ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ:
- ನೋಂದಾಯಿತ ಬೆಳೆಗಾರರು ಉತ್ಪಾದಿಸಿದ ಹೆಚ್ಚುವರಿ ತಂಬಾಕನ್ನು ಮತ್ತು ನೋಂದಾಯಿಸದಿರುವ ಬೆಳೆಗಾರರು ಉತ್ಪಾದಿಸಿದ ಅನಧಿಕೃತ ತಂಬಾಕನ್ನು ಯಾವುದೇ ದಂಡವಿಲ್ಲದೆ, 2022-23 ರ ಬೆಳೆ ಹಂಗಾಮಿಗೆ ಕರ್ನಾಟಕದಲ್ಲಿ ಹರಾಜು ಮೂಲಕ ಮಾರಾಟ ಮಾಡಲು ಸರ್ಕಾರದಿಂದ ಅನುಮತಿ.
2022-2023 ರ ಬೆಳೆ ಹಂಗಾಮಿನಲ್ಲಿ ಕರ್ನಾಟಕಲ್ಲಿ ಕಡಿಮೆ ಬೆಳೆ ಉತ್ಪಾದನೆಯನ್ನು ಪರಿಗಣಿಸಿ ನೋಂದಾಯಿತ ಬೆಳೆಗಾರರು ಉತ್ಪಾದಿಸುವ ಹೆಚ್ಚುವರಿ ತಂಬಾಕನ್ನು ಮತ್ತು ನೋಂದಾಯಿಸದ ಬೆಳೆಗಾರರು ಉತ್ಪಾದಿಸುವ ಅನಧಿಕೃತ ತಂಬಾಕನ್ನು ಯಾವುದೇ ದಂಡವಿಲ್ಲದೆ ಮಾರಾಟ ಮಾಡಲು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅನುಮತಿ ನೀಡಲು ಪರಿಗಣಿಸಿದ್ದಾರೆ.
ಕರ್ನಾಟಕದಲ್ಲಿ ಈ ಬೆಳೆ ಹಂಗಾಮಿನಲ್ಲಿ, 40,207 ರೈತರು 60,782 ಹೆಕ್ಟೇರ್ ಪ್ರದೇಶದಲ್ಲಿ ಎಫ್‌ಸಿವಿ( flue cured Virginia tobacco) ತಂಬಾಕನ್ನು ಬೆಳೆದಿದ್ದಾರೆ. 2022 ರ ಜೂನ್ ಮತ್ತು ಜುಲೈ ತಿಂಗಳ ನಿರಂತರ ಅವ್ಯಾಹತ ಮಳೆಯಿಂದಾಗಿ ಕರ್ನಾಟಕದಲ್ಲಿ ಎಫ್‌ಸಿವಿ ತಂಬಾಕಿನ ಒಟ್ಟು ಉತ್ಪಾದನೆಯು ತಂಬಾಕು ಮಂಡಳಿಯು ನಿಗದಿಪಡಿಸಿದ 100 ಮಿಲಿಯನ್ ಕೆಜಿ ಬೆಳೆ ಗಾತ್ರಕ್ಕೆ ಬದಲಾಗಿ 59.78 ಮಿಲಿಯನ್ ಕೆಜಿಗಳಷ್ಟು ಮಾತ್ರ ಬೆಳೆಗಾರರ ಕೈಗೆ ಸಿಕ್ಕಿದೆ.

ಹೆಚ್ಚುವರಿ ಎಫ್‌ಸಿವಿ ತಂಬಾಕು ಮಾರಾಟಕ್ಕೆ ಯಾವುದೇ ದಂಡ ವಿಧಿಸದ ನಿರ್ಧಾರವು ಈ ಬೆಳೆ ಋತುವಿನಲ್ಲಿ ಕಡಿಮೆ ಉತ್ಪಾದನೆಯಿಂದ ನಷ್ಟವನ್ನು ಹೊಂದಿಸಲು ಕರ್ನಾಟಕದ ರೈತರಿಗೆ ಸಹಾಯವಾಗುತ್ತದೆ. ಇದರಿಂದ ಎಫ್‌ಸಿವಿ ತಂಬಾಕಿನ ಕಡಿಮೆ ಉತ್ಪಾದನೆ ಮತ್ತು ಕಡಿಮೆ ಗಳಿಕೆಯಿಂದಾಗಿ ರೈತರಿಗುಂಟಾಗಿರುವ ಆರ್ಥಿಕ ದುಸ್ಥಿತಿಯನ್ನು ನಿವಾರಿಸಲು ಸಹಾಯ ಮಾಡುತ್ತದೆ ಮತ್ತು ಬೆಳೆಗಾರರಿಗೆ ತಮ್ಮ ಜೀವನೋಪಾಯವನ್ನು ಮುಂದುವರಿಸಲು ಹೆಚ್ಚು ಸಹಾಯ ಮಾಡುತ್ತದೆ.
_Source:PIB