2024 – 25ರ ಶೈಕ್ಷಣಿಕ ಅವಧಿಯ ಪಠ್ಯಕ್ರಮ, ಅಧ್ಯಯನ ಸಾಮಗ್ರಿಗಳು ಮತ್ತು ಮಾದರಿ ಪ್ರಶ್ನೆ ಪತ್ರಿಕೆಗಳ ಕುರಿತು ತಪ್ಪು ಮಾಹಿತಿಯ ಬಗ್ಗೆ ಎಚ್ಚರವಹಿಸುವಂತೆ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ – ಸಿಬಿಎಸ್‌ಇ, ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಸಲಹೆ ನೀಡಿದೆ.

Representative image
ಕೆಲವು ಆನ್‌ಲೈನ್ ಪೋರ್ಟಲ್‌ಗಳು ಮತ್ತು ವೆಬ್‌ಸೈಟ್‌ಗಳು ಹಳೆಯ ಲಿಂಕ್‌ಗಳು ಮತ್ತು ಪರಿಶೀಲಿಸದ ಸುದ್ದಿಗಳನ್ನು ಪ್ರಸಾರ ಮಾಡುತ್ತಿವೆ. ಇದರಿಂದ ವಿದ್ಯಾರ್ಥಿಗಳು ಮೋಸಹೋಗಬಾರದೆಂದು ಮಂಡಳಿ ತಿಳಿಸಿದೆ. ಅಧಿಕೃತ ಮಾಹಿತಿಗಾಗಿ ಸಿಬಿಎಸ್ಇ ಜಾಲತಾಣವನ್ನು ಮಾತ್ರ ಪರಿಶೀಲಿಸುವಂತೆ ಮಂಡಳಿಯು ವಿದ್ಯಾರ್ಥಿಗಳಿಗೆ ಮನವಿ ಮಾಡಿದೆ.
Click to View Advisory: https://www.cbse.gov.in/cbsenew/documents//Advisory_Link_11062024.pdf