ವರದಿಗಾರರು: ಸುರೇಶ ಹಿರೇಮಠ, ಲಿಂಗಸಗೂರು.
ಲಿಂಗಸಗೂರು: ಸಂತೆಕೆಲ್ಲೂರು ಗ್ರಾಮದಲ್ಲಿ ಕಳೆದವಾರ ಗ್ರಾಮಸ್ಥರ ಸಾಮಾನ್ಯ ಆರೋಗ್ಯ ವಿಚಾರಣೆ ಮತ್ತು ಕುಡಿಯುವ ಮತ್ತು ಬಳಸುವ ನೀರಿನ ಕುರಿತು ಜಾಗೃತಿ ಮೂಡಿಸಿ, ನೀರು ಸಂಗ್ರಹಣೆ ಕುರಿತು ಮುನ್ನಚ್ಚರಿಕೆ ನೀಡಿ, ಸಂಗ್ರಹಣೆ ಮತ್ತು ಬಳಕೆ ಮತ್ತು ಶುಚಿತ್ವ ಕುರಿತು ಗ್ರಾಮಸ್ಥರಲ್ಲಿ ತಿಳಿಸಿ ಜಾಗೃತಿ ಮೂಡಿಸಲಾಯಿತು.
ಸಾಮೂಹಿಕ ಮತ್ತು ವೈಯಕ್ತಿಕವಾಗಿ ಬಳಸಲಾಗುವ ನೀರಿನ ಮೂಲಗಳು ಕುಡಿಯಲು ಯೋಗ್ಯವಾಗಿವೆಯೇ ಎನ್ನುವುದನ್ನು ಪರೀಕ್ಷಿಸಿ ದೃಢಪಡಿಸಬೇಕು, ಅದರ ಫಲಿತಾಂಶವನ್ನು ಪ್ರಚುರಪಡಿಸಬೇಕು. ರಾಸಾಯನಿಕ ಅಂಶಗಳಿರುವ ನೀರಿನ ಮೂಲಗಳಿಗೆ ಕೆಂಪು ಬಣ್ಣ, ಸುರಕ್ಷಿತ ಮೂಲಗಳಿಗೆ ಹಸಿರು ಬಣ್ಣಗಳಿಂದ ಗುರುತಿಸಬೇಕು. ಬ್ಯಾಕ್ಟೀರಿಯಾ ಇರುವ ನೀರನ್ನು ಸಂಸ್ಕರಿಸಿದ ಬಳಿಕವೇ ಉಪಯೋಗಿಸಬೇಕು, ಆಹಾರ ಭದ್ರತೆಯಂತೆ ನೀರು ಭದ್ರತೆ, ಜಲ ಸಂರಕ್ಷಣೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಯಿತು ಅಲ್ಲದೇ ಗ್ರಾಮದ ಜನರ ಸಾಮಾನ್ಯ ಆರೋಗ್ಯ ವಿಚಾರಿಸಲಾಯಿತು.

ಶುದ್ಧ ನೀರು ಬಳಕೆ, ಶುದ್ಧ ಮೂಲಗಳಿಂದ ಕುಡಿವ ಪೂರೈಕೆ, ಅರ್ಸೆನಿಕ್, ಫ್ಲೋರೈಡ್, ಕಬ್ಬಿಣದ ಅಂಶ ಹೇರಳವಾಗಿರುವ ನೀರಿನ ಮೂಲಗಳನ್ನು ಪತ್ತೆ ಮಾಡಿ ಜನರಿಗೆ ಶುದ್ಧ ನೀರು ಉಪಯೊಗಿಸಬೇಕು, ಈ ಮೂಲಕ ಜನರ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಜಾಗೃತಿ ಮೂಡಿಸಲಾಯಿತು.
ನೀರು ಮತ್ತು ನೈರ್ಮಲ್ಯ 10 ಸಂಗ್ರಹಿತ ಸಂದೇಶಗಳು ಇಲ್ಲಿವೆ
- ಕೈಗಳನ್ನು ಸರಿಯಾಗಿ ತೊಳೆಯಬೇಕೆಂದರೆ ಸ್ವಲ್ಪ ಸಾಬೂನನ್ನು ಬಳಸಿ. 10 ಸೆಕೆಂಡುಗಳ ಕಾಲ ಉಜ್ಜಿದ ನಂತರ ತೊಳೆಯಿರಿ ಮತ್ತು ಗಾಳಿಯಲ್ಲಿ ಒಣಗಲು ಬಿಡಿ ಅಥವಾ ಸ್ವಚ್ಛವಾದ ಬಟ್ಟೆ/ಕಾಗದದಿಂದ ಒರೆಸಿಕೊಳ್ಳಿ, ಕೊಳಕು ಬಟ್ಟೆಯಿಂದಲ್ಲ.
- ನಿಮ್ಮ ಮುಖದ ಮೇಲಿನ T ಆಕಾರದ ವಲಯವನ್ನು (ಕಣ್ಣುಗಳು, ಮೂಗು ಮತ್ತು ಬಾಯಿ) ಮುಟ್ಟಿಕೊಳ್ಳುವ ಮುನ್ನ ನಿಮ್ಮ ಕೈಗಳನ್ನು ಸರಿಯಾಗಿ ತೊಳೆದುಕೊಳ್ಳಿ, ಏಕೆಂದರೆ ಈ ವಲಯದಿಂದಲೇ ರೋಗಾಣುಗಳು ದೇಹವನ್ನು ಪ್ರವೇಶಿಸುವುದು. ನಿಮಗೆ ಸಾಧ್ಯವಾದಷ್ಟೂ ಈ T ವಲಯವನ್ನು ಮುಟ್ಟಿಕೊಳ್ಳುವುದನ್ನು ತಪ್ಪಿಸಿ.
- ಆಹಾರ ತಯಾರಿಸುವ ಮುನ್ನ, ಆಹಾರ ಸೇವಿಸುವ ಅಥವಾ ಶಿಶುಗಳಿಗೆ ಆಹಾರ ನೀಡುವ ಮುನ್ನ, ಮೂತ್ರ, ಮಲ ವಿಸರ್ಜನೆಯ ನಂತರ ಅಥವಾ ಮಗುವನ್ನು ಸ್ವಚ್ಛಗೊಳಿಸಿದ ನಂತರ ಅಥವಾ ಯಾರಾದರೂ ಕಾಯಿಲೆಯಾದವರಿಗೆ ಸಹಾಯ ಮಾಡಿದ ನಂತರ ನಿಮ್ಮ ಕೈಗಳನ್ನು ತೊಳೆದುಕೊಳ್ಳಿ.
- ನಿಮ್ಮ ದೇಹ ಮತ್ತು ಬಟ್ಟೆಗಳನ್ನು ತಾಜಾ ಮತ್ತು ಸ್ವಚ್ಛವಾಗಿರಿಸಿಕೊಳ್ಳಿ. ನಿಮ್ಮ ಉಗುರುಗಳು ಮತ್ತು ಕಾಲ್ಬೆರಳುಗಳು, ಹಲ್ಲುಗಳು ಮತ್ತು ಕಿವಿಗಳು, ಮುಖ ಮತ್ತು ಕೂದಲನ್ನು ಸ್ವಚ್ಛವಾಗಿರಿಸಿಕೊಳ್ಳಿ. ಶೂಗಳು/ಚಪ್ಪಲಿಗಳು ಕ್ರಿಮಿಕೀಟಗಳಿಂದ ರಕ್ಷಣೆ ನೀಡುತ್ತವೆ.
- ರೋಗಾಣುಗಳನ್ನು ಹರಡುವಂತಹ ನೊಣಗಳುನ್ನು ಮನುಷ್ಯರ ಅಥವಾ ಪ್ರಾಣಿಗಳ ಮಲ-ಮೂತ್ರದ ಸಮೀಪ ಬಾರದಂತೆ ನೋಡಿಕೊಳ್ಳಿ. ಶೌಚಾಲಯವನ್ನು ಬಳಸಿ ಮತ್ತು ನಂತರ ನಿಮ್ಮ ಕೈಗಳನ್ನು ತೊಳೆದುಕೊಳ್ಳಿ.
- ನಿಮ್ಮ ಮುಖವನ್ನು ತಾಜಾ ಮತ್ತು ಸ್ವಚ್ಛವಾಗಿರಿಸಿಕೊಳ್ಳಿ. ಅಂಟುಳ್ಳ ಕಣ್ಣುಗಳ ಹತ್ತಿರ ನೊಣಗಳು ಗುಂಯ್‌ಗುಟ್ಟಬಹುದು, ಹೀಗಾಗಿ, ಬೆಳಗ್ಗೆ ಮತ್ತು ಸಂಜೆ ಸ್ವಲ್ಪ ಸ್ವಚ್ಛ ನೀರಿನಿಂದ ಮುಖವನ್ನು ಚೆನ್ನಾಗಿ ತೊಳೆದುಕೊಳ್ಳಿ.
- ಸ್ವಚ್ಛವಾದ, ಸುರಕ್ಷಿತವಾದ ನೀರನ್ನು ಕೊಳಕು ಕೈಗಳು ಅಥವಾ ಲೋಟಗಳಿಂದ ಮುಟ್ಟಬೇಡಿ. ನೀರನ್ನು ರೋಗಾಣುಗಳಿಂದ ಮುಕ್ತವಾಗಿ, ಸುರಕ್ಷಿತವಾಗಿಡಿ.
- ಸೂರ್ಯನ ಕಿರಣಗಳು ನೀರನ್ನು ಹೆಚ್ಚು ಸುರಕ್ಷಿತವನ್ನಾಗಿ ಮಾಡುತ್ತವೆ. ನೀರನ್ನು ಪ್ಲಾಸ್ಟಿಕ್ ಬಾಟಲ್‌ನೊಳಗೆ ಶೋಧಿಸಿ ತುಂಬಿಸಿ ಮತ್ತು ಆರು ಗಂಟೆಗಳವರೆಗೆ ಹಾಗೇ ಬಿಟ್ಟುಬಿಡಿ ನಂತರ ಅದು ಕುಡಿಯಲು ಸುರಕ್ಷಿತವಾಗುತ್ತದೆ.
- ನಿಮಗೆ ಸಾಧ್ಯವಾದಲ್ಲಿ, ತಟ್ಟೆ ಮತ್ತು ಇತರ ಪಾತ್ರೆಗಳನ್ನು ತೊಳೆದ ನಂತರ ಒಣಗಿಸಲು ಸೂರ್ಯ ಕಿರಣಗಳನ್ನು ಬಳಸಿ, ಇದರಿಂದ ರೋಗಾಣುಗಳು ನಾಶವಾಗುತ್ತವೆ.
- ನೊಣಗಳನ್ನು ಕೊಲ್ಲಲು ಅಥವಾ ಕಡಿಮೆ ಮಾಡಲು ಮನೆ ಮತ್ತು ಸಮುದಾಯವನ್ನು ಕಸ ಮತ್ತು ಕೊಳಕು ಇಲ್ಲದೇ ಸ್ವಚ್ಛವಾಗಿರಿಸಿಕೊಳ್ಳಿ. ಕಸವನ್ನು ಸಂಗ್ರಹಿಸುವ, ಸುಡುವ ಅಥವ ಹೂಳುವ ತನಕ ಭದ್ರವಾಗಿ ಶೇಖರಿಸಿ.