ಪ್ಲಾಟ್ ಫಾರ್ಮ್ ಗಳು ಮತ್ತು ನಿಲ್ದಾಣಗಳಲ್ಲಿ ಡಿಜಿಟಲ್ ಗಡಿಯಾರವನ್ನು ಅಳವಡಿಸುವ ಸಂಬಂಧ ಹೊಸ ಡಿಜಿಟಲ್ ಗಡಿಯಾರಗಳನ್ನು ವಿನ್ಯಾಸಗೊಳಿಸಲು ಭಾರತೀಯ ರೈಲ್ವೆ ರಾಷ್ಟ್ರವ್ಯಾಪಿ ಸ್ಪರ್ಧೆಯನ್ನು ಘೋಷಿಸಿದೆ.

ವೃತ್ತಿಪರರು, ಕಾಲೇಜು ಮತ್ತು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಮೂರು ವಿಭಾಗಗಳಲ್ಲಿ ಭಾಗವಹಿಸುವವರಿಗೆ ಸ್ಪರ್ಧೆ ಮುಕ್ತವಾಗಿದೆ. ವಿಜೇತರಿಗೆ ಐದು ಲಕ್ಷ ರೂಪಾಯಿಗಳ ಬಹುಮಾನವನ್ನು ನೀಡಲಾಗುವುದು ಎಂದು ರೈಲ್ವೆ ಮಂಡಳಿ ಹೇಳಿದೆ. ಸ್ಪರ್ಧಿಗಳು ಈ ತಿಂಗಳ ಅಂತ್ಯದವರೆಗೆ ತಮ್ಮ ವಿನ್ಯಾಸಗಳನ್ನು ಆನ್ ಲೈನ್ ನಲ್ಲಿ ಸಲ್ಲಿಸಬಹುದು.