ಸಧ್ಯದ ಸಂಕ್ಷಿಪ್ತ ಸುದ್ದಿ:
ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಲಸಿಕಾಕರಣಕ್ಕೆ ತೀವ್ರತೆಯನ್ನು ಹೆಚ್ಚಿಸಲು ಹಾಗೂ ಪರಿಣಾಮಕಾರಿಯಾಗಿ ನಿರ್ವಹಿಸಲು, ಹಿರಿಯ ನಾಗರಿಕರಿಗೆ ಮತ್ತು ವಿಶೇಷಚೇತನರಿಗೆ ಅನುಕೂಲವಾಗಲೆಂದು ಮನೆಗೆ ಸಮೀಪ ಕೋವಿಡ್ ಲಸಿಕಾಕರಣ ಕೇಂದ್ರ ಆಯೋಜಿಸಿಲು ರಾಷ್ಟ್ರೀಯ ಆರೋಗ್ಯ ಅಭಿಯಾನ ನಿರ್ದೇಶಕರು ತಿಳಿಸಿದ್ದಾರೆ.

ಹತ್ತಿರದ ಸಮುದಾಯ ಕೇಂದ್ರ, ನಿವಾಸಿ ಕಲ್ಯಾಣ ಸಂಘಗಳ ಕೇಂದ್ರಗಳು, ಪಂಚಾಯತ್ ಕಟ್ಟಡ, ಶಾಲೆ-ಕಾಲೇಜುಗಳಲ್ಲಿ ಆಯೋಜಿಸಬಹುದೆಂದು ಅಭಿಯಾನ ನಿರ್ದೇಶಕರು ತಿಳಿಸಿದ್ದಾರೆ.
ಇದಕ್ಕೆ ಸಂಬಂಧಿಸಿದ ಮಾರ್ಗದರ್ಶಿಗಳನ್ನು ಸೂಕ್ತ ಕ್ರಮಕ್ಕಾಗಿ ಹಾಗೂ ಮಾಹಿತಿಗಾಗಿ ಸಂಬಂಧಿಸಿದ ಇಲಾಖೆಗಳಿಗೆ ಪತ್ರವನ್ನು ರವಾನಿಸಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಒಟ್ಟಿನಲ್ಲಿ ಲಸಿಕಾಕರಣದ ಭಾಗವಾಗಿ ಇದೊಂದು ಉತ್ತಮ ಹಾಗೂ ತ್ವರಿತಗತಿಯ ಹೆಜ್ಜೆಯೆಂದು ಭಾವಿಸಬಹುದು.
