Saturday, January 4, 2025
Homeಅಂತರಾಷ್ಟ್ರೀಯರಾಷ್ಟ್ರೀಯ ಸುದ್ದಿ22ನೇ ಭಾರತೀಯ ಕಾನೂನು ಆಯೋಗದ ಅವಧಿಯನ್ನು ವಿಸ್ತರಿಸಲು ಕೇಂದ್ರ ಸಂಪುಟ ಒಪ್ಪಿಗೆ

22ನೇ ಭಾರತೀಯ ಕಾನೂನು ಆಯೋಗದ ಅವಧಿಯನ್ನು ವಿಸ್ತರಿಸಲು ಕೇಂದ್ರ ಸಂಪುಟ ಒಪ್ಪಿಗೆ

ಸಂಪುಟ:

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಿನ್ನೆ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ, 22ನೇ ಭಾರತೀಯ ಕಾನೂನು ಆಯೋಗದ ಅವಧಿಯನ್ನು 2024 ಆಗಸ್ಟ್ 31ರ ವರೆಗೆ ವಿಸ್ತರಿಸಲು ಅನುಮೋದನೆ ನೀಡಿದೆ.

ಭಾರತೀಯ ಕಾನೂನು ಆಯೋಗವು ಸಾಮಾನ್ಯ ಕಾನೂನಾತ್ಮಕ(ಶಾಸನಬದ್ಧವಲ್ಲದ) ಸಂಸ್ಥೆಯಾಗಿದ್ದು, ಕಾಲಕಾಲಕ್ಕೆ ಭಾರತ ಸರ್ಕಾರದಿಂದ ರಚನೆಯಾಗಿದೆ. ಆಯೋಗವನ್ನು ಮೂಲತಃ 1955ರಲ್ಲಿ ಸ್ಥಾಪಿಸಲಾಯಿತು, ಇದು ಕಾಲಕಾಲಕ್ಕೆ ಮರುರಚನೆಯಾಗುತ್ತಾ ಬಂದಿದೆ. ಪ್ರಸ್ತುತ 22ನೇ ಭಾರತೀಯ ಕಾನೂನು ಆಯೋಗದ ಅಧಿಕಾರಾವಧಿಯು 2023 ಫೆಬ್ರವರಿ  20ರಂದು ಕೊನೆಗೊಳ್ಳುತ್ತದೆ.

ವಿವಿಧ ಕಾನೂನು ಆಯೋಗಗಳು ದೇಶದ ಪ್ರಗತಿ ಮತ್ತು ಕಾನೂನಿನ ಸಂಕೇತೀಕರಣಕ್ಕೆ ಪ್ರಮುಖ ಕೊಡುಗೆ ನೀಡಲು ಸಮರ್ಥವಾಗಿವೆ. ಭಾರತೀಯ ಕಾನೂನು ಆಯೋಗವು ಇದುವರೆಗೆ 277 ವರದಿಗಳನ್ನು ಸಲ್ಲಿಸಿದೆ.

22ನೇ ಕಾನೂನು ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು ಇತ್ತೀಚೆಗೆ ಅಧಿಕಾರ ವಹಿಸಿಕೊಂಡಿದ್ದು, ಹಲವಾರು ಬಾಕಿ ಉಳಿದಿರುವ ಯೋಜನೆಗಳ ಪರೀಕ್ಷೆ ಮತ್ತು ವರದಿಗಳ ಕಾರ್ಯದಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಆದ್ದರಿಂದ, 22ನೇ ಭಾರತೀಯ ಕಾನೂನು ಆಯೋಗದ ಅವಧಿಯನ್ನು 2024 ಆಗಸ್ಟ್ 31ರ ವರೆಗೆ ವಿಸ್ತರಿಸಲಾಗಿದೆ. ವಿಸ್ತರಣೆ ಅವಧಿಯಲ್ಲಿ ಆಡಳಿತ ಮಂಡಳಿ ಮತ್ತು ಕಾರ್ಯಭಾರ ಹಿಂದಿನಂತೆ ಮುಂದುವರಿಯಲಿದೆ. ಅದು ಈ ಕೆಳಗಿನಂತಿರುತ್ತದೆ:

(ಎ) ಪೂರ್ಣಾವಧಿಯ ಅಧ್ಯಕ್ಷರು,

(ಬಿ) ನಾಲ್ವರು ಪೂರ್ಣ ಸಮಯದ ಸದಸ್ಯರು(ಸದಸ್ಯ-ಕಾರ್ಯದರ್ಶಿ ಸೇರಿದಂತೆ),

(ಸಿ) ಕಾರ್ಯದರ್ಶಿ, ಕಾನೂನು ವ್ಯವಹಾರಗಳ ಇಲಾಖೆ ಪದನಿಮಿತ್ತ ಸದಸ್ಯರಾಗಿ,

(ಡಿ) ಕಾರ್ಯದರ್ಶಿ, ಶಾಸಕಾಂಗ ಇಲಾಖೆ ಪದನಿಮಿತ್ತ ಸದಸ್ಯರಾಗಿ, ಮತ್ತು

(ಇ) ಗರಿಷ್ಠ ಐವರು ಅರೆಕಾಲಿಕ ಸದಸ್ಯರು.

