ಹಾಸನ: ಅನಾರೋಗ್ಯದಿಂದ ಬಳಲುತ್ತಿರುವ ಪರಿಸರ ಕಾರ್ಯಕರ್ತೆ ಸಾಲುಮರದ ತಿಮ್ಮಕ್ಕ ಅವರನ್ನು ಇಂದು ಸಾಯಂಕಾಲ ನಗರದ ಮಣಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರಗೆ ದಾಖಲಿಸಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ವರದಿಯಾಗಿದೆ.
ಹೊಟ್ಟೆ ನೋವು, ವಾಂತಿ-ಭೇದಿಯಿಂದ ತೀವ್ರ ಅಸ್ವಸ್ಥಗೊಂಡಿರುವ ಅವರನ್ನು ಆಸ್ಪತ್ರಗೆ ಸೇರಿಸಲಾಗಿದ್ದು, ಯಾವುದೇ ತೊಂದರೆಯಿಲ್ಲ ಸ್ಕ್ಯಾನಿಂಗ್ ಬಳಿಕ ಆರೋಗ್ಯ ಸ್ಥಿತಿಗತಿ ಗಮನಿಸಿ ಡಿಸ್‌ಚಾರ್ಜ ಮಾಡಲಾಗುವುದೆಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ಸದ್ಯಕ್ಕೆ ದತ್ತು ಪುತ್ರ ಬಳ್ಳೂರು ಉಮೇಶ ಜೋತೆಗಿದ್ದು ತಿಮ್ಮಕ್ಕನವರ ಕಾಳಜಿವಹಿಸಿಕೊಳ್ಳುತ್ತಿದ್ದಾರೆ.