ರಾಜ್ಯ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಿನ್ನೆ ಮುಕ್ತಾಯಗೊಂಡಿದ್ದು, ಇಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಕೊನೆಯ ದಿನದಂದು 1691 ಆಭ್ಯರ್ಥಿಗಳಿಂದ 1934 ನಾಮಪತ್ರಗಳು ಸಲ್ಲಿಕೆಯಾಗಿವೆ. 1544 ಪುರುಷ ಅಭ್ಯರ್ಥಿಗಳಿಂದ 1 771 ನಾಮಪತ್ರಗಳು, 146 ಮಹಿಳಾ ಅಭ್ಯರ್ಥಿಗಳಿಂದ 162 ಉಮೇದುವಾರಿಕೆ ಸಲ್ಲಿಕೆಯಾಗಿವೆ. ಒಬ್ಬರು ಇತರರು ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ಸಲ್ಲಿಕೆಯಾಗಿರುವ 1934 ನಾಮಪತ್ರಗಳ ಪೈಕಿ ಬಿಜೆಪಿಯಿಂದ 162, ಕಾಂಗ್ರೆಸ್‌ನಿಂದ 157, ಜೆಡಿಎಸ್‌ನಿಂದ 150, ಎಎಪಿ 138, ಬಿಎಸ್‌ಪಿ 95, ಸಿ ಪಿ ಐ ಎಂ 1, ಎನ್ ಪಿ ಪಿ ನಿಂದ 2 ನಾಮಪತ್ರಗಳು ಸಲ್ಲಿಕೆಯಾಗಿವೆ. ನೋಂದಣಿಯಾಗಿರುವ ಮಾನ್ಯತೆ ಪಡೆಯದ ಪಕ್ಷಗಳಿಂದ 337, ಪಕ್ಷೇತರರಿಂದ 892 ನಾಮಪತ್ರಗಳು ಸಲ್ಲಿಕೆಯಾಗಿವೆ.
ಅಧಿಸೂಚನೆ ಪ್ರಕಟವಾದ ದಿನದಿಂದ ಈವರೆಗೆ ಒಟ್ಟು 3632 ಅಭ್ಯರ್ಥಿಗಳಿಂದ 5102 ನಾಮಪತ್ರಗಳು ಸಲ್ಲಿಕೆಯಾಗಿವೆ. 3327 ಪುರುಷ ಅಭ್ಯರ್ಥಿಗಳಿಂದ 4710 ನಾಮಪತ್ರಗಳು ಮತ್ತು 304 ಮಹಿಳಾ ಅಭ್ಯರ್ಥಿಗಳಿಂದ 391 ನಾಮಪತ್ರಗಳು ಸಲ್ಲಿಕೆಯಾಗಿವೆ. ಸಲ್ಲಿಕೆಯಾಗಿರುವ 5102 ನಾಮಪತ್ರಗಳ ಪೈಕಿ ಬಿಜೆಪಿ 707, ಕಾಂಗ್ರೆಸ್ 651, ಜೆಡಿಎಸ್ 455, ಎಎಪಿ 373, ಬಿಎಸ್‌ಪಿ 179, ಸಿ ಪಿ ಐ ಎಂ 5 ಮತ್ತು ಎನ್ ಪಿ ಪಿಯಿಂದ 5 ನಾಮಪತ್ರಗಳು ಸಲ್ಲಿಕೆಯಾಗಿವೆ. ನೋಂದಣಿಯಾಗಿರುವ ಮಾನ್ಯತೆ ಪಡೆಯದ ಪಕ್ಷಗಳಿಂದ 1007, ಪಕ್ಷೇತರರಿಂದ 1720 ನಾಮಪತ್ರಗಳು ಸಲ್ಲಿಕೆಯಾಗಿವೆ.
ನಾಮಪತ್ರ ಹಿಂಪಡೆಯಲು ಇದೇ 24 ಕಡೆಯ ದಿನವಾಗಿದೆ.