ವರದಿಗಾರರು: ಸುರೇಶ ಹಿರೇಮಠ, ಲಿಂಗಸಗೂರು.
ಲಿಂಗಸಗೂರು: ರಾಜ್ಯ ಸರ್ಕಾರ ಆದೇಶದಂತೆ ಸಂತೆಕೆಲ್ಲೂರು ಗ್ರಾಮದಲ್ಲಿ ಮುಖಗವಸು ದಿನವನ್ನು ಆಚರಣೆ ಮಾಡಲಾಯಿತು.

ಗ್ರಾಮ ಪಂಚಾಯಿತಿ ಪದಾಧಿಕಾರಿಗಳು ಮತ್ತು ಸದಸ್ಯರುಗಳು ಸೇರಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಗ್ರಾಮದ ಮುಖ್ಯ ಬೀದಿಗಳಲ್ಲಿ ಪಥ ಸಂಚಲನದ ಮೂಲಕ ಜನರಲ್ಲಿ ಮಾಸ್ಕ್‌ನ್ನು ಕಡ್ಡಾಯವಾಗಿ ಬಳಸಬೇಕು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಮತ್ತು ಮನೆಯಲ್ಲಿ ವ್ಯಾಪಾರದ ಸ್ಥಳಗಳಲ್ಲಿ ಸ್ಯಾನೀಟೈಸರ್ ಬಳಸಿ ಕೈಗಳನ್ನು ತೊಳೆದುಕೊಳ್ಳಬೇಕು ಇವುಗಳಿಂದ ಕೋವಿಡ್-19 ಸಾಂಕ್ರಾಮಿಕವನ್ನು ಆದಷ್ಟೂ ತಡೆಗಟ್ಟಬಹುದು ಎಂದು ಜಾಗೃತಿ ಮೂಡಿಸಲಾಯಿತು.

ಮುಖಗವಸು ದಿನ ಆಚರಣೆಯ ಹಾಗೂ ಜಾಗೃತಿ ಜಾಥಾದ ನೇತೃತ್ವವನ್ನು ಕ್ಷಯರೋಗ ತಜ್ಞರಾದ ಮೋಯಿನ್ ಸಾಬ್ ರಾಯಚೂರು, ಗವಿಸಿದ್ಧಪ್ಪ ಸಾಹುಕಾರ ತಾಲೂಕ ಪಂಚಾಯತ್ ಸದಸ್ಯರು, ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಶ್ರೀದೇವಿ ಹಿರೇಮಠ, ಕ್ಷಯರೋಗ ವಿಭಾಗದ ಸಿಬ್ಬಂದಿಯವರಾದ ಮಹಾಂತೇಶ ಬ್ಯಾಳಿ, ದೇವರಾಜ್, ರವೀಂದ್ರ ಮತ್ತು ಆರೋಗ್ಯ ಸಿಬ್ಬಂದಿ ಸಹೋದರಿಯರು, ಆಶಾ ಕಾರ್ಯಕರ್ತರು, ಅಂಗನವಾಡಿ ಶಿಕ್ಷಕಿಯರು-ಕಾರ್ಯಕರ್ತರು ಭಾಗವಹಿಸಿದ್ದರು.