Latest Sports: ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ, 2022ನೇ ಸಾಲಿನ ರಾಷ್ಟ್ರೀಯ ಕ್ರೀಡಾ ಪುರಸ್ಕಾರಗಳನ್ನು ಪ್ರಕಟಿಸಿದೆ. ಈ ಪುರಸ್ಕಾರಗಳಿಗೆ ಭಾಜನರಾಗಿರುವ ಕ್ರೀಡಾಪಟುಗಳಿಗೆ ಇದೇ 30ರಂದು ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಟೇಬಲ್ ಟೆನಿಸ್ ಆಟಗಾರ ಶರತ್ ಕಮಲ್ ಅಚಂತ, ಪ್ರತಿಷ್ಠಿತ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
25 ಕ್ರೀಡಾಪಟುಗಳು ಅರ್ಜುನ ಪ್ರಶಸ್ತಿ ಪಡೆದಿದ್ದಾರೆ. ಇವರದಲ್ಲಿ ಸೀಮಾ ಪುನಿಯಾ, ಲಕ್ಷ್ಯ ಸೇನ್, ನಿಖತ್ ಝರೀನ್, ಆರ್. ಪ್ರಗ್ಯಾನನಂದ, ದೀಪ ಗ್ರೇಸ್ ಎಕ್ಕಾ, ಸುಶೀಲಾದೇವಿ, ಸಾಗರ್ ಕೈಲಾಸ್ ಓವಾಲ್ಕರ್, ಓಂಪ್ರಕಾಶ್ ಮಿತ್ರವಾಲ್, ವಿಕಾಸ್ ಠಾಕೂರ್, ಮಾನಸಿ ಗಿರೀಶ್‌ಚಂದ್ರ ಜೋಶಿ ಪ್ರಮುಖರಾಗಿದ್ದಾರೆ.
ಐವರು ತರಬೇತುದಾರರು ದ್ರೋಣಚಾರ್ಯ ಪ್ರಶಸ್ತಿಗೆ ಹಾಗೂ ಮೂವರು ತರಬೇತುದಾರರು ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕ್ರೀಡೆಗಳು ಮತ್ತು ಸ್ಪರ್ಧೆಗಳಲ್ಲಿನ ಸಾಧನೆಗಾಗಿ ಕರ್ನಾಟಕದ ಅಶ್ವಿನಿ ಅಕ್ಕುಂಜೆ, ಧರ್ಮವೀರ್ ಸಿಂಗ್, ಬಿ.ಸಿ. ಸುರೇಶ್ ಮತ್ತು ನೀರ್ ಬಹಾದ್ದೂರ್ ಗುರುಂಗ್ ಈ ನಾಲ್ವರಿಗೆ ಜೀವಮಾನ ಸಾಧನೆಗಾಗಿ ಧ್ಯಾನಚಂದ್ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ.
_CLICK to follow-support us on DailuHunt