Representative image

ಭಾರತೀಯ ಕಾನೂನು ಆಯೋಗವು 21.02.2020ರಂದು ಹೊರಡಿಸಿರುವ ಆದೇಶದಂತೆ, ತನ್ನ ವಿಸ್ತರಿತ ಕಾಲಾವಧಿಯಲ್ಲಿ ಅಸ್ತಿತ್ವದಲ್ಲಿರುವ ಜವಾಬ್ದಾರಿ ನಿರ್ವಹಿಸುವುದನ್ನು ಮುಂದುವರಿಸುತ್ತದೆ, ಅದರೊಂದಿಗೆ ಈ ಕೆಳಗಿನ ವಿಷಯಗಳು ಸೇರಿವೆ:

(ಎ) ಇನ್ನು ಮುಂದಕ್ಕೆ ಅಪ್ರಸ್ತುತ ಎನಿಸುವ ಕಾನೂನುಗಳನ್ನು ಗುರುತಿಸುವುದು ಮತ್ತು ಬಳಕೆಯಲ್ಲಿಲ್ಲದ ಮತ್ತು ಅನಗತ್ಯ ಶಾಸನ ಅಥವಾ ಕಾಯಿದೆಗಳನ್ನು ರದ್ದುಗೊಳಿಸಲು ಶಿಫಾರಸು ಮಾಡುವುದು.

(ಬಿ) ನಿರ್ದೇಶಿತ ತತ್ವಗಳನ್ನು ಕಾರ್ಯಗತಗೊಳಿಸಲು ಮತ್ತು ಸಂವಿಧಾನದ ಪೀಠಿಕೆಯಲ್ಲಿ ನಿಗದಿಪಡಿಸಿದ ಉದ್ದೇಶಗಳನ್ನು ಸಾಧಿಸಲು ಅಗತ್ಯವಾದ ಹೊಸ ಶಾಸನ ಅಥವಾ ಕಾಯಿದೆಗಳನ್ನು ಜಾರಿಗೊಳಿಸಲು ಸೂಚಿಸುವುದು.

(ಸಿ) ಕಾನೂನು ಮತ್ತು ನ್ಯಾಯಾಂಗ ಸಚಿವಾಲಯದ (ಕಾನೂನು ವ್ಯವಹಾರಗಳ ಇಲಾಖೆ) ಮೂಲಕ ಸರ್ಕಾರವು ನಿರ್ದಿಷ್ಟವಾಗಿ ಉಲ್ಲೇಖಿಸಬಹುದಾದ ಕಾನೂನು ಮತ್ತು ನ್ಯಾಯಾಂಗ ಆಡಳಿತಕ್ಕೆ ಸಂಬಂಧಿಸಿದ ಯಾವುದೇ ವಿಷಯದ ಕುರಿತು ಸರ್ಕಾರಕ್ಕೆ ತನ್ನ ಅಭಿಪ್ರಾಯ, ಸಲಹೆ ಸೂಚನೆಗಳನ್ನು ಪರಿಗಣಿಸುವುದು ಮತ್ತು ತಿಳಿಸುವುದು.

(ಡಿ) ಕಾನೂನು ಮತ್ತು ನ್ಯಾಯ ಸಚಿವಾಲಯದ (ಕಾನೂನು ವ್ಯವಹಾರಗಳ ಇಲಾಖೆ) ಮೂಲಕ ಸರ್ಕಾರವು ಉಲ್ಲೇಖಿಸಬಹುದಾದ ಯಾವುದೇ ಹೊರ ರಾಷ್ಟ್ರಗಳಿಗೆ ಸಂಶೋಧನೆಗಳನ್ನು ಒದಗಿಸುವ ಮನವಿಗಳನ್ನು ಪರಿಗಣಿಸುವುದು.

(ಇ) ಕೇಂದ್ರ ಸರ್ಕಾರಕ್ಕೆ ಕಾಲ ಕಾಲಕ್ಕೆ, ಎಲ್ಲಾ ಸಮಸ್ಯೆಗಳು, ವಿಷಯಗಳು, ಅಧ್ಯಯನಗಳು ಮತ್ತು ಸಂಶೋಧನೆಗಳ ವರದಿಗಳನ್ನು ಸಿದ್ಧಪಡಿಸುವುದು ಮತ್ತು ಸಲ್ಲಿಸುವುದು. ಜತೆಗೆ, ಒಕ್ಕೂಟ ಅಥವಾ ಯಾವುದೇ ರಾಜ್ಯ ತೆಗೆದುಕೊಳ್ಳಬೇಕಾದ ಪರಿಣಾಮಕಾರಿ ಕ್ರಮಗಳಿಗಾಗಿ ಅಂತಹ ವರದಿಗಳನ್ನು ಶಿಫಾರಸು ಮಾಡುವುದು; ಮತ್ತು

(ಎಫ್) ಕೇಂದ್ರ ಸರ್ಕಾರವು ಕಾಲ ಕಾಲಕ್ಕೆ ನಿಯೋಜಿಸಬಹುದಾದ ಇತರೆ ಕಾರ್ಯಗಳನ್ನು ನಿರ್ವಹಿಸುವುದು.

_ source:PIB

Proprietor
Proprietorhttps://skynews-lgs.com/
Proprietor / Editor In Chief - Sky News-Read The World Today. URN-KR230001579 AIMASS ID No-571 KARNATAKA
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news