ತು. ಇದಾದ ನಂತರ ಪೂರ್ವ ಬಂಗಾಳದ ಮಿಡ್ನಾಫುರದಲ್ಲಿ 5000 ನೇ ರೈಲ್ವೆ ನಿಲ್ದಾಣ ಮತ್ತು 15-05-2021 ರಂದು ಹಝಾರಿಬಾಗ್ ನಲ್ಲಿ 6000 ನೇ ರೈಲ್ವೆ ನಿಲ್ದಾಣದಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. ಇದೇ ದಿನದಂದು ಒಡಿಶಾದ ಅಂಗುಲ್ ಜಿಲ್ಲೆಯ ಜಾರಪದ ನಿಲ್ದಾಣದಲ್ಲಿ ವೈ-ಫೈ ಸೌಲಭ್ಯ ಕಲ್ಪಿಸಲಾಗಿದೆ.

ರೈಲ್ವೆ ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯ ದೊರಕಿಸುವ ಮೂಲಕ ಭಾರತ ಸರ್ಕಾರದ ಡಿಜಿಟಲ್ ಇಂಡಿಯಾದ ದ್ಯೇಯ ಮತ್ತು ನಿರೀಕ್ಷೆಗಳನ್ನು ಪೂರೈಸುತ್ತಿದೆ. ಗ್ರಾಮೀಣ ಮತ್ತು ನಗರದ ನಾಗರಿಕರ ನಡುವೆ ಇರುವ ಡಿಜಿಟಲ್ ಅಂತರವನ್ನು ತಗ್ಗಿಸುವ, ಗ್ರಾಮೀಣ ಭಾಗದಲ್ಲಿ ಡಿಜಿಟಲ್ ಹೆಜ್ಜೆ ಗುರುತುಗಳನ್ನು ಹೆಚ್ಚಿಸುವ ಮತ್ತು ಬಳಕೆದಾರರ ಅನುಭವವನ್ನು ವೃದ್ಧಿಸುವ ಉದ್ದೇಶವನ್ನು ಇದು ಒಳಗೊಂಡಿದೆ. ಇದೀಗ ಭಾರತೀಯ ರೈಲ್ವೆ 6000  ರೈಲ್ವೆ ನಿಲ್ದಾಣಗಳಲ್ಲಿ ವೈ-ಫೈ ಸೌಲಭ‍್ಯ ಕಲ್ಪಸಿದೆ.

ರೈಲ್ವೆ ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯದಿಂದ ರೈಲ್ವೆಗೆ ಯಾವುದೇ ವೆಚ್ಚವಾಗುವುದಿಲ್ಲ, ಸ್ವಯಂ ಸುಸ್ಥಿರತೆ ಆಧಾರದ ಮೇಲೆ ಈ ಸೌಕರ್ಯ ಒದಗಿಸಲಾಗುತ್ತಿದೆ. ರೈಲ್ವೆ ಸಚಿವಾಲಯದ ಸಾರ್ವಜನಿಕ ಸ್ವಾಮ್ಯದ ಉದ್ದಿಮೆ ರೈಲ್ ಟೆಲ್ ನ ನೆರವಿನೊಂದಿಗೆ ಈ ಸೌಲಭ್ಯ ಕಲ್ಪಿಸಲಾಗುತ್ತಿದೆ. ಗೂಗಲ್, ಡಿಒಟಿ [ಯೂಸ್ ಅಫ್ ನಡಿ], ಪಿ.ಜಿ.ಸಿ.ಐ.ಎಲ್ ಮತ್ತು ಟಾಟಾ ಟ್ರಸ್ಟ್ ನ ಸಹಭಾಗಿತ್ವದಡಿ ಈ ಸೇವೆ ದೊರೆಯುತ್ತಿದೆ.

ರೈಲ್ವೆ ನಿಲ್ದಾಣಗಳಲ್ಲಿ 15-05-2021 ರನ್ವಯ ವೈ-ಫೈ ಸೌಲಭ್ಯವಿರುವ ರಾಜ್ಯವಾರು ವಿವರ:

15-05-2021 ರಂತೆ ರಾಜ್ಯವಾರು ವೈ-ಫೈ ಸೌಲಭ್ಯವಿರುವ ನಿಲ್ದಾಣಗಳ ವಿವರ
ಕ್ರಮ ಸಂಖ್ಯೆ ರಾಜ್ಯ/ ಕೇಂದ್ರಾಡಳಿತ
ಪ್ರದೇಶಗಳು
ನಿಲ್ದಾಣಗಳ ಸಂಖ‍್ಯೆ
1 ಆಂಧ್ರಪ್ರದೇಶ 509
2 ಅರುಣಾಚಲ ಪ್ರದೇಶ 3
3 ಅಸ್ಸಾಂ 222
4 ಬಿಹಾರ್ 384
5 ಕೇಂದ್ರಾಡಳಿತ ಪ್ರದೇಶ ಚಂಡಿಘರ್ 5
6 ಚತ್ತೀಸ್ ಘಡ್ 115
7 ದೆಹಲಿ 27
8 ಗೋವಾ 20
9 ಗುಜರಾತ್ 320
10 ಹರ್ಯಾಣ 134
11 ಹಿಮಾಚಲ ಪ್ರದೇಶ 24
12 ಜಮ್ಮು ಮತ್ತು ಕಾಶ್ಮೀರ 14
13 ಜಾರ್ಖಂಡ್ 217
14 ಕರ್ನಾಟಕ 335
15 ಕೇರಳ 120
16 ಮಧ್ಯ ಪ್ರದೇಶ 393
17 ಮಹಾರಾಷ್ಟ್ರ 550
18 ಮೇಘಾಲಯ 1
19 ಮಿಜೋರಾಂ 1
20 ನಾಗಲ್ಯಾಂಡ್ 3
21 ಒಡಿಶಾ 232
22 ಪಂಜಾಬ್ 146
23 ರಾಜಸ್ಥಾನ್ 458
24 ಸಿಕ್ಕಿಂ 1
25 ತಮಿಳುನಾಡು 418
26 ತೆಲಂಗಾಣ 45
27 ತ್ರಿಪುರ 19
28 ಉತ್ತರ ಪ್ರದೇಶ 762
29 ಉತ್ತರಾಖಂಡ್ 24
30 ಪಶ್ಚಿಮ ಬಂಗಾಳ 498
  ಒಟ್ಟು 6000

Proprietor
Proprietorhttps://skynews-lgs.com/
Proprietor / Editor In Chief - Sky News-Read The World Today. URN-KR230001579 AIMASS ID No-571 KARNATAKA
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news