ಸಧ್ಯದ ಸಂಕ್ಷಿಪ್ತ ಸುದ್ದಿ:
ಹೊಸ ದೆಹಲಿ: ಶೂಟರ್ ಶ್ರೇಯಾಸಿ ಸಿಂಗ್ ಕೇಂದ್ರ ಬಿಜೆಪಿ ಕಛೇರಿಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ ಭೂಪೇಂದ್ರ ಯಾದವ್ ಹಾಗು ಅರುಣ್ ಸಿಂಗ್ ಅವರ ಸಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಗೊಂಡರು.

ಶ್ರೇಯಾಸಿ ಸಿಂಗ್ :
ಹೊಸದಿಲ್ಲಿಯಲ್ಲಿ 1991ರಲ್ಲಿ ಜನಿಸಿದ ಶ್ರೇಯಾಸಿ ಸಿಂಗ್ ಡಬಲ್ ಟ್ರಾಪ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಶೂಟರ್. 2018ರ ಕಾಮನ್ ವೆಲ್ತ್ ನಲ್ಲಿ ಚಿನ್ನದ ಪದಕ ಮತ್ತು 2014ರ ಕಾಮನ್ ವೆಲ್ತ್ ನಲ್ಲಿ ಸ್ವಿಲರ್ ಪದಕ ವಿಜೇತೆ. ಏಷ್ಯನ್ ಗೇಮ್ಸ್ ನಲ್ಲಿ ಕಂಚು, ಕಾಮನ್ ವೆಲ್ತ್ ಚಾಂಪಿಯನ್ ಶಿಪ್‌ನಲ್ಲಿ ಎರಡು ಬೆಳ್ಳಿ ಪದಕ ಗೆದ್ದಿರುವ ಶ್ರೇಯಾಸಿ ಸಿಂಗ್ ಅಜ್ಜ ಮತ್ತು ತಂದೆ ದೇಶದ ರೈಫಲ್ ಅಸೋಸಿಯೇಶನ್ ನಲ್ಲಿ ಅಧ್ಯಕ್ಷರಾಗಿದ್ದರು.
(ಮಾಹಿತಿ ಕೃಪೆ: ಕೇಂದ್ರ ಬಿಜೆಪಿ )