ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ:
ಎಲೆಗಳ ಸಿಂಪಡಣೆಯಾಗಿ ಬಳಸಲಾಗುವ ಇಫ್ಕೊ ಸೂಕ್ಷ್ಮ ಪೋಷಕಾಂಶ ಯೂರಿಯಾ (ದ್ರವ) (nano-urea (liquid))ಪರಿಣಾಮವನ್ನು ಅಧ್ಯಯನ ಮಾಡಲು, ಆಯ್ದ 20 ಪ್ರದೇಶಗಳಲ್ಲಿ ಆಯ್ದ ಬೆಳೆಗಳಲ್ಲಿ ಅಧ್ಯಯನವನ್ನು ನಡೆಸಲಾಯಿತು ಎಂದು ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಆರ್ಎ) ತಿಳಿಸಿದೆ.
ಸಾಂಪ್ರದಾಯಿಕ ಯೂರಿಯಾದ ಬದಲು ಸೂಕ್ಷ್ಮ ಪೋಷಕಾಂಶ ಯೂರಿಯಾವನ್ನು ಸಿಂಪಡಣೆಯಾಗಿ ಬಳಸಬಹುದು ಎಂದು ಅಧ್ಯಯನವು ತೋರಿಸಿದೆ. ಸೂಕ್ಷ್ಮ ಪೋಷಕಾಂಶ ಯೂರಿಯಾ ಸಿಂಪಡಿಸುವ ಗುಣದ ಜೊತೆಗೆ, ಸಾಂಪ್ರದಾಯಿಕ ಯೂರಿಯಾ ಬಳಕೆಗಿಂತ 3-8% ಹೆಚ್ಚಿನ ಇಳುವರಿ ಪ್ರಯೋಜನವಿದೆ. ಈ ಹಿನ್ನೆಲೆಯಲ್ಲಿ, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ (ಡಿಎ &ಎಫ್ಡಬ್ಲ್ಯೂ) ರಸಗೊಬ್ಬರ ನಿಯಂತ್ರಣ ಆದೇಶ -1985 ರಲ್ಲಿ ಸೂಕ್ಷ್ಮ ಪೋಷಕಾಂಶ ಯೂರಿಯಾವನ್ನು ಸೂಕ್ಷ್ಮ ಪೋಷಕಾಂಶ ಸಾರಜನಕ ರಸಗೊಬ್ಬರಗಳಾಗಿ ತಾತ್ಕಾಲಿಕವಾಗಿ ಘೋಷಿಸಿದೆ.
ಇಫ್ಕೊ ಮತ್ತು ಸಿಐಎಲ್ ಸೂಕ್ಷ್ಮ ಪೋಷಕಾಂಶ ಡಿಎಪಿಯನ್ನು ಅಭಿವೃದ್ಧಿಪಡಿಸಿವೆ ಮತ್ತು ಆಯ್ದ ಐಕ್ಯೂಆರ್ಎ ಸಂಸ್ಥೆಗಳು / ಎಸ್ಎಯುಗಳಲ್ಲಿ ಆಯ್ದ ಬೆಳೆಗಳ ಮೇಲೆ ಪ್ರಾಥಮಿಕ ಕ್ಷೇತ್ರ ಪರೀಕ್ಷೆಗಳನ್ನು ನಡೆಸಿವೆ. ಸೂಕ್ಷ್ಮ ಪೋಷಕಾಂಶ ಡಿಎಪಿಯನ್ನು ಬೀಜ ಸಂಸ್ಕರಣೆ ಮತ್ತು ಸಿಂಪಡಣೆಯಾಗಿ ಬಳಸುವುದರಿಂದ ಸಾಂಪ್ರದಾಯಿಕ ಕಣಗಳ ಡಿಎಪಿಯನ್ನು ಉಳಿಸಬಹುದು ಎಂದು ವರದಿ ಸೂಚಿಸಿದೆ. ಅದರಂತೆ, ರಸಗೊಬ್ಬರ ನಿಯಂತ್ರಣ ಆದೇಶ -1985 ರ ಅಡಿಯಲ್ಲಿ ಭಾರತ ಸರ್ಕಾರವು ಸೂಕ್ಷ್ಮ ಪೋಷಕಾಂಶ ಡಿಎಪಿಯನ್ನು ಘೋಷಿಸಿದೆ. ಇದಲ್ಲದೆ, ಕೋರಮಂಡಲ್ ಇಂಟರ್ನ್ಯಾಷನಲ್ ಲಿಮಿಟೆಡ್ (ಸಿಐಎಲ್) ಮತ್ತು ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ ಕೋಆಪರೇಟಿವ್ ಲಿಮಿಟೆಡ್ (ಇಫ್ಕೊ) ಗೆ ಸೂಕ್ಷ್ಮ ಪೋಷಕಾಂಶ ಡಿಎಪಿ ಉತ್ಪಾದಿಸಲು ಅನುಮತಿ ನೀಡಲಾಗಿದೆ.
ಸೂಕ್ಷ್ಮ ಪೋಷಕಾಂಶಗಳ ಯೂರಿಯಾ ಉತ್ಪಾದನಾ ಕೇಂದ್ರಗಳ ಸ್ಥಾಪನೆಯಲ್ಲಿ ಭಾರತ ಸರ್ಕಾರಕ್ಕೆ ಯಾವುದೇ ನೇರ ಪಾತ್ರವಿರಲಿಲ್ಲ. ಆದಾಗ್ಯೂ, ಇಫ್ಕೊ ಕಲೋಲ್, ಫುಲ್ಪುರ್ ಮತ್ತು ಅಯೋನ್ಲಾದಲ್ಲಿ 17 ಕೋಟಿ ಬಾಟಲಿಗಳ ಸಾಮರ್ಥ್ಯದ ಮೂರು ಸೂಕ್ಷ್ಮ ಪೋಷಕಾಂಶ ಯೂರಿಯಾ ಘಟಕಗಳನ್ನು ಸ್ಥಾಪಿಸಿದೆ.
ಇಫ್ಕೊ ಈ ವರ್ಷದ ಮಾರ್ಚ್ 8 ರಿಂದ ತನ್ನ ಕಲೋಲ್ ಸ್ಥಾವರದಲ್ಲಿ ಡಿಎಪಿಯ ವಾಣಿಜ್ಯ ಉತ್ಪಾದನೆಯನ್ನು ಪ್ರಾರಂಭಿಸಿತು. ಕಾಂಡ್ಲಾ ಮತ್ತು ಪಾರಾದೀಪ್ ನಲ್ಲಿ ಇನ್ನೂ ಎರಡು ಘಟಕಗಳನ್ನು ಸ್ಥಾಪಿಸಲಾಗುವುದು. ಕೋರಮಂಡಲ್ ಇಂಟರ್ನ್ಯಾಷನಲ್ ಲಿಮಿಟೆಡ್ ಆಂಧ್ರಪ್ರದೇಶದಲ್ಲಿ ಅತ್ಯಾಧುನಿಕ ಸೂಕ್ಷ್ಮ ಪೋಷಕಾಂಶ ಡಿಎಪಿ ಉತ್ಪಾದನಾ ಸೌಲಭ್ಯವನ್ನು ಸ್ಥಾಪಿಸಿದ್ದು, ವರ್ಷಕ್ಕೆ 4 ಕೋಟಿ ಬಾಟಲಿಗಳ (ಪ್ರತಿ ಬಾಟಲಿಗೆ 1 ಲೀಟರ್) ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ.
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ್ ಖೂಬಾ ಅವರು ನಿನ್ನೆ ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ಈ ವಿಷಯ ತಿಳಿಸಿದರು.
Source:PIB