ಹೌದು, ನಟ- ನಿರ್ದೇಶಕ ಉಪೇಂದ್ರ ಅವರು, ಕೋವಿಡ್-19 ಎರಡನೇ ಅಲೆಯ ಸಂದರ್ಭದಲ್ಲಿ, ರೈತರು ತಾವು ಬೆಳೆದ ಬೆಳೆಯು ವ್ಯಾಪಾರವಾಗದೇ ಸಂಕಷ್ಟದಲ್ಲಿ ಇದ್ದಲ್ಲಿ ಅವರಿಂದ ಸೂಕ್ತ ಬೆಲೆಗೆ ಕೊಂಡು, ಅವಶ್ಯಕತೆ ಇರುವವರಿಗೆ ಹಂಚಲು ತೀರ್ಮಾನಿಸಿದ್ದು ಈ ಕುರಿತು ಅವರು ಸಂಪರ್ಕಿಸಬೇಕಾದ ಮೋಬೈಲ್ ಸಂಖ್ಯೆ ಹಾಗೂ ದಿನಾಂಕವನ್ನು ತಮ್ಮ ಟ್ವೀಟ್ ಖಾತೆಯಲ್ಲಿ ಸೂಚಿಸಿದ್ದಾರೆ. ಸಂಪರ್ಕಿಸಬೇಕಾದ ಸಂಖ್ಯೆ 9845763396 (24 ಮೇ 2021 ದಿನಾಂಕದೊಳಗೆ)



ಕೋವಿಡ್-19 ಈ ಸಂಕಷ್ಟದಲ್ಲಿ ಇತರರಿಗೆ ನೆರವಾಗಲು, ಕಳೇದ ಹಲವು ದಿನಗಳಿಂದ ಚಿತ್ರೋದ್ಯಮ ಹಾಗೂ ಇತರೇ ಆಸಕ್ತರು, ಅಭಿಮಾನಿಗಳು, ರಾಜ್ಯ ಹಾಗೂ ದೇಶ- ವಿದೇಶಗಳಿಂದ ಆರ್ಥಿಕ ಸಹಾಯ ಮತ್ತು ದಿನ ಬಳಕೆಯ ಸಾಮಾಗ್ರಿಗಳನ್ನು-ರೇಷನ್ ಕಿಟ್ ಗಳನ್ನು ಪಡೆದು, ಅವುಗಳನ್ನು ಅವಶ್ಯಕತೆ ಇರುವವರಿಗೆ ಹಂಚುತ್ತಿರುವುದಾಗಿ ಮಾಹಿತಿ ಲಭ್ಯವಾಗಿದೆ.
