ಸುದ್ದಿಸಂಗ್ರಹ: ಸುರೇಶ ಹಿರೇಮಠ, ಲಿಂಗಸಗೂರು ವರದಿಗಾರರು.
ಹುನಗುಂದ: ತಾಲೂಕಿನ ಸಿದ್ಧನಕೊಳ್ಳದ ಶ್ರೀ ಸಿದ್ದಪ್ಪಜ್ಜನ ಮಠದಲ್ಲಿ ಭಕ್ತರಿಗೆ ದರ್ಶನ ಹಾಗೂ ನಿರಂತರ ಅನ್ನ ದಾಸೋಹವನ್ನು ಪ್ರಾರಂಭಿಸಲಾಗಿದೆ ಎಂದು ಶ್ರೀ ಮಠದ ಡಾ.ಶಿವಕುಮಾರ ಸ್ವಾಮಿಜಿ ತಿಳಿಸಿದ್ದಾರೆ.
ಭಕ್ತರು ಶ್ರೀ ಮಠಕ್ಕೆ ಬರುವಾಗ ಕಡ್ಡಾಯವಾಗಿ ಮಾಸ್ಕ್-ಸ್ಯಾನೀಟೈಸರ್ ಬಳಸಬೇಕು , ಕೈ-ಕಾಲು-ಮುಖ ತೊಳೆದುಕೊಂಡು ದರ್ಶನಕ್ಕೆ ಸಾಮಾಜಿಕ ಅಂತರದೊಂದಿಗೆ ಸಾಗಬೇಕು ಮತ್ತು ಅನ್ನದಾಸೋಹಕ್ಕೆ ಕೂಡಾ ಸಾಮಾಜಿಕ ಅಂತರ ಶುಚಿತ್ವ ಕಾಯ್ದುಕೊಳ್ಳಬೇಕು, ಶ್ರೀ ಮಠದ ಆವರಣದಲ್ಲಿ ಸ್ವಚ್ಛತೆ ಕಾಪಾಡಬೇಕು, ಗುಂಪಾಗಿ ಕೂರುವುದು-ಮಾತನಾಡುವುದು ಮಾಡದೇ ಕೋವಿಡ್-19 ಕುರಿತಾದ ಮುಂಜಾಗ್ರತೆಗಳನ್ನು ಭಕ್ತವೃಂದವು ಅನುಸರಿಸಬೇಕೆಂದು ಡಾ. ಶಿವಕುಮಾರ ಸ್ವಾಮಿಜಿಯವರು ಸೂಚಿಸಿದ್ದಾರೆ.
ಶ್ರೀಮಠದಲ್ಲಿ ಲಾಕ್‌ಡೌನ್ ನಂತರ ಪ್ರಾರಂಭಿಸಲಾದ ಅನ್ನದಾಸೋಹವನ್ನು ಸ್ವತಃ ಡಾ.ಶಿವಕುಮಾರ ಸ್ವಾಮಿಜಿಯವರು ಭಕ್ತರಿಗೆ ಜಾಗೃತಿ ಬಗ್ಗೆ ತಿಳಿಹೇಳುತ್ತಾ ಉಣಬಡಿಸಿದರು. ಶ್ರೀಗಳ, ಶ್ರೀಮಠದ ಮತ್ತು ಭಕ್ತರ ಕಾಳಜಿಗೆ ಬಿಚ್ಚು ಮನಸಿನ ನುಡಿಗೆ ನೆರೆದ ಭಕ್ತರು ಆಜ್ಞಾಪೂರಕವಾಗಿ ಮೆಚ್ಚುಗೆ ಸೂಚಿಸಿದರು